ರಾಜಧಾನಿ ಬೆಂಗಳೂರಿನಲ್ಲಿ ಅಬ್ಬರಿಸಿದ ಮಳೆ : ಒಂದೇ ದಿನ ಗಾಳಿಯಿಂದ 65 ಮರಗಳು ಬುಡಮೇಲು

KannadaprabhaNewsNetwork |  
Published : Mar 24, 2025, 01:15 AM ISTUpdated : Mar 24, 2025, 04:29 AM IST
ಜೆಸಿ ರಸ್ತೆಯಲ್ಲಿ ಧರೆಗೆ ಉರುಳಿರುವ ಮರ. | Kannada Prabha

ಸಾರಾಂಶ

ರಾಜಧಾನಿ ಬೆಂಗಳೂರಿನಲ್ಲಿ ಶನಿವಾರ ಅಬ್ಬರಿಸಿದ ಮಳೆ-ಗಾಳಿಯಿಂದ ಸುಮಾರು 65 ಮರಗಳು ಧರೆಗುರುಳಿವೆ. 202 ಮರದ ರೆಂಬೆ-ಕೊಂಬೆ ಮುರಿದು ಬಿದ್ದಿದ್ದು, ಇವುಗಳನ್ನು ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.

 ಬೆಂಗಳೂರು :  ರಾಜಧಾನಿ ಬೆಂಗಳೂರಿನಲ್ಲಿ ಶನಿವಾರ ಅಬ್ಬರಿಸಿದ ಮಳೆ-ಗಾಳಿಯಿಂದ ಸುಮಾರು 65 ಮರಗಳು ಧರೆಗುರುಳಿವೆ. 202 ಮರದ ರೆಂಬೆ-ಕೊಂಬೆ ಮುರಿದು ಬಿದ್ದಿದ್ದು, ಇವುಗಳನ್ನು ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.

ಶನಿವಾರ ಬೆಂಗಳೂರಿನ ಯಲಹಂಕ, ಮಹದೇವಪುರ, ದಾಸರಹಳ್ಳಿ ಹಾಗೂ ಬೆಂಗಳೂರಿನ ಪೂರ್ವ ಭಾಗದಲ್ಲಿ ಭಾರೀ ಮಳೆ ಸುರಿದು ಜನಜೀವನವನ್ನು ಅಸ್ತ ವ್ಯಸ್ತಗೊಳಿಸಿತ್ತು. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯ ಕೋಗಿಲು ಕ್ರಾಸ್‌ ಬಳಿ ಭಾರೀ ಪ್ರಮಾಣ ನೀರು ನಿಂತುಕೊಂಡು ವಾಹನ ಸಂಚಾರದಲ್ಲಿ ಭಾರೀ ವ್ಯತ್ಯಯ ಉಂಟಾಗಿತ್ತು. ಜತೆಗೆ, ವೀರಣ್ಣನಪಾಳ್ಯ, ಜೋಗಪ್ಪ ಲೇಔಟ್‌, ಮಹದೇವಪುರದ ಸಜ್ಜಾಪುರ ಮುಖ್ಯ ರಸ್ತೆ, ಔಟರ್‌ ರಿಂಗ್‌ ರೋಡ್‌, ಇಬ್ಬಲು ಜಂಕ್ಷನ್‌ ಹಾಗೂ ಪೂರ್ವ ವಲಯದ ನಾಗವಾರದಲ್ಲಿ ನೀರು ನಿಂತು ಉಂಟಾಗಿದ್ದ ಸಮಸ್ಯೆಯನ್ನು ಬಿಬಿಎಂಪಿ ಪರಿಹಾರ ಮಾಡಿದೆ.

250ಕ್ಕೂ ಅಧಿಕ ಮರ ಹಾಗೂ ರಂಬೆ ಧರೆಗೆ:

ಒಂದೇ ದಿನದ ಮಳೆಗೆ 65 ಮರಗಳು ಸಂಪೂರ್ಣವಾಗಿ ಬುಡ ಮೇಲಾಗಿ ಧರೆಗುರುಳಿವೆ, 202 ಮರದ ರೆಂಬೆ-ಕೊಂಬೆ ಬಿದ್ದಿವೆ. ಈ ಪೈಕಿ 62 ಮರ ಹಾಗೂ 177 ಮರದ ರೆಂಬೆಕೊಂಬೆ ತೆರವುಗೊಳಿಸಲಾಗಿದೆ. ವಾಹನ ಸಂಚಾರಕ್ಕೆ ತೊಂದರೆ ಉಂಟಾಗುವ ಸ್ಥಳದಲ್ಲಿ ಮರ ಹಾಗೂ ರಂಬೆಕೊಂಬೆಗಳನ್ನು ಆದ್ಯತೆಯ ಮೇರೆಗೆ ತೆರವುಗೊಳಿಸಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮೃತ ಮಗುವಿನ ಕುಟುಂಬಕ್ಕೆ ಪರಿಹಾರ

ಶನಿವಾರ ಮರದ ಕೊಂಬೆ ಬಿದ್ದು ಮೃತಪಟ್ಟ ತಮಿಳುನಾಡು ಮೂಲದ ಮಗುವಿನ ಕುಟುಂಬಕ್ಕೆ ಬಿಬಿಎಂಪಿಯಿಂದ ಪರಿಹಾರ ನೀಡಲು ತೀರ್ಮಾನಿಸಲಾಗಿದ್ದು, ಸೋಮವಾರ ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಬಿಬಿಎಂಪಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮಾರ್ಚಲ್ಲಿ 24 ತಾಸಿನಲ್ಲಿ ಬಿದ್ದ 2ನೇ ಹೆಚ್ಚಿನ ಮಳೆ

ಶನಿವಾರ ಯಲಹಂಕ ವಾಯುನೆಲೆಯಲ್ಲಿ ಬರೋಬ್ಬರಿ 6 ಸೆ.ಮೀ ನಷ್ಟು ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಬೆಂಗಳೂರಿನಲ್ಲಿ ಈವರೆಗೆ ಮಾರ್ಚ್‌ ತಿಂಗಳಿನ 24 ಗಂಟೆಯಲ್ಲಿ ಬಿದ್ದ ಎರಡನೇ ಅತಿ ಹೆಚ್ಚಿನ ಪ್ರಮಾಣ ಮಳೆಯಾಗಿದೆ.

ಬೆಂಗಳೂರಿನ ಇತಿಹಾಸದಲ್ಲಿ 1981ರ ಮಾ.28 ರಂದು 6.1 ಸೆಂ.ಮೀ ಮಳೆಯಾಗಿರುವುದು ಈವರೆಗಿನ ಸಾರ್ವಕಾಲಿಕ ದಾಖಲೆಯ ಮಳೆಯಾಗಿದೆ. ಅದನ್ನು ಹೊರತು ಪಡಿಸಿದರೆ ಶನಿವಾರ ಯಲಹಂಕ ವಾಯುನೆಲೆಯಲ್ಲಿ ದಾಖಲಾಗಿರುವ ಮಳೆಯ ಪ್ರಮಾಣ ಎರಡನೇ ಅತಿ ಹೆಚ್ಚಿನ ಮಳೆಯಾಗಿದೆ.

ಕಳೆದ 10 ವರ್ಷದಲ್ಲಿ ಬೆಂಗಳೂರಿನಲ್ಲಿ ಇಷ್ಟೊಂದು ಪ್ರಮಾಣದ ಮಳೆ ಬಿದ್ದ ಇತಿಹಾಸವಿಲ್ಲ. 2017ರ ಮಾ.17ರಂದು 3.8 ಸೆಂ.ಮೀ, 2017ರ ಮಾ.8ರಂದು 3.6 ಸೆಂ.ಮೀ. 20215ರ ಮಾ.3ರಂದು 2.2 ಸೆಂ.ಮೀ, 2020ರ ಮಾ.24ರಂದು 1.4 ಸೆಂ.ಮೀ ಮಳೆಯಾಗಿತ್ತು. ಉಳಿದ ವರ್ಷದಲ್ಲಿ ಒಂದು ಸೆಂ.ಮೀ.ಗೂ ಕಡಿಮೆ ಮಳೆ ದಾಖಲಾಗಿದೆ.

ಶನಿವಾರ ಮರ ಹಾಗೂ ರೆಂಬೆ-ಕೊಂಬೆ ಬಿದ್ದ ವಿವರ

ವಲಯಮರರೆಂಬೆ-ಕೊಂಬೆ

ಯಲಹಂಕ2768

ಪೂರ್ವ1048

ದಕ್ಷಿಣ1648

ಪಶ್ಚಿಮ19

ಆರ್‌ಆರ್‌ನಗರ24

ಮಹದೇವಪುರ13

ಬೊಮ್ಮನಹಳ್ಳಿ822

ಒಟ್ಟು65202

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ಅಕ್ರಮ ಕೃತ್ಯಗಳಿಗೆ ‘ದಂಡ’ ವಿಧಿಸಿ ಮುಚ್ಚು ಹಾಕುತ್ತಿದ್ದ ಅಪಾರ್ಟ್ಮೆಂಟ್ ವಿರುದ್ಧ ಕೇಸು
ವಿವಾಹ ಪವಿತ್ರವಾದ ಶಾಶ್ವತ ಸಮ್ಮಿಲನ : ಹೈಕೋರ್ಟ್‌