ಕ್ಯಾಂಟರ್ ವಾಹನದ ಬ್ರೇಕ್ ಫೇಲ್; ತಪ್ಪಿದ ಭಾರೀ ಅನಾಹುತ

KannadaprabhaNewsNetwork | Published : May 29, 2024 12:49 AM

ಸಾರಾಂಶ

ಮೈಸೂರು- ಬೆಂಗಳೂರು ಹೆದ್ದಾರಿಯಲ್ಲಿ ಆಗಬಹುದಾಗಿದ್ದ ಭಾರೀ ದುರಂತ ತಪ್ಪಿದಂತಾಗಿದೆ. ಘಟನೆಯಲ್ಲಿ ಮೂರು ವಾಹನ ಚಾಲಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಕ್ಯಾಂಟರ್ ವಾಹನದ ವೇಗ ಕಡಿಮೆ ಇದ್ದ ಕಾರಣ ಎರಡು ಸಾರಿಗೆ ಬಸ್‌ಗೆ ಡಿಕ್ಕಿಯಾದರು ಬಸ್ ನಲ್ಲಿದ್ದ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಹೆದ್ದಾರಿಯಲ್ಲಿ ಕ್ಯಾಂಟರ್ ವಾಹನದ ಬ್ರೇಕ್ ಫೇಲ್‌ ಆಗಿ ಎರಡು ಸಾರಿಗೆ ಬಸ್‌ಗಳ ನಡುವೆ ಡಿಕ್ಕಿ ಸಂಭವಿಸದ್ದು ಯಾವುದೇ ಅಹಿತಕರ ಘಟನೆ ಆಗದ ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಮುಂಭಾಗ ನಡೆದಿದೆ.

ಮೈಸೂರು- ಬೆಂಗಳೂರು ಹೆದ್ದಾರಿಯಲ್ಲಿ ಆಗಬಹುದಾಗಿದ್ದ ಭಾರೀ ದುರಂತ ತಪ್ಪಿದಂತಾಗಿದೆ. ಘಟನೆಯಲ್ಲಿ ಮೂರು ವಾಹನ ಚಾಲಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಕ್ಯಾಂಟರ್ ವಾಹನದ ವೇಗ ಕಡಿಮೆ ಇದ್ದ ಕಾರಣ ಎರಡು ಸಾರಿಗೆ ಬಸ್‌ಗೆ ಡಿಕ್ಕಿಯಾದರು ಬಸ್ ನಲ್ಲಿದ್ದ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ಈ ಸಂಬಂಧ ಶ್ರೀರಂಗಪಟ್ಟಣ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.ತುಂಡಾದ ವಿದ್ಯುತ್‌ ತಂತಿ ತುಳಿದು ರೈತ ಸಾವು

ಕಿಕ್ಕೇರಿ:ತುಂಡಾದ ವಿದ್ಯುತ್ ತಂತಿ ತುಳಿದು ರೈತ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಸಮೀಪದ ಬೆಡದಹಳ್ಳಿಯಲ್ಲಿ ಮಂಗಳವಾರ ಸಂಭವಿಸಿದೆ.

ಕೆ.ಆರ್.ಪೇಟೆ ತಾಲೂಕಿನ ಸಿಂಗನಹಳ್ಳಿಯ ಶಿವೇಗೌಡ (60) ಮೃತ ರೈತ. ಮಂಗಳವಾರ ಮಧ್ಯಾಹ್ನ ತನ್ನ ತೋಟದಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾಗ ತುಂಡಾಗಿದ್ದ ವಿದ್ಯುತ್‌ ತಂತಿ ಕಾಣದೆ ತುಳಿದು ವಿದ್ಯುತ್ ಪ್ರವಹಿಸಿ ಸ್ಥಳದಲ್ಲಿಯೇ ಮೃತನಾಗಿದ್ದಾನೆ. ಬಹಳ ಹೊತ್ತಾದರು ಕಾಣದ ತಮ್ಮ ತಂದೆಯನ್ನು ಮಗ ಹುಡುಕಾಟ ನಡೆಸಿದ್ದಾನೆ. ಜಮೀನಿನಲ್ಲಿ ವಿದ್ಯುತ್‌ ತಂತಿ ತುಂಡಾಗಿ ತಂದೆ ಮೃತನಾಗಿರುವ ಸ್ಥಿತಿಯನ್ನು ಕಂಡಿದ್ದಾನೆ. ಕಿಕ್ಕೇರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಘಟನಾ ಸ್ಥಳಕ್ಕೆ ಇನ್ಸ್ ಪೆಕ್ಟರ್ ರೇವತಿ ಆಗಮಿಸಿ ಸ್ಥಳ ಪರಿಶೀಲನೆ ನಡೆಸಿದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಹಸ್ತಾಂತರಿಸಲಾಯಿತು.ಕಳೆದೆರಡು ದಿನಗಳ ಹಿಂದೆ ಲಕ್ಷ್ಮೀಪುರ ಗ್ರಾಮದ ಮಹಿಳೆಯು ತುಂಡಾದ ವಿದ್ಯುತ್‌ ತಂತಿ ತುಳಿದು ಮೃತಳಾಗಿದ್ದಳು. ಪ್ರಕರಣ ಮಾಸುವ ಮುನ್ನ ಮತ್ತೊಂದು ಪ್ರಕರಣ ಜರುಗಿರುವುದು ರೈತರಲ್ಲಿ ಆತಂಕ ಉಂಟಾಗಿದೆ.

ಸೆಸ್ಕ್ ಇಲಾಖೆಯವರ ಬೇಜಾವಾಬ್ದಾರಿತನದಿಂದ ರೈತರು ಇಂತಹ ಅವಘಡಗಳಿಗೆ ತುತ್ತಾಗುತ್ತಿದ್ದಾರೆ. ಸರ್ಕಾರ ಮತ್ತು ಇಲಾಖೆ ಸೂಕ್ತ ಪರಿಹಾರವನ್ನು ತ್ವರಿತವಾಗಿ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.ಗ್ರಾಪಂ ಅಧ್ಯಕ್ಷ ಕುಬೇರ, ಬೆಡದಹಳ್ಳಿ ಸುನಿಲ್, ಕಾಂತರಾಜು ಇದ್ದರು.

Share this article