ಸಿಐಡಿಗೆ ಅಪರಾಧ ಪ್ರಕರಣಗಳ ವರ್ಗಕ್ಕೆ 8 ಅಂಶಗಳ ಮಾರ್ಗಸೂಚಿ

KannadaprabhaNewsNetwork |  
Published : Jun 20, 2025, 01:20 AM ISTUpdated : Jun 20, 2025, 06:39 AM IST
Dr Ma Saleem

ಸಾರಾಂಶ

ಸ್ಥಳೀಯ ಠಾಣೆಗಳಲ್ಲಿ ದಾಖಲಾಗುವ ಅಪರಾಧ ಪ್ರಕರಣಗಳನ್ನು ಹೆಚ್ಚಿನ ತನಿಖೆಗಾಗಿ ಅಪರಾಧ ತನಿಖಾ ಇಲಾಖೆಗೆ (ಸಿಐಡಿ) ವರ್ಗಾವಣೆ ಮಾಡುವ ಕುರಿತು ಮಾರ್ಗಸೂಚಿಯನ್ನು ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಸಲೀಂ ಜಾರಿಗೊಳಿಸಿದ್ದಾರೆ.

  ಬೆಂಗಳೂರು :  ಸ್ಥಳೀಯ ಠಾಣೆಗಳಲ್ಲಿ ದಾಖಲಾಗುವ ಅಪರಾಧ ಪ್ರಕರಣಗಳನ್ನು ಹೆಚ್ಚಿನ ತನಿಖೆಗಾಗಿ ಅಪರಾಧ ತನಿಖಾ ಇಲಾಖೆಗೆ (ಸಿಐಡಿ) ವರ್ಗಾವಣೆ ಮಾಡುವ ಕುರಿತು ಮಾರ್ಗಸೂಚಿಯನ್ನು ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಸಲೀಂ ಜಾರಿಗೊಳಿಸಿದ್ದಾರೆ.

ಈ ಸಂಬಂಧ ಸುತ್ತೋಲೆ ಹೊರಡಿಸಿದ್ದು, 8 ಅಂಶಗಳ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಅನುಸರಿಸುವಂತೆ ಅಧಿಕಾರಿಗಳಿಗೆ ಡಿಜಿಪಿ ನಿರ್ದೇಶಿಸಿದ್ದಾರೆ.

ಕಾರ್ಯವಿಧಾನಗಳು:

1.ಸಿಐಡಿಗೆ ವರ್ಗಾವಣೆ ಬಗ್ಗೆ ಪೊಲೀಸ್ ಪ್ರಧಾನ ಕಚೇರಿಯ ಆದೇಶ ಸ್ವೀಕರಿಸಿದ ಘಟಕದ ಮುಖ್ಯಸ್ಥರು, ಕೂಡಲೇ ಸಂಬಂಧಿಸಿದ ತನಿಖಾಧಿಕಾರಿಗಳಿಗೆ ಮಾಹಿತಿ ನೀಡಬೇಕು. ತನಿಖೆಯಲ್ಲಿ ಸಂಗ್ರಹಿಸಿದ ಸಾಕ್ಷ್ಯಾಧಾರಗಳು ಸೇರಿ ದಾಖಲೆಗಳನ್ನು ಮೂರು ದಿನಗಳೊಳಗಾಗಿ ತನ್ನ ಪರಿಶೀಲನೆಗೆ ಸೂಚಿಸಬೇಕು.

2.ಸ್ಥಳೀಯ ತನಿಖಾಧಿಕಾರಿಗಳು ತನ್ನ ಘಟಕದ ಮುಖ್ಯಸ್ಥರಿಂದ ಸೂಚನೆ ಮತ್ತು ಆದೇಶಗಳನ್ನು ಸ್ವೀಕರಿಸಿದ ತಕ್ಷಣ ಈ ಕೆಳಕಂಡ ಕ್ರಮಗಳನ್ನು ಕೈಗೊಳ್ಳಬೇಕು. (ಎ) ಪ್ರಕರಣದ ಕೇಸ್ ಡೈರಿ (ಬಿ)ಪೊಲೀಸ್ ಐಟಿ ತನಿಖೆಯ ಕ್ರಮಗಳು (ಸಿ)

ಬಾಕಿ ಇರುವ ತನಿಖಾಕ್ರಮ ಮತ್ತು ವಿಷಯಗಳನ್ನು ಪಟ್ಟಿ ಮಾಡಬೇಕು.

3.ಸ್ಥಳೀಯ ತನಿಖಾಧಿಕಾರಿಗಳು ತನಿಖಾ ಕಡತವನ್ನು ಪರಿವಿಡಿಯೊಂದಿಗೆ ಕ್ರಮಬದ್ಧವಾಗಿ ಸಿದ್ಧಗೊಳಿಸಬೇಕು

4.ಕಾಲಾನುಸಾರ ತನ್ನ ಹಿಂದಿನ ತನಿಖಾಧಿಕಾರಿ ಹಾಗೂ ತಾನು ಕೈಗೊಂಡ ತನಿಖೆ ಕುರಿತಂತೆ ಮತ್ತು ಬಾಕಿ ಇರುವ ತನಿಖೆ ಕ್ರಮ ಮತ್ತು ವಿಷಯಗಳನ್ನು ಒಳಗೊಂಡ ಒಂದು ವರದಿಯನ್ನು ಸಿದ್ಧಪಡಿಸಿಕೊಂಡು ತನ್ನ ಘಟಕದ ಮುಖ್ಯಸ್ಥರಿಗೆ ಪರಿಶೀಲನೆಗಾಗಿ ಸಲ್ಲಿಸಬೇಕು.

5.ಘಟಕದ ಮುಖ್ಯಸ್ಥರು ಆ ವರದಿ ಸ್ವೀಕರಿಸಿದ 2 ದಿನಗಳೊಳಗೆ ಸಿಐಡಿ ಘಟಕದ ಪೊಲೀಸ್ ಅಧೀಕ್ಷಕರು ಆಡಳಿತ ಇವರನ್ನು ಸಂಪರ್ಕಿಸಿ, ಪ್ರಕರಣದ ತನಿಖೆಯನ್ನು ಸಿಐಡಿಗೆ ವರ್ಗಾಯಿಸಿದ ಬಗ್ಗೆ ಮತ್ತು ಸ್ಥಳೀಯ ತನಿಖಾಧಿಕಾರಿಗಳೊಂದಿಗೆ ಪ್ರಕರಣವನ್ನು ಹಸ್ತಾಂತರಿಸುವ ಪೂರ್ವ ಸಭೆಯಲ್ಲಿ ಚರ್ಚಿಸಲು ದಿನಾಂಕ ನಿಗದಿಪಡಿಸಬೇಕು.

6.ಸಿಐಡಿ ಘಟಕದ ಪೊಲೀಸ್ ಅಧೀಕ್ಷಕರು (ಆಡಳಿತ) ಅವರು, ತನಿಖೆ ಕಡತದ ಹಸ್ತಾಂತರ ಪೂರ್ವಭಾವಿ ಸಭೆಯ ದಿನಾಂಕ ನಿಗದಪಡಿಸಬೇಕು. ಈ ಸಭೆಯಲ್ಲಿ ಹಾಜರಾಗಿ ಸ್ಥಳೀಯ ಪೊಲೀಸ್ ಅಧಿಕಾರಿಗಳು ಕೈಗೊಂಡ ತನಿಖಾ ಕ್ರಮಗಳು, ಸಂಗ್ರಹಿಸಿದ ಸಾಕ್ಷ್ಯಾಧಾರಗಳು ಹಾಗೂ ಸಂಗತಿಗಳ ಸಿಐಡಿಗೆ ವಿವರಿಸಬೇಕು.

7.ಈ ಸಭೆಯಲ್ಲಿ ಹಾಜರಿರುವ ಸಿಐಡಿ ಅಧಿಕಾರಿಗಳಿಗೆ ತನಿಖೆಯಲ್ಲಿ ಕಡ್ಡಾಯವಿರುವ ಯಾವುದಾದರೂ ಕಾನೂನುಗಳನ್ನು ಪಾಲಿಸದೇ ಇರುವುದು ಕಂಡುಬಂದಲ್ಲಿ ಅಥವಾ ನ್ಯಾಯಾಲಯದಲ್ಲಿ ತಡೆಯಾಜ್ಞೆ ಆದೇಶವಾಗಿದ್ದಲ್ಲಿ ಅಥವಾ ಸರ್ಕಾರದಿಂದ ಅಥವಾ ಪೊಲೀಸ್ ಪ್ರಧಾನ ಕಚೇರಿಯಿಂದ ಪ್ರಕರಣ ಹಸ್ತಾಂತರ ತಡೆಯುವ ಯಾವುದೇ ಸೂಚನೆಗಳಿದ್ದರೆ ಗಮನಕ್ಕೆ ತರಬೇಕು. ಬಳಿಕ ಮುಂದಿನ ಆದೇಶದ ಬಳಿಕ ಪ್ರಕರಣಗಳನ್ನು ಸಿಐಡಿ ಸ್ವೀಕರಿಸಬೇಕು.

8.ಸಿಐಡಿ ಸ್ವೀಕರಿಸದ ಪ್ರಕರಣಗಳನ್ನು ಸ್ಥಳೀಯ ಪೊಲೀಸರು ತನಿಖೆ ಮುಂದುವರೆಸಬೇಕು.

PREV
Read more Articles on

Recommended Stories

ಟೆಕಿಗೆ 24 ತಾಸು ಡಿಜಿಟೆಲ್‌ ಅರೆಸ್ಟ್‌ ಮಾಡಿ 34.69 ಲಕ್ಷ ಸುಲಿಗೆ
ವೆಬ್ ಸಿರೀಸ್ ನೋಡಿ ಗಾಯಕಿ ಪುತ್ರ ಆತ್ಮ*ತ್ಯೆ : ಯಾವುದದು ?