ತೆರಿಗೆ ವಂಚನೆ ಕೇಸ್‌: ಐಷಾರಾಮಿ ಕಾರಿಂದ ₹1.41 ಕೋಟಿ ವಸೂಲಿ

Published : Jul 04, 2025, 07:04 AM IST
Bengaluru Ferrari Car

ಸಾರಾಂಶ

ಮೋಟಾರು ವಾಹನ ತೆರಿಗೆ ಪಾವತಿಸದೆ ವಂಚಿಸಿದ್ದ ಐಷಾರಾಮಿ ಕಾರಿನ ಮಾಲೀಕರಿಗೆ ಬಿಸಿ ಮುಟ್ಟಿಸಿದ ಬೆಂಗಳೂರು ದಕ್ಷಿಣ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು, 1.41 ಕೋಟಿ ರು. ತೆರಿಗೆ ವಸೂಲಿ ಮಾಡಿದ್ದಾರೆ.

ಬೆಂಗಳೂರು : ಮೋಟಾರು ವಾಹನ ತೆರಿಗೆ ಪಾವತಿಸದೆ ವಂಚಿಸಿದ್ದ ಐಷಾರಾಮಿ ಕಾರಿನ ಮಾಲೀಕರಿಗೆ ಬಿಸಿ ಮುಟ್ಟಿಸಿದ ಬೆಂಗಳೂರು ದಕ್ಷಿಣ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು, 1.41 ಕೋಟಿ ರು. ತೆರಿಗೆ ವಸೂಲಿ ಮಾಡಿದ್ದಾರೆ.

ಮಹಾರಾಷ್ಟ್ರದಲ್ಲಿ ನೋಂದಣಿಯಾಗಿದ್ದ ಫೆರಾರಿ ಸಂಸ್ಥೆಯ ಅಂದಾಜು 7 ಕೋಟಿ ರು. ಮೌಲ್ಯದ ಕಾರು ನಿಯಮದಂತೆ ತೆರಿಗೆ ಪಾವತಿಸದೇ ಸಂಚರಿಸುತ್ತಿತ್ತು. 2023ರ ಸೆಪ್ಟೆಂಬರ್‌ನಿಂದ ವಾಹನವು ತೆರಿಗೆ ಪಾವತಿಸದೆ ಓಡಾಡುತ್ತಿದೆ. ಮೋಟಾರು ವಾಹನ ತೆರಿಗೆ ಪಾವತಿಸದೇ ಸಂಚರಿಸುತ್ತಿರುವುದು ಸಂಚಾರ ಪೊಲೀಸರು ಕಾರಿನ ದಾಖಲೆ ಪರಿಶೀಲನೆ ವೇಳೆ ಪತ್ತೆ ಮಾಡಿರುವ ವಿಷಯವನ್ನು ಬೆಂಗಳೂರು ದಕ್ಷಿಣ ಆರ್‌ಟಿಒ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು.

ಈ ಮಾಹಿತಿ ಆಧರಿಸಿ ಆರ್‌ಟಿಒ ಅಧಿಕಾರಿಗಳು ಶುಕ್ರವಾರ ಕಾರನ್ನು ವಶಕ್ಕೆ ಪಡೆದು ಸಂಜೆಯೊಳಗೆ ದಂಡ ಸಹಿತ ತೆರಿಗೆ ಪಾವತಿಸುವಂತೆ ಮಾಲೀಕರಿಗೆ ನೋಟಿಸ್‌ ನೀಡಿದ್ದರು. ಜತೆಗೆ ದಂಡ ಸಹಿತ ತೆರಿಗೆ ಪಾವತಿಸದಿದ್ದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳುವುದಾಗಿಯೂ ಎಚ್ಚರಿಕೆ ನೀಡಿದ್ದರು. ಆ ಹಿನ್ನೆಲೆಯಲ್ಲಿ ಕಾರು ಮಾಲೀಕ ಶುಕ್ರವಾರ ಸಂಜೆ ವೇಳೆಗೆ 1.41 ಕೋಟಿ ರು. ದಂಡ ಸಹಿತ ತೆರಿಗೆ ಬಾಕಿ ಪಾವತಿಸಿದ್ದಾರೆ. ನಂತರ ಆರ್‌ಟಿಒ ಅಧಿಕಾರಿಗಳು, ಕಾರನ್ನು ಮಾಲೀಕರಿಗೆ ವಾಪಸ್‌ ನೀಡಿದ್ದಾರೆ.

PREV
Read more Articles on

Recommended Stories

ಸೈಬರ್‌ ಕ್ರೈಂ ಭೇದಿಸುವುದು ಬಹುದೊಡ್ಡ ಸವಾಲು: ಪರಮೇಶ್ವರ್‌ ಅಸಹಾಯಕತೆ
ಬ್ಯಾಡರಹಳ್ಳಿ ಬಳಿ ವಿದ್ಯುತ್‌ ತಂತಿ ಕಟ್‌: 3 ಉಪ ಕೇಂದ್ರ ವ್ಯಾಪ್ತಿ ಪವರ್‌ ಸ್ಥಗಿತ