ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಟೀ ಕ್ಯಾಂಟೀನ್‌ನಲ್ಲಿ ಆಕಸ್ಮಿಕವಾಗಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಅಪಾರ ಹಾನಿಯಾಗಿ ಲಕ್ಷಾಂತರ ರು. ನಷ್ಟವಾಗಿರುವ ಘಟನೆ ತಾಲೂಕಿನ ಹರಿಹರಪುರ ಗ್ರಾಮದಲ್ಲಿ ನಡೆದಿದೆ.ಘಟನೆ ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಎಚ್.ಟಿ.ಮಂಜು, ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿದರು. ಗ್ಯಾಸ್ ಸಿಲಿಂಡರ್ ಸ್ಫೋಟದಿಂದ ನಷ್ಟಕ್ಕೆ ಒಳಗಾಗಿರುವ ಕ್ಯಾಂಟೀನ್ ಮಾಲೀಕ ವಿನೋದ್ ನಂಜಪ್ಪ ಕುಟುಂಬದವರಿಗೆ ಸಾಂತ್ವನ ಹೇಳಿ ಆರ್ಥಿಕ ನೆರವು ನೀಡಿದರು.
ಗ್ಯಾಸ್ ಏಜೆನ್ಸಿ ಕಡೆಯಿಂದ ಬರಬಹುದಾದ ವಿಮೆ ಪರಿಹಾರ ಕೊಡಿಸಲು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ದೂರವಾಣಿ ಮೂಲಕ ಶಾಸಕರು ಆದೇಶ ನೀಡಿದರು. ಲಿಂಡರ್ ಸ್ಫೋಟದ ಹಾನಿಯ ಸ್ಥಳಕ್ಕೆ ತಹಸೀಲ್ದಾರ್ ಡಾ.ಎಸ್.ಯು ಅಶೋಕ್ ಅವರು ಪ್ರತ್ಯೇಕವಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿದರಲ್ಲದೇ, ಸಂಕಷ್ಟಕ್ಕೆ ತುತ್ತಾದ ಟೀ ಕ್ಯಾಂಟೀನ್ ಮಾಲೀಕ ವಿನೋದ್ ನಂಜಪ್ಪ ಅವರಿಗೆ ಸಾಂತ್ವನ ಹೇಳಿ ಸರ್ಕಾರದಿಂದ ಪರಿಹಾರ ಕ್ರಮಗಳ ಬಗ್ಗೆ ಕ್ರಮ ವಹಿಸುವುದಾಗಿ ಭರವಸೆ ನೀಡಿದರು.ಆರ್.ಐ ಜ್ಞಾನೇಶ್, ಸ್ಥಳೀಯ ಗ್ರಾಮ ಆಡಳಿತ ಅಧಿಕಾರಿ ಜೊತೆಯಲ್ಲಿದ್ದರು. ಸ್ಥಳೀಯ ಮುಖಂಡರಾದ ಎಚ್.ವಿ.ಮಹದೇವೇಗೌಡ, ಮಾಸ್ಟರ್ ನಿಂಗೇಗೌಡ, ಬಲರಾಮೇಗೌಡ ಸೇರಿದಂತೆ ನೂರಾರು ಗ್ರಾಮಸ್ಥರು ಇದ್ದರು.
ಕೊಂಡಕ್ಕೆ ಬಿದ್ದ ಪೂಜಾರಿ ಸೇರಿ ನಾಲ್ವರಿಗೆ ಗಾಯನಾಗಮಂಗಲ:
ತಾಲೂಕಿನ ದೊಡ್ಡಾಬಾಲ ಗ್ರಾಮದಲ್ಲಿ ನಡೆದ ಹುಚ್ಚಪ್ಪ ದೇವರ ಜಾತ್ರಾ ಮಹೋತ್ಸವದಲ್ಲಿ ಕೊಂಡೋತ್ಸವದ ವೇಳೆ ಪೂಜಾರಿ ಕೊಂಡಕ್ಕೆ ಬಿದ್ದು ಗಾಯಗೊಂಡಿರುವ ಘಟನೆ ನಡೆದಿದೆ. ಘಟನೆಯಲ್ಲಿ ಕೊಂಡ ಹಾಯುವ ವೇಳೆ ಬಿದ್ದ ದೇವರ ಗುಡ್ಡಪ್ಪ ಶಿವರಾಮು ಸೇರಿ ಪಕ್ಕದಲ್ಲಿ ಇದ್ದ ನಾಲ್ವರಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಹಾಗೂ ಬೆಳ್ಳೂರು ಬಳಿಯ ಬಿಜಿಎಸ್ ನ ಏಮ್ಸ್ ಆಸ್ಪತ್ರೆ ದಾಖಲು ಮಾಡಲಾಗಿದೆ. ದೊಡ್ಡಾಬಾಲ ಗ್ರಾಮದ ಹುಚ್ಚಪ್ಪ ದೇವರ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸುವ ಮುನ್ನವೇ ಈ ಅವಘಡ ನಡೆದಿದ್ದು, ಸಾರ್ವಜನಿಕರಲ್ಲಿ ಕೆಲಕಾಲ ಆತಂಕ ಉಂಟಾಗಿತ್ತು.