ಜಾಗತಿಕ ಮಟ್ಟದ ಮಾದಕ ವಸ್ತು ಮಾರಾಟ ಜಾಲದ ಮೇಲೆ ಕಸ್ಟಮ್ಸ್ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಮೂರು ದಿನಗಳಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿದೇಶದಿಂದ ಕಳ್ಳ ಹಾದಿಯಲ್ಲಿ ರಾಜ್ಯಕ್ಕೆ ಸಾಗಾಣಿಕೆಯಾಗುತ್ತಿದ್ದ 10.69 ಕೋಟಿ ರು. ಮೌಲ್ಯದ ಡ್ರಗ್ಸ್ ಅನ್ನು ಜಪ್ತಿ ಮಾಡಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು

ಕೆಐಎಗೆ ಫೆ.6 ರಂದು ಹಾಂಕಾಂಗ್‌ನಿಂದ ಬಂದಿಳಿದ ಪ್ರಯಾಣಿಕನ ಬಳಿ 1.76 ಕೋಟಿ ರು. ಮೌಲ್ಯದ 5.05 ಕೆಜಿ ಹೈಡ್ರೋ ಗಾಂಜಾ, ಫೆ.7 ರಂದು ಬ್ಯಾಂಕಾಕ್‌ನಿಂದ ಆಗಮಿಸಿದವನಿಂದ 63 ಲಕ್ಷ ರು. ಮೌಲ್ಯದ 1.8 ಕೆಜಿ ಹೈಡ್ರಾ ಗಾಂಜಾ ಹಾಗೂ ಫೆ.9 ರಂದು ಬ್ಯಾಂಕಾಕ್‌ನಿಂದ ಬಂದಿಳಿದ ಇಬ್ಬರು ಪ್ರವಾಸಿಗರ ಬಳಿ 8.31 ಕೋಟಿ ರು. ಮೌಲ್ಯದ 23.76 ಕೆಜಿ ಸೇರಿದಂತೆ ಒಟ್ಟು 10.69 ಕೋಟಿ ರು. ಮೌಲ್ಯದ ಡ್ರಗ್ಸ್ ಅನ್ನು ಪ್ರತ್ಯೇಕವಾಗಿ ಜಪ್ತಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಂತಾರಾಷ್ಟ್ರೀಯ ಡ್ರಗ್ಸ್ ದಂಧೆಕೋರರ ಮೇಲೆ ಕಸ್ಟಮ್ಸ್ ಅಧಿಕಾರಿಗಳು ನಿರಂತರವಾಗಿ ನಿಗಾ ವಹಿಸಿದ್ದಾರೆ. ಆಗ ಈ ನಾಲ್ವರು ಪೆಡ್ಲರ್‌ಗಳ ಬಗ್ಗೆ ಮಾಹಿತಿ ಸಿಕ್ಕಿತು. ಕೆಐಎ ಬಂದಿಳಿದ ಆರೋಪಿಗಳನ್ನು ಶಂಕೆ ಮೇರೆಗೆ ವಶಕ್ಕೆ ಪಡೆದು ತಪಾಸಣೆಗೊಳಪಡಿಸಿದಾಗ ಬ್ಯಾಗ್‌ಗಳಲ್ಲಿ ಅಡಗಿಸಿ ತಂದಿದ್ದ ಡ್ರಗ್ಸ್ ಪತ್ತೆಯಾಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ವಜ್ರ ತಂದು ಸಿಕ್ಕಿಬಿದ್ದ!:
ಕೆಐಎನಲ್ಲಿ ಅಕ್ರಮವಾಗಿ ವಿದೇಶದಿಂದ ಸಾಗಾಣಿಕೆ ಯತ್ನಿಸಿದ್ದ 2.01 ಕೋಟಿ ಮೌಲ್ಯದ ವಜ್ರ ಹಾಗೂ ವಿದೇಶಿ ಕರೆನ್ಸಿ ಜಪ್ತಿ-ಯುಎಸ್‌ಡಿ 18,500 ಅನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಕೆಐಎನಲ್ಲಿ ಭಾನುವಾರ ತಪಾಸಣೆ ವೇಳೆ ಆರೋಪಿ ಸಿಕ್ಕಿಬಿದ್ದಿದ್ದು, ಆತನ ಬಳಿ ವಜ್ರ ಹಾಗೂ ವಿದೇಶಿ ಕರೆನ್ಸಿ ಪತ್ತೆಯಾಗಿದೆ.
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.