ಪಾಂಡವಪುರ ಪಟ್ಟಣದ ಬ್ಯಾಂಕ್‌ನಿಂದ ಡ್ರಾ ಮಾಡಿ ಸ್ಕೂಟರ್ ಡಿಕ್ಕಿಯಲ್ಲಿ 5 ಲಕ್ಷ ರು. ಕಳವು

KannadaprabhaNewsNetwork | Updated : Nov 28 2024, 05:24 AM IST

ಸಾರಾಂಶ

ಪಾಂಡವಪುರ ಪಟ್ಟಣದ ಬ್ಯಾಂಕ್ ಆಫ್ ಬರೋಡಾ ಬ್ಯಾಂಕ್‌ನಿಂದ ಡ್ರಾ ಮಾಡಿ ಸ್ಕೂಟರ್ ಡಿಕ್ಕಿಯಲ್ಲಿರಿಸಿದ್ದ 5 ಲಕ್ಷ ರು. ನಗದನ್ನು ಕಳ್ಳರು ಕದ್ದೊಯ್ದಿರುವ ಘಟನೆ ಪಟ್ಟಣದ ಪ್ರಕಾಶ್ ಗ್ಯಾಸ್ ಏಜೆನ್ಸಿ ಅಂಗಡಿ ಬಳಿ ಶುಕ್ರವಾರ ನಡೆದಿದೆ. ಪಟ್ಟಣದ ಆಲೆಮನೆ ಬಲರಾಂ ಅವರ ಸಹೋದರ ಶಿವಕುಮಾರ್ 5 ಲಕ್ಷ ರು. ಕಳೆದುಕೊಂಡವರು.

 ಪಾಂಡವಪುರ : ಪಟ್ಟಣದ ಬ್ಯಾಂಕ್ ಆಫ್ ಬರೋಡಾ ಬ್ಯಾಂಕ್‌ನಿಂದ ಡ್ರಾ ಮಾಡಿ ಸ್ಕೂಟರ್ ಡಿಕ್ಕಿಯಲ್ಲಿರಿಸಿದ್ದ 5 ಲಕ್ಷ ರು. ನಗದನ್ನು ಕಳ್ಳರು ಕದ್ದೊಯ್ದಿರುವ ಘಟನೆ ಪಟ್ಟಣದ ಪ್ರಕಾಶ್ ಗ್ಯಾಸ್ ಏಜೆನ್ಸಿ ಅಂಗಡಿ ಬಳಿ ಶುಕ್ರವಾರ ನಡೆದಿದೆ.

ಪಟ್ಟಣದ ಆಲೆಮನೆ ಬಲರಾಂ ಅವರ ಸಹೋದರ ಶಿವಕುಮಾರ್ 5 ಲಕ್ಷ ರು. ಕಳೆದುಕೊಂಡವರು.

ಶಿವಕುಮಾರ್ ಅವರು ಸೈಟ್ ಮಾರಾಟ ಹಣವನ್ನು ಪಟ್ಟಣದ ಬ್ಯಾಂಕ್ ಆಪ್ ಬರೋಡಾದಲ್ಲಿ ಜಮೆ ಮಾಡಿದ್ದರು. ಕಳೆದ ಶುಕ್ರವಾರ ಬ್ಯಾಂಕ್‌ಗೆ ತೆರಳಿದ್ದ ಶಿವಕುಮಾರ್ 5 ಲಕ್ಷ ರು. ಗಳನ್ನು ಡ್ರಾ ಮಾಡಿಕೊಂಡು ಬಳಿಕ ಕೆನೆಟಿಕ್ ಹೊಂಡಾ ಸ್ಕೂಟರ್ ಡಿಕ್ಕಿಯಲ್ಲಿರಿಸಿ ಪ್ರಕಾಶ್ ಗ್ಯಾಸ್ ಏಜೆನ್ಸಿ ಅಂಗಡಿ ಬಳಿ ಮಂಜುನಾಥ್ ಸ್ಟೋರ್‌ಗೆ ಹೋಗಿ ಬರುವಷ್ಟರಲ್ಲಿ ಕಳ್ಳರು ಡಿಕ್ಕಿಯಲ್ಲಿದ್ದ 5 ಲಕ್ಷರು. ಹಣವನ್ನು ಕಳವು ಮಾಡಿ ಪರಾರಿಯಾಗಿದ್ದಾರೆ. ಈ ಸಂಬಂಧ ಪಾಂಡವಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿ ಗುರುತು ಪತ್ತೆ

ಮದ್ದೂರು:  ತಾಲೂಕಿನ ಗೆಜ್ಜಲಗೆರೆ ಕೈಗಾರಿಕಾ ಪ್ರದೇಶದ ರಾಷ್ಟ್ರೀಯ ಹೆದ್ದಾರಿಯ ಸರ್ವಿಸ್ ರಸ್ತೆಯಲ್ಲಿ ಆಟೋ ಮತ್ತು ಕಾರ್ ನಡುವೆ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟಿದ್ದ ವ್ಯಕ್ತಿ ಗುರುತು ಪತ್ತೆಯಾಗಿದೆ.

ರಾಮನಗರ ತಾಲೂಕು ಕೂಟಗಲ್ ಹೊಸೂರಿನ ವೆಂಕಟೇಶ್ (50) ಮೃತಪಟ್ಟ ವ್ಯಕ್ತಿ. ಸ್ವಗ್ರಾಮದಿಂದ ಮದ್ದೂರಿಗೆ ಬಂದು ಮಂಡ್ಯ ತಾಲೂಕಿನ ತುಂಬುಕೆರೆ ಗ್ರಾಮದಲ್ಲಿ ನಡೆಯಲಿದ್ದ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಟೋರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದನು.

ಆಟೋ ಸರ್ವಿಸ್ ರಸ್ತೆಯಲ್ಲಿ ವಿರುದ್ಧ ದಿಕ್ಕಿನಿಂದ ವೇಗವಾಗಿ ಚಲಿಸುತ್ತಿದ್ದಾಗ ಎದುರಿನಿಂದ ಬಂದ ಕಾರಿಗೆ ಡಿಕ್ಕಿಯಾಗಿ ಅಪಘಾತ ಸಂಭವಿಸಿತ್ತು. ತೀವ್ರ ಗಾಯಗೊಂಡಿರುವ ಹೊನಗಳ್ಳಿ ಮಠದ ಭಾಗ್ಯಮ್ಮ, ತಲೆಮರೆಸಿಕೊಂಡಿದ್ದ ಆಟೋ ಚಾಲಕ ಬೆಂಗಳೂರು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದವರು ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಸಂಚಾರಿ ಠಾಣೆ ಪೊಲೀಸರು ತಿಳಿಸಿದ್ದಾರೆ.

Share this article