ನ.19ರ ಏರಿಂಡಿಯಾ ಸ್ಫೋಟ ಬೆದರಿಕೆ ಗಂಭೀರ ಸ್ವರೂಪದ್ದು: ಗುಪ್ತಚರ ದಳ

KannadaprabhaNewsNetwork | Published : Nov 7, 2023 1:31 AM

ಸಾರಾಂಶ

ನ.19ರಂದು ಯಾವುದೇ ಸಿಖ್‌ ಪ್ರಜೆಗಳು ಏರ್‌ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸಬಾರದು. ಅಂಥ ಪ್ರಯಾಣ ನಿಮ್ಮ ಜೀವಕ್ಕೆ ಅಪಾಯ ತರಬಲ್ಲದು ಎಂದು ಖಲಿಸ್ತಾನಿ ಉಗ್ರ ಗುರುಪತ್ವಂತ್‌ಸಿಂಗ್‌ ಪನ್ನು ಇತ್ತೀಚಿಗೆ ನೀಡಿರುವ ಎಚ್ಚರಿಕೆ ಗಂಭೀರ ಸ್ವರೂಪದ್ದು. ಅದನ್ನು ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ಕೇಂದ್ರೀಯ ಗುಪ್ತಚರ ಇಲಾಖೆ ಮೂಲಗಳು ಹೇಳಿವೆ.

1985ರ ಕನಿಷ್ಕ ವಿಮಾನ ಮಾದರಿ ಸ್ಫೋಟಕ್ಕೆ ಖಲಿಸ್ತಾನ್‌ ಸಂಚು

ಯುವಕರಿಗೆ ಸ್ಫೋಟಕ್ಕೆ ಖಲಿಸ್ತಾನಿ ಉಗ್ರ ಪನ್ನು ಪ್ರಚೋದನೆನವದೆಹಲಿ: ನ.19ರಂದು ಯಾವುದೇ ಸಿಖ್‌ ಪ್ರಜೆಗಳು ಏರ್‌ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸಬಾರದು. ಅಂಥ ಪ್ರಯಾಣ ನಿಮ್ಮ ಜೀವಕ್ಕೆ ಅಪಾಯ ತರಬಲ್ಲದು ಎಂದು ಖಲಿಸ್ತಾನಿ ಉಗ್ರ ಗುರುಪತ್ವಂತ್‌ಸಿಂಗ್‌ ಪನ್ನು ಇತ್ತೀಚಿಗೆ ನೀಡಿರುವ ಎಚ್ಚರಿಕೆ ಗಂಭೀರ ಸ್ವರೂಪದ್ದು. ಅದನ್ನು ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ಕೇಂದ್ರೀಯ ಗುಪ್ತಚರ ಇಲಾಖೆ ಮೂಲಗಳು ಹೇಳಿವೆ.ಪನ್ನೂನ್‌, ಭಾರತೀಯ ಯುವಕರನ್ನು ದೇಶ ವಿರೋಧಿ ಕೃತ್ಯಗಳಿಗೆ ಪ್ರಚೋದಿಸುತ್ತಿದ್ದಾನೆ. ಜೊತೆಗೆ 329 ಜನರನ್ನು ಬಲಿ ಪಡೆದ 1985ರ ಏರಿಂಡಿಯಾ ಕನಿಷ್ಕಾ ವಿಮಾನ ಬಾಂಬ್‌ ಸ್ಫೋಟ ಪ್ರಕರಣದ ರೀತಿಯಲ್ಲೇ ಮತ್ತೆ ದಾಳಿ ನಡೆಸುವ ಎಚ್ಚರಿಕೆ ನೀಡಿದ್ದಾನೆ ಎಂದು ಗುಪ್ತಚರ ಇಲಾಖೆ ಮೂಲಗಳು ತಿಳಿಸಿವೆ.ಪನ್ನು ನೇರವಾಗಿ ಯಾವುದೇ ಗಂಭೀರ ಕೃತ್ಯ ಎಸಗುವಷ್ಟು ಸಾಮರ್ಥ್ಯ ಹೊಂದಿಲ್ಲವಾದರೂ, ಇಂಥ ಭಾರತ ವಿರೋಧಿ ಕೃತ್ಯಗಳಿಗೆ ಯುವಕರನ್ನು ಪ್ರಚೋದಿಸುವ ಕೆಲಸವನ್ನು ಯಶಸ್ವಿಯಾಗಿ ಮಾಡುತ್ತಿದ್ದಾನೆ. ಈ ಕಾರಣಕ್ಕಾಗಿಯೇ ಭಾರತದಿಂದ ಸಂಚಾರ ನಡೆಸುವ ಎಲ್ಲಾ ಪ್ರಮುಖ ನಗರಗಳಲ್ಲೂ ಹೆಚ್ಚಿನ ನಿಗಾ ವಹಿಸುವಂತೆ ನಮ್ಮ ಸಹದ್ಯೋಗಿಗಳಿಗೆ ಸೂಚನೆ ನೀಡಿದ್ದೇವೆ ಎಂದು ಗುಪ್ತಚರ ಇಲಾಖೆ ಮೂಲಗಳು ತಿಳಿಸಿವೆ.1985ರ ಜೂ.23ರಂದು ಕೆನಡಾದ ಟೊರೊಂಟೊದಿಂದ ಹೊರಟಿದ್ದ ಏರ್‌ ಇಂಡಿಯಾ ಕನಿಷ್ಕ ವಿಮಾನವನ್ನು ಖಲಿಸ್ತಾನಿ ಉಗ್ರರು ಸ್ಫೋಟಿಸಿದ್ದರು. ಘಟನೆಯಲ್ಲಿ 329 ಜನರು ಸಾವನ್ನಪ್ಪಿದ್ದರು.

Share this article