ಕನ್ನಡಪ್ರಭ ವಾರ್ತೆ ಬೆಂಗಳೂರು
ಕೊಲಂಬೋದಿಂದ ಕೆಐಎಗೆ ಶುಕ್ರವಾರ ಬಂದಿಳಿದ ಇಬ್ಬರು ಶ್ರೀಲಂಕಾ ಪ್ರಜೆಗಳಿಂದ ₹18.47 ಲಕ್ಷ ಮೌಲ್ಯದ 288.54 ಗ್ರಾಂ ಚಿನ್ನ ಹಾಗೂ ಶನಿವಾರ ಬಂದಿಳಿದ ಓರ್ವ ಶ್ರೀಲಂಕಾ ಪ್ರಜೆ ಸೇರಿ ಮೂವರಿಂದ ₹54 ಲಕ್ಷ ಮೌಲ್ಯದ 878.98 ಗ್ರಾಂ ಚಿನ್ನವನ್ನು ಜಪ್ತಿ ಮಾಡಲಾಗಿದೆ ಎಂದು ಕಸ್ಟಮ್ಸ್ ಪ್ರಕಟಣೆಯಲ್ಲಿ ತಿಳಿಸಿದೆ.
ಕೊಲಂಬೋದಿಂದ ಬಂದ ಆರೋಪಿಗಳು ಪೇಸ್ಟ್ ರೀತಿಯಲ್ಲಿ ಚಿನ್ನ ಸಾಗಿಸಿದರೆ, ಇನ್ನುಳಿದವರು ಬಟ್ಟೆಗಳು ಅಡಗಿಸಿಕೊಂಡು ಬಂದಿದ್ದರು. ಶ್ರೀಲಂಕಾದಿಂದ ಆಗಮಿಸುವ ವಿಮಾನದಲ್ಲಿ ಅಕ್ರಮವಾಗಿ ಚಿನ್ನ ಸಾಗಣಿಗೆ ನಡೆದಿರುವ ಬಗ್ಗೆ ಮಾಹಿತಿ ಮೇರೆಗೆ ಅಧಿಕಾರಿಗಳು, ಕೆಐಎಗೆ ಶುಕ್ರವಾರ ಹಾಗೂ ಶನಿವಾರ ಬಂದಿಳಿದ ಪ್ರಯಾಣಿಕರ ಮೇಲೆ ನಿಗಾವಹಿಸಿದ್ದಾಗ ಈ ಐವರ ಮೇಲೆ ಶಂಕೆ ಮೂಡಿತು. ಈ ಅನುಮಾನದ ಮೇರೆಗೆ ಆ ಪ್ರಯಾಣಿಕರನ್ನು ಪ್ರತ್ಯೇಕವಾಗಿ ತಪಾಸಣೆಗೆ ಒಳಪಡಿಸಿದಾಗ ಅವರ ಬಳಿ ಚಿನ್ನ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.