₹20 ಲಕ್ಷ ಮೌಲ್ಯದ 520 ಮೊಬೈಲ್‌ಗಳು ಪತ್ತೆ

KannadaprabhaNewsNetwork | Published : Oct 27, 2023 12:30 AM

ಸಾರಾಂಶ

₹20 ಲಕ್ಷ ಮೌಲ್ಯದ 520 ಮೊಬೈಲ್‌ಗಳು ಪತ್ತೆಸಿಇಐಆರ್ ಪೋರ್ಟಲ್ ಮೂಲಕ ದೊರೆತ ಮೊಬೈಲ್‌ ವಾರಸುದಾರರಿಗೆ ಹಿಂದಿರುಗಿಸಿದ ಎಸ್‌ಪಿ ಉಮಾ ಪ್ರಶಾಂತ್
ಸಿಇಐಆರ್ ಪೋರ್ಟಲ್ ಮೂಲಕ ದೊರೆತ ಮೊಬೈಲ್‌ ವಾರಸುದಾರರಿಗೆ ಹಿಂದಿರುಗಿಸಿದ ಎಸ್‌ಪಿ ಉಮಾ ಪ್ರಶಾಂತ್ ಕನ್ನಡಪ್ರಭ ವಾರ್ತೆ ದಾವಣಗೆರೆ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಗುರುವಾರ ಪೊಲೀಸ್ ಆಧೀಕ್ಷಕರಾದ ಉಮಾ ಪ್ರಶಾಂತ್ ಅಧ್ಯಕ್ಷತೆಯಲ್ಲಿ ಸಿಇಐಆರ್ ಪೋರ್ಟಲ್ ಮೂಲಕ ಪತ್ತೆಯಾದ ಮೊಬೈಲ್‌ಗಳನ್ನು ವಾರಸುದಾರರಿಗೆ ಹಿಂದಿರುಗಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕುರಿತು ಪೊಲೀಸ್ ಅಧೀಕ್ಷಕರಾದ ಉಮಾ ಪ್ರಶಾಂತ್ ಮಾತನಾಡಿ, ಜಿಲ್ಲೆಯಲ್ಲಿ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಮೊಬೈಲ್ ಕಳೆದುಕೊಂಡವರು ಕೂಡಲೇ ನೂತನ ಸಿಇಐಆರ್ (ಸೆಂಟ್ರಲ್ ಇಕ್ವಿಪ್‌ಮೆಂಟ್ ಐಡೆಂಟಿಟಿ ರಿಜಿಸ್ಟರ್) ಪೋರ್ಟಲ್‌ಗೆ ಭೇಟಿ ನೀಡಿ ತಮ್ಮ ಮೊಬೈಲ್‌ನ ಸಂಪೂರ್ಣ ಮಾಹಿತಿ ನೀಡಿ ನೋಂದಾಯಿಸಿ ತಮ್ಮ ಮೊಬೈಲ್‌ ಅನ್ನು ಬ್ಲಾಕ್ ಮಾಡಿದ್ದು, ನಂತರ ಸದರಿ ಮೊಬೈಲ್‌ಗಳಲ್ಲಿ ಹಲವು ಮೊಬೈಲ್‌ಗಳನ್ನು ನೂತನ ಸಿಇಐಆರ್ ವೆಬ್ ಪೋರ್ಟಲ್ ಮೂಲಕ ಪತ್ತೆ ಮಾಡಲಾಗಿದೆ ಎಂದು ತಿಳಿಸಿದರು. ನೂತನ ಸಿಇಐಆರ್ ಸಿಇಐಆರ್ ಪೋರ್ಟಲ್ ವೆಬ್ ಪೋರ್ಟಲ್ ಮೂಲಕ ಪತ್ತೆಯಾದ ಸುಮಾರು 20 ಲಕ್ಷ ರು. ಮೌಲ್ಯದ ವಿವಿಧ ಕಂಪನಿಯ ಒಟ್ಟು 130 ಮೊಬೈಲ್‌ಗಳನ್ನು ಮೊಬೈಲ್ ವಾರಸುದಾರರಿಗೆ ಹಿಂದಿರುಗಿಸಲಾಗುತ್ತಿದೆ ಎಂದರು. ಜಿಲ್ಲೆಯಲ್ಲಿ ಮಾರ್ಚ್ ತಿಂಗಳಿಂದ ಇಲ್ಲಿಯವರೆಗೆ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಮೊಬೈಲ್ ಕಳೆದುಕೊಂಡವರು ಕೂಡಲೇ ನೂತನ ಸಿಇಐಆರ್ ಪೋರ್ಟಲ್‌ಗೆ ಬೇಟಿ ನೀಡಿ ತಮ್ಮ ಮೊಬೈಲ್‌ನ ಸಂಪೂರ್ಣ ಮಾಹಿತಿ ನೀಡಿ ನೊಂದಾಯಿಸಿದ್ದು, ಮೊಬೈಲ್‌ಗಳಲ್ಲಿ ಸಿಇಐಆರ್ ಪೋರ್ಟಲ್ ಮೂಲಕ 3290 ಮೊಬೈಲ್‌ಗಳನ್ನು ಬ್ಲಾಕ್ ಮಾಡಲಾಗಿದ್ದು, ಅವುಗಳಲ್ಲಿ ಈಗಾಗಲೇ 390 ಮೊಬೈಲ್‌ಗಳನ್ನು ಮೊಬೈಲ್ ವಾರಸುದಾರರಿಗೆ ಹಿಂತಿರುಗಿಸಲಾಗಿದ್ದು, ಈ ದಿನ 130 ವಿವಿಧ ಕಂಪನಿಯ ಮೊಬೈಲ್‌ಗಳನ್ನು ಹಿಂದುರುಗಿಸಲಾಗುತ್ತಿದೆ. ಈವರೆಗೂ ಒಟ್ಟು 520 ಮೊಬೈಲ್‌ಗಳನ್ನು ವಾರಸುದಾರರಿಗೆ ಹಿಂದಿರುಗಿಸಲಾಗಿದೆ ಎಂದು ಹೇಳಿದರು. ಈ ಕಾರ್ಯಕ್ರಮದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಜಯಕುಮಾರ ಎಂ.ಸಂತೋಷ್, ಸಿಇಎನ್ ಪೊಲೀಸ್ ನಿರೀಕ್ಷಕ ಪಿ.ಪ್ರಸಾದ, ಜಿಲ್ಲಾ ಪೊಲೀಸ್ ಕಛೇರಿಯ ಪೊಲೀಸ್ ನಿರೀಕ್ಷಕ ರುದ್ರಪ್ಪ ಹಾಗೂ ಪೊಲೀಸ್ ಸಿಬ್ಬಂದಿಗಳು ಹಾಗೂ ಮೊಬೈಲ್ ವಾರಸುದಾರರು ಉಪಸ್ಥಿತರಿದ್ದರು. - - - 26ಕೆಡಿವಿಜಿ42ಃದಾವಣಗೆರೆಯಲ್ಲಿ ಜಿಲ್ಲಾ ಪೊಲೀಸ್ ಆಧೀಕ್ಷಕರಾದ ಉಮಾ ಪ್ರಶಾಂತ್ ಸಿಇಐಆರ್ ಪೋರ್ಟಲ್ ಮೂಲಕ ಪತ್ತೆಯಾದ ಮೊಬೈಲ್‌ಗಳ ಕುರಿತು ಮಾಹಿತಿ ನೀಡಿದರು.

Share this article