ಬಾಲಕಿ ಮೇಲೆ ಅತ್ಯಾಚಾರ ಮಾಡಿದ ಯೋಗ ಗುರು ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಕೆ

KannadaprabhaNewsNetwork |  
Published : Nov 10, 2025, 03:45 AM ISTUpdated : Nov 10, 2025, 08:05 AM IST
crime

ಸಾರಾಂಶ

ಯೋಗ ಕಲಿಸುವ ನೆಪದಲ್ಲಿ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ ಬಂಧಿತರಾಗಿರುವ ಯೋಗ ಗುರು ನಿರಂಜನಮೂರ್ತಿ ವಿರುದ್ಧ ರಾಜರಾಜೇಶ್ವರಿನಗರ ಠಾಣೆ ಪೊಲೀಸರು ಪೋಕ್ಸೊ ವಿಶೇಷ ನ್ಯಾಯಾಲಯಕ್ಕೆ ಚಾರ್ಜ್‌ ಶೀಟ್‌ ಸಲ್ಲಿಸಿದ್ದಾರೆ.

 ಬೆಂಗಳೂರು :  ಯೋಗ ಕಲಿಸುವ ನೆಪದಲ್ಲಿ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ ಬಂಧಿತರಾಗಿರುವ ಯೋಗ ಗುರು ನಿರಂಜನಮೂರ್ತಿ ವಿರುದ್ಧ ರಾಜರಾಜೇಶ್ವರಿನಗರ ಠಾಣೆ ಪೊಲೀಸರು ಪೋಕ್ಸೊ ವಿಶೇಷ ನ್ಯಾಯಾಲಯಕ್ಕೆ ಚಾರ್ಜ್‌ ಶೀಟ್‌ ಸಲ್ಲಿಸಿದ್ದಾರೆ.

ಸಂತ್ರಸ್ತೆ ನೀಡಿದ್ದ ದೂರು ಆಧರಿಸಿ ಪೊಲೀಸರು ಸೆ.18ರಂದು ಅತ್ಯಾಚಾರ ಮತ್ತು ಪೋಕ್ಸೋ ಕಾಯಿದೆ ಅಡಿಯಲ್ಲಿ ನಿರಂಜನ ಮೂರ್ತಿಯನ್ನು ಬಂಧಿಸಿದ್ದರು. ಇದೀಗ ಈ ಪ್ರಕರಣದ ತನಿಖೆಯನ್ನು ಪೂರ್ಣಗೊಳಿಸಿರುವ ಪೊಲೀಸರು ಕೋರ್ಟ್ ಗೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.

ಯೋಗ ಕಲಿಕೆಗೆ ಹೋಗುತ್ತಿದ್ದರು

ಸಂತ್ರಸ್ತೆಯು 2021ರಿಂದ ನಿರಂಜನಮೂರ್ತಿ ನಡೆಸುತ್ತಿದ್ದ ಯೋಗ ತರಬೇತಿ ಸಂಸ್ಥೆಯಲ್ಲಿ ಯೋಗ ಕಲಿಕೆಗೆ ಹೋಗುತ್ತಿದ್ದರು. 2023ರಲ್ಲಿ ಯೋಗ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಥಾಯ್ಲೆಂಡ್‍ಗೆ ಹೋಗಿದ್ದಾಗ ನಿರಂಜನಮೂರ್ತಿ, ಸಂತ್ರಸ್ತೆಗೆ ಲೈಂಗಿಕ ಕಿರುಕುಳ ನೀಡಿದ್ದ. ಯೋಗದಲ್ಲಿ ಅಂತಾರಾಷ್ಟ್ರೀಯ ಮಟ್ಟಕ್ಕೆ ಕರೆದೊಯ್ದು ಹೆಸರು ಬರುವಂತೆ ಮಾಡುತ್ತೇನೆ. ಅದರಿಂದ ಸರ್ಕಾರಿ ಕೆಲಸವೂ ಸಿಗಬಹುದೆಂದು ನಂಬಿಸಿ, ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಪೊಲೀಸರು ಆರೋಪಪಟ್ಟಿಯಲ್ಲಿ ಉಲ್ಲೇಖಿಸಿದ್ದಾರೆ.

ಅತ್ಯಾ*ರ ಮಾಡಿದ್ದಾರೆ ಎಂಬುದಕ್ಕೆ ಸಾಕ್ಷಿ ಲಭ್ಯ

ತನಿಖೆ ವೇಳೆ ವಿದ್ಯಾರ್ಥಿನಿಗೆ ಅತ್ಯಾ*ರ ಮಾಡಿದ್ದಾರೆ ಎಂಬುದಕ್ಕೆ ಸಾಕ್ಷಿ ಲಭ್ಯವಾಗಿದೆ. ಅಲ್ಲದೇ ಕೆಲ ವಿಡಿಯೋ ಫೋಟೊಗಳು ಸಹ ಲಭ್ಯವಾಗಿದೆ. ಎಫ್ಎಸ್ಎಲ್ ನಿಂದ ಡಿಎನ್ಎ ವರದಿ ಬರುವುದು ಮಾತ್ರ ಬಾಕಿ ಇದೆ. ಆರೋಪಿ ಮೇಲೆ ಹಲವಾರು ಮಹಿಳೆಯರಿಗೆ ಅತ್ಯಾಚಾರ ಮಾಡಿರುವ ಬಗ್ಗೆ ಆರೋಪವಿದೆ.

ತನಿಖೆ ವೇಳೆ ಪೊಲೀಸರು, ಈ ಬಗ್ಗೆ ಹಲವಾರು ಮಹಿಳೆಯರ ಸಂಪರ್ಕ ಮಾಡಿ ಮಾಹಿತಿ ಕೇಳಿದ್ದರು. ಆರೋಪಿಯ ಮೊಬೈಲ್ ಪರಿಶೀಲನೆ ವೇಳೆ ಹಲವಾರು ಮಹಿಳೆಯರ ಸಂಪರ್ಕ ಇರುವುದು ಪತ್ತೆಯಾಗಿದೆ. ಸಂತ್ರಸ್ತೆ ಹೊರತು ಪಡಿಸಿ ಬೇರೆ ಯಾರೂ ದೂರು ನೀಡಿಲ್ಲ. ಅವರು ಇದ್ದಲ್ಲಿಯೇ ಹೋಗಿ ಹೇಳಿಕೆ ಪಡೆಯಲು ಪ್ರಯತ್ನಿಸಿದ್ದರು ಅವರು ಸಹಕಾರ ನೀಡಿರಲಿಲ್ಲ. ಮಹಿಳೆಯರು ಮಾಹಿತಿ ಮತ್ತು ಹೇಳಿಕೆ ನೀಡಲು ನಿರಾಕರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಯೋಗ ಗುರು ನಿರಂಜನಮೂರ್ತಿ ಮೇಲೆ ಸಾಕಷ್ಟು ಆರೋಪಗಳಿದ್ದವು. ಅದರಲ್ಲಿ ಒಬ್ಬರು ಸಂತ್ರಸ್ತೆ ಮಾತ್ರ ದೂರು ನೀಡಿದ್ದರು. ಈ ಪ್ರಕರಣದ ತನಿಖೆ ನಡೆಸಿದ ತನಿಖಾಧಿಕಾರಿಗಳು ನ್ಯಾಯಾಲಯಕ್ಕೆ ಚಾರ್ಜ್‌ ಶೀಟ್‌ ಸಲ್ಲಿಸಿದ್ದಾರೆ.

-ಎಸ್‌. ಗಿರೀಶ್, ಪಶ್ಚಿಮ ವಿಭಾಗದ ಡಿಸಿಪಿ

PREV
Read more Articles on

Recommended Stories

ಗೂಡ್ಲ್‌ ಆಟೋ ಪಲ್ಟಿಯಾಗಿ ಗಾಯಗೊಂಡಿದ್ದವ ಒದ್ದಾಡಿ ಪ್ರಾಣಬಿಟ್ಟ!
ಆಟೋ ಚಾಲಕನಿಂದ ಯುವತಿಗೆ ಅತ್ಯಾ*ರದ ಬೆದರಿಕೆ? : ಜಾಲತಾಣದಲ್ಲಿ ಯುವತಿ ಪೋಸ್ಟ್