ಬಿಎಂಟಿಸಿ ಸ್ಟ್ಯಾಂಡ್‌ನಲ್ಲಿ ಪ್ರಯಾಣಿಕರ ಮೊಬೈಲ್‌ ಕದಿಯುತಿದ್ದವರ ಸೆರೆ

KannadaprabhaNewsNetwork |  
Published : Aug 01, 2025, 02:00 AM ISTUpdated : Aug 01, 2025, 07:45 AM IST
smuggling  mobile phone

ಸಾರಾಂಶ

  ಬಿಎಂಟಿಸಿ ಬಸ್‌ ನಿಲ್ದಾಣಗಳಲ್ಲಿ ಪ್ರಯಾಣಿಕರ ಸೋಗಿನಲ್ಲಿ ತೆರಳಿ ಸಹ ಪ್ರಯಾಣಿಕರ ಮೊಬೈಲ್ ದೋಚುತ್ತಿದ್ದರುಗಳಲ್ಲಿ ಪ್ರಯಾಣಿಕರ ಮೊಬೈಲ್ ಎಗರಿಸುತ್ತಿದ್ದ 6 ಮಂದಿ ಖದೀಮರ ಗ್ಯಾಂಗ್‌ವೊಂದನ್ನು ಎಲೆಕ್ಟ್ರಾನಿಕ್ ಸಿಟಿ ಠಾಣೆ ಪೊಲೀಸರು ಸೆರೆ ಹಿಡಿದಿದ್ದಾರೆ.

 ಬೆಂಗಳೂರು :  ಬಿಎಂಟಿಸಿ ಬಸ್‌ ಬಿಎಂಟಿಸಿ ಬಸ್‌ ನಿಲ್ದಾಣಗಳಲ್ಲಿ ಪ್ರಯಾಣಿಕರ ಸೋಗಿನಲ್ಲಿ ತೆರಳಿ ಸಹ ಪ್ರಯಾಣಿಕರ ಮೊಬೈಲ್ ದೋಚುತ್ತಿದ್ದರುಗಳಲ್ಲಿ ಪ್ರಯಾಣಿಕರ ಮೊಬೈಲ್ ಎಗರಿಸುತ್ತಿದ್ದ 6 ಮಂದಿ ಖದೀಮರ ಗ್ಯಾಂಗ್‌ವೊಂದನ್ನು ಎಲೆಕ್ಟ್ರಾನಿಕ್ ಸಿಟಿ ಠಾಣೆ ಪೊಲೀಸರು ಸೆರೆ ಹಿಡಿದಿದ್ದಾರೆ.

ಆಂಧ್ರಪ್ರದೇಶದ ಕಡಪ ಜಿಲ್ಲೆಯ ನಾಗನುರಿ ಕುಮಾರ್, ಶಿವಶಂಕರ್‌, ಬೆಳಗಾವಿ ಜಿಲ್ಲೆಯ ಘಟ್ಟಪ್ರಭಾ ತಾಲೂಕಿನ ಸಾಗರ್‌ ಸಣ್ಣಕ್ಕಿ, ಗೋಕಾಕ್ ತಾಲೂಕಿನ ಶಿವಕುಮಾರ್, ಗುಡುಸಾಬ್ ಮುಲ್ಲಾ, ಮುದಲ್ಗಿ ತಾಲೂಕಿನ ಹಾಲಪ್ಪ ಬಂಧಿತರು. ಆರೋಪಿಗಳಿಂದ 70 ಮೊಬೈಲ್‌, ಕಾರು ಹಾಗೂ ಆಟೋ ಸೇರಿ 70 ಲಕ್ಷ ರು. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.

ಕೆಲ ದಿನಗಳ ಹಿಂದೆ ಎಲೆಕ್ಟ್ರಾನಿಕ್ ಸಿಟಿ ಬಸ್ ನಿಲ್ದಾಣದಿಂದ ಕೂಡ್ಲುಗೇಟ್‌ನಲ್ಲಿರುವ ಸ್ನೇಹಿತನ ಮನೆಗೆ ಹೋಗಲು ಖಾಸಗಿ ಕಂಪನಿ ಉದ್ಯೋಗಿ ತೆರಳುತ್ತಿದ್ದರು. ಆ ವೇಳೆ ಬಸ್ ನಿಲ್ದಾಣದಲ್ಲಿ ಅವರ ಮೊಬೈಲ್ ಕಳವಾಗಿತ್ತು. ಈ ಬಗ್ಗೆ ದಾಖಲಾದ ದೂರಿನ ಬಗ್ಗೆ ತನಿಖೆಗಿಳಿದ ಪೊಲೀಸರು, ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಮೋಜಿನ ಜೀವನಕ್ಕೆ ಬಿದ್ದ ಆರೋಪಿಗಳು, ಸುಲಭವಾಗಿ ಹಣ ಸಂಪಾದನೆಗೆ ಮೊಬೈಲ್ ಕಳ್ಳತನಕ್ಕಿಳಿದಿದ್ದರು. ಬಿಎಂಟಿಸಿ ಬಸ್‌ ನಿಲ್ದಾಣಗಳಲ್ಲಿ ಪ್ರಯಾಣಿಕರ ಸೋಗಿನಲ್ಲಿ ತೆರಳಿ ಸಹ ಪ್ರಯಾಣಿಕರ ಮೊಬೈಲ್ ದೋಚುತ್ತಿದ್ದರು. ಬಳಿಕ ಈ ಮೊಬೈಲ್‌ಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡಿ ಹಣ ಸಂಪಾದಿಸುತ್ತಿದ್ದರು. ಹಲವು ದಿನಗಳಿಂದ ಈ ಗ್ಯಾಂಗ್ ಕಾರ್ಯಾಚರಣೆ ನಡೆಸಿದೆ. ಇದೇ ಮೊದಲ ಬಾರಿಗೆ ಆರೋಪಿಗಳು ಬಂಧಿತರಾಗಿ ಜೈಲು ಸೇರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.
Read more Articles on

Recommended Stories

ವೈಯಕ್ತಿಕ ಕಾರಣದಿಂದ ಬೇಸತ್ತು ಕಿರುತೆರೆ ಯುವ ನಟಿ ಆತ್ಮ*ತ್ಯೆ
ಪೊಲೀಸರಿಗೆ ಹಣಕ್ಕೆ ಬೇಡಿಕೆ ಇಟ್ಟ ಆರೋಪ : ಪತ್ರಕರ್ತ ವಶ