;Resize=(412,232))
ಬೆಂಗಳೂರು : ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್ ಪುಸ್ತಕದ ಮೊರೆ ಹೋಗಿದ್ದು, ಆರೋಪಿ ಪವಿತ್ರಗೌಡ ಬರವಣಿಗೆಯ ಮೊರೆ ಹೋಗಿದ್ದಾರೆ. ಜೈಲಿನಲ್ಲಿರುವ ದರ್ಶನ್, ಕಾಲ ಕಳೆಯಲು ಪುಸ್ತಕದ ಮೊರೆ ಹೋಗಿದ್ದಾರೆ. ಸಹ ಕೈದಿಗಳೊಡನೆ ಒಂದೇ ಬ್ಯಾರಕ್‌ನಲ್ಲಿದ್ದು, ವಾರಕ್ಕೆ ಎರಡು- ಮೂರು ಪುಸ್ತಕ ಓದುತ್ತಿರುವುದಾಗಿ ಮೂಲಗಳು ತಿಳಿಸಿವೆ.
ಹತ್ಯೆ ಪ್ರಕರಣದಲ್ಲಿ ಮೊದಲ ಆರೋಪಿಯಾಗಿರುವ ಪವಿತ್ರಾಗೌಡ ಸಹ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದು, ಇದೀಗ ಅವರು ಬರವಣಿಗೆಯ ಮೊರೆ ಹೋಗಿದ್ದಾರೆ. ಜೈಲು ಸಿಬ್ಬಂದಿ ಬಳಿ ಖಾಲಿ ಹಾಳೆ ಹಾಗೂ ಪೆನ್ಸಿಲ್ ಪಡೆದು ಬರೆಯ ತೊಡಗಿದ್ದಾರೆ. ಯೋಗ ದಿನಾಚರಣೆ ಹಿನ್ನೆಲೆಯಲ್ಲಿ ಜೈಲಿನಲ್ಲಿ ನಡೆಸುತ್ತಿರುವ ವ್ಯಾಯಾಮ ಅಭ್ಯಾಸಕ್ಕೂ ಪವಿತ್ರಗೌಡ ಹೋಗುತ್ತಿಲ್ಲ ಎಂದು ಮೂಲಗಳು ತಿಳಿಸಿವೆ.
ಹತ್ಯೆ ಪ್ರಕರಣದಲ್ಲಿ ದರ್ಶನ್, ಪವಿತ್ರಗೌಡ, ಅನುಕುಮಾರ್, ಲಕ್ಷ್ಮಣ್, ವಿನಯ್, ಜಗದೀಶ್, ಪ್ರದೂಷ್, ನಾಗರಾಜು ಆರ್., ಪವನ್, ರಾಘವೇಂದ್ರ, ನಂದೀಶ್, ಧನರಾಜ್, ದೀಪಕ್, ರವಿ, ಕಾರ್ತಿಕ್, ನಿಖಿಲ್, ಕೇಶವಮೂರ್ತಿ ಸೇರಿ ಒಟ್ಟು 17 ಮಂದಿ ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಲಾಗಿತ್ತು. ಸದ್ಯ ದರ್ಶನ್, ಪವಿತ್ರಗೌಡ, ಅನುಕುಮಾರ್, ಲಕ್ಷ್ಮಣ್ ಹಾಗೂ ಪ್ರದೋಷ್ ಹಾಗೂ ಜಗದೀಶ್ ಸದ್ಯ ಜೈಲಿನಲ್ಲಿದ್ದಾರೆ. ಉಳಿದ ಆರೋಪಿಗಳು ಜಾಮೀನಿನ ಮೇಲೆ ಹೊರಗಿದ್ದಾರೆ.