ಸೈಬರ್‌ ಕ್ರೈಂ ಭೇದಿಸುವುದು ಬಹುದೊಡ್ಡ ಸವಾಲು: ಪರಮೇಶ್ವರ್‌ ಅಸಹಾಯಕತೆ

KannadaprabhaNewsNetwork |  
Published : Aug 22, 2025, 02:00 AM ISTUpdated : Aug 22, 2025, 07:03 AM IST
Dr G Parameshwar

ಸಾರಾಂಶ

ಸೈಬರ್‌ ಅಪರಾಧ ಪ್ರಕರಣಗಳನ್ನು ಬೇಧಿಸುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಮಾದಕ ಜಾಲ ಸೈಬರ್‌ ಕ್ರೈಮ್‌ಗಿಂತಲೂ ಅಪಾಯಕಾರಿ, ಇದು ಇಡೀ ಜನಸಮುದಾಯಕ್ಕೆ ಹರಡುವ ಆತಂಕ ಬಂದಿದೆ. ಆದರೂ, ಎರಡನ್ನೂ ನಿಯಂತ್ರಿಸಲು ಶಕ್ತಿ ಮೀರಿ ಪೊಲೀಸರು ಪ್ರಯತ್ನಿಸುತ್ತಿದ್ದಾರೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಹೇಳಿದರು.

 ವಿಧಾನ ಪರಿಷತ್ತು :  ಸೈಬರ್‌ ಅಪರಾಧ ಪ್ರಕರಣಗಳನ್ನು ಬೇಧಿಸುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಮಾದಕ ಜಾಲ ಸೈಬರ್‌ ಕ್ರೈಮ್‌ಗಿಂತಲೂ ಅಪಾಯಕಾರಿ, ಇದು ಇಡೀ ಜನಸಮುದಾಯಕ್ಕೆ ಹರಡುವ ಆತಂಕ ಬಂದಿದೆ. ಆದರೂ, ಎರಡನ್ನೂ ನಿಯಂತ್ರಿಸಲು ಶಕ್ತಿ ಮೀರಿ ಪೊಲೀಸರು ಪ್ರಯತ್ನಿಸುತ್ತಿದ್ದಾರೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಹೇಳಿದರು.

ಕಾಂಗ್ರೆಸ್‌ನ ಎಸ್‌.ರವಿ ಹಾಗೂ ಬಿಜೆಪಿಯ ಎನ್‌.ರವಿಕುಮಾರ್‌ ಕೇಳಿದ ಪ್ರತ್ಯೇಕ ಪ್ರಶ್ನೆಗಳಿಗೆ ಉತ್ತರಿಸಿದ ಸಚಿವರು, ಸೈಬರ್‌ ಅಪರಾಧ ಪ್ರಕಣಗಳನ್ನು ಪತ್ತೆ ಹಚ್ಚುವುದು ಸುಲಭ ಅಲ್ಲ. ಯಾವುದೋ ದೇಶದಲ್ಲಿ ಕುಳಿತು ಈ ಅಪರಾಧ ನಡೆಸುತ್ತಾರೆ. ಅವರ ಐಪಿ ವಿಳಾಸಗಳು ಸಿಗುವುದಿಲ್ಲ. ಬೇರೆ ಬೇರೆ ಆಧುನಿಕ ತಂತ್ರಜ್ಞಾನದ ಉಪಕರಣಗಳು ಹಾಗೂ ಅವುಗಳನ್ನು ಬಳಸಲು ಸಿಬ್ಬಂದಿಗೆ ಸೂಕ್ತ ತರಬೇತಿ ಬೇಕಿದೆ. ಇದಕ್ಕಾಗಿ ಸಿಬ್ಬಂದಿಗೆ ವಿಶೇಷ ತರಬೇತಿ ನೀಡುತ್ತಿದ್ದೇವೆ. ಇದುವರೆಗೆ 9000 ಜನರಿಗೆ ತರಬೇತಿ ನೀಡಿದ್ದೇವೆ. ಮುಂದಿನ ದಿನಗಳಲ್ಲಿ ಎಂಜಿನಿಯರಿಂಗ್‌, ಎಂಟೆಕ್‌ ಆಗಿರುವ ಅಥವಾ ಸೈಬರ್‌ ಕ್ರೈಂ ತಡೆಗೆ ಸಂಬಂಧಿಸಿದ ವಿಶೇಷ ಕೋರ್ಸುಗಳನ್ನು ಮಾಡಿರುವವನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದರು.

2023ರಲ್ಲಿ 22,253 ಸೈಪರ್‌ ಕ್ರೈಂ ಪ್ರಕರಣಗಳು ದಾಖಲಾಗಿದ್ದು 1287 ಕೋಟಿ ರು. ವಂಚನೆ ಆಗಿದೆ. 2024ರಲ್ಲಿ 22,472 ಪ್ರಕರಣಗಳಲ್ಲಿ 2,515 ಕೋಟಿ ರು. ವಂಚನೆ ಆಗಿದೆ. 2025ರಲ್ಲಿ ಇದುವರೆಗೆ 8,620 ಪ್ರಕರಣ ದಾಖಲಾಗಿ 861 ಕೋಟಿ ರು. ವಂಚನೆ ಆಗಿದೆ. ಆದರೆ, ಇಂತಹ ಪ್ರಕರಣಗಳನ್ನು ಭೇದಿಸುವ, ಹಣ ವಸೂಲಾತಿ ಮಾಡುವ ಪ್ರಮಾಣ ಬಹಳ ಕಡಿಮೆ ಇದೆ. ಆದರೂ, ಕರ್ನಾಟಕ ಸೈಬರ್ ಕ್ರೈಮ್ ಪತ್ತೆ ಹಚ್ಚುವುದರಲ್ಲಿ ಮುಂಚೂಣಿಯಲ್ಲಿದೆ ಎಂದು ಹೇಳಿದರು.

ಡ್ರಗ್ಸ್‌ ಮುಕ್ತ ಕರ್ನಾಟಕ ನಮ್ಮ ಗುರಿ

ರಾಜ್ಯವನ್ನು ಡ್ರಗ್ಸ್‌ ಮುಕ್ತ ಕರ್ನಾಟಕ ಮಾಡುವುದು ನಮ್ಮ ಸರ್ಕಾರದ ಗುರಿ. ಮಾದಕ ವಸ್ತು ಸರರಾಜು ಜಾಲದ ವಿರುದ್ಧ ಯುದ್ಧೋಪಾದಿಯಲ್ಲಿ ಕೆಲಸ ಮಾಡಲು ಮುಖ್ಯಮಂತ್ರಿ ಅವರು ಸೂಚಿಸಿದ್ದಾರೆ. ಅಧಿಕಾರಿಗಳು ಶಕ್ತಿ ಮೀರಿ ಈ ಜಾಲ ನಿಯಂತ್ರಣಕ್ಕೆ ನಿರಂತರವಾಗಿ ಶ್ರಮಿಸುತ್ತಿದ್ದಾರೆ ಎಂದು ತಿಳಿಸಿದರು.

2023ರಲ್ಲಿ 6767 ಪ್ರಕರಣ ದಾಖಲಿಸಿ 5,611 ಮಂದಿಯನ್ನು ಬಂಧಿಸಲಾಗಿದೆ. ಇದರಲ್ಲಿ 92 ಮಂದಿ ವಿದೇಶಿಗರು. 2024ರಲ್ಲಿ 4,188 ಮತ್ತು 2025ರಲ್ಲಿ ಇದುವರೆಗೆ 3,530 ಪ್ರಕರಣಗಳನ್ನು ದಾಖಲಾಗಿದೆ. 2020ರಲ್ಲಿ 35 ಕೋಟಿ ರು. ಮೌಲ್ಯದ ಗಾಂಜಾ, ಸಿಂಥೆಟಿಕ್‌ ಮತ್ತಿತರ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. 2023ರಲ್ಲಿ ಅತಿ ಹೆಚ್ಚು 133 ಕೋಟಿ ರು. ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.

PREV
Read more Articles on

Recommended Stories

ಬ್ಯಾಡರಹಳ್ಳಿ ಬಳಿ ವಿದ್ಯುತ್‌ ತಂತಿ ಕಟ್‌: 3 ಉಪ ಕೇಂದ್ರ ವ್ಯಾಪ್ತಿ ಪವರ್‌ ಸ್ಥಗಿತ
ಗೌರಿ-ಗಣೇಶ, ಈದ್‌ ಹಬ್ಬ ಹಿನ್ನೆಲೆ ಬೆಂಗಳೂರು ನಗರದಲ್ಲಿ ಬಿಗಿ ಭದ್ರತೆ: ಸೀಮಂತ್ ಕುಮಾರ್ ಸಿಂಗ್