ನಾಗಮಂಗಲ:
ತಾಲೂಕಿನ ಹೊಣಕೆರೆ ಹೋಬಳಿಯ ಹೊನ್ನಬೆಟ್ಟದ ಹೊಸೂರು ಗ್ರಾಮದ ಶಂಕರೇಗೌಡರ ಮಗ ಶಶಿಕುಮಾರ್ (34) ಘಟನೆಯಲ್ಲಿ ಸಾವನ್ನಪ್ಪಿರುವ ನತದೃಷ್ಟ ಬೈಕ್ ಸವಾರ.
ಕಾರ್ಯನಿಮಿತ್ತ ಬ್ರಹ್ಮದೇವರಹಳ್ಳಿಗೆ ತಮ್ಮ ಬೈಕ್ ನಲ್ಲಿ ತೆರಳಿದ್ದ ಶಶಿಕುಮಾರ್ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಪಸ್ ಬರುತ್ತಿದ್ದ ವೇಳೆ ನಾಗಮಂಗಲ ಮಾರ್ಗವಾಗಿ ಮೈಸೂರಿಗೆ ತೆರಳುತ್ತಿದ್ದ ರಾಜಸ್ಥಾನ ಮೂಲದ (ಆರ್‌ಜೆ 14-ಜಿಎಚ್ 0878 ) ಕಂಟೈನರ್ ವಾಹನ ಮುಖಾಮುಖಿ ಡಿಕ್ಕಿಹೊಡೆದು ಈ ಅವಘಡ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಬೈಕ್ ಜಖಂಗೊಂಡು ಶಶಿಕುಮಾರ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ಪಿಎಸ್‌ಐ ರಾಜೇಂದ್ರ ಮತ್ತು ಸಿಬ್ಬಂದಿಗಳು ಪರಿಶೀಲನೆ ನಡೆಸಿ ಶಶಿಕುಮಾರ್ ಮೃತದೇಹವನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿ ಮರಣೋತ್ತರ ಪರೀಕ್ಷೆಗೊಳಪಡಿಸಿದರು.
ಟ್ರ್ಯಾಕ್ಟರ್ ಡಿಕ್ಕಿ: ಪಾದಚಾರಿ ಸಾವು
ಗ್ರಾಮದ ಲೇಟ್ ರಾಮೇಗೌಡರ ಪುತ್ರ ಬಸವಲಿಂಗೇಗೌಡ ಅಲಿಯಾಸ್ ಪಾಪ (53) ಸಾವನ್ನಪ್ಪಿರುವ ನತದೃಷ್ಟ. ಕಾರ್ಯನಿಮಿತ್ತ ಸಮೀಪದ ಬಿದರಕೆರೆ ಗ್ರಾಮಕ್ಕೆ ಹೋಗಿ ವಾಪಸ್ ಸ್ವಗ್ರಾಮಕ್ಕೆ ಬರುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ.
ಬುಧವಾರ ಬೆಳಗ್ಗೆ ಆಸ್ಪತ್ರೆಯ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಬಸವಲಿಂಗೇಗೌಡರ ಮೃತದೇಹವನ್ನು ವಾರಸುದಾರರಿಗೆ ಹಸ್ತಾಂತರಿಸಲಾಯಿತು. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟುವಂತಿತ್ತು. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಬಿಂಡಿಗನವಿಲೆ ಠಾಣೆಯ ಪೊಲೀಸರು ಮುಂದಿನ ಕಾನೂನು ಕ್ರಮ ವಹಿಸಿದ್ದಾರೆ.
ಕೆ.ಆರ್.ಪೇಟೆ: ಬೆಂಗಳೂರು - ಜಲಸೂರು ರಾಜ್ಯ ಹೆದ್ದಾರಿಯಲ್ಲಿ ಅಪರಿಚಿತ ವಾಹನ ಗುದ್ದಿ ವೃದ್ಧ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತಾಲೂಕಿನ ಅಕ್ಕಿಹೆಬ್ಬಾಳು ಬಳಿಯ ದಡದಹಳ್ಳಿಯಲ್ಲಿ ನಡೆದಿದೆ.
ಅಪರಿಚಿತ ವ್ಯಕ್ತಿ ಶವ ಪತ್ತೆ
ಕಂದು ಮೈಬಣ್ಣ ದೃಢಕಾಯ ಶರೀರ ಉದ್ದನೆಯ ಮೀಸೆ ಗಡ್ಡ ಮೈಮೇಲೆ ಹೆಚ್ಚಿನ ಕೂದಲು ಇರುತ್ತೆ ಬಲಕೈಯಲ್ಲಿ ಹಸಿರು ಹಚ್ಚೆ ಇದ್ದು ಅಸ್ಪಷ್ಟವಾಗಿರುತ್ತದೆ. ಈ ಬಗ್ಗೆ ಅ.8 ರಂದು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಿಸಿಕೊಂಡು ಶವವನ್ನು ಮೈಸೂರು ಕೆಆರ್ ಆಸ್ಪತ್ರೆಯ ಶವಗಾರದಲ್ಲಿರಿಸಲಾಗಿದೆ. ಈ ವ್ಯಕ್ತಿಯ ಯಾರಾದರೂ ವಾರಸ್ದರಿದ್ದಲ್ಲಿ ಪೊಲೀಸರನ್ನು ಸಂಪರ್ಕಿಸುವಂತೆ ಕೋರಿದ್ದಾರೆ.