ಸಾಲಬಾಧೆ: ನಾಲೆಗೆ ಹಾರಿ ರೈತ ಆತ್ಮಹತ್ಯೆ

KannadaprabhaNewsNetwork |  
Published : Oct 09, 2026, 01:45 AM IST
8ಕೆಎಂಎನ್ ಡಿ22 | Kannada Prabha

ಸಾರಾಂಶ

ಸಾಲ ಬಾಧೆ ತಾಳಲಾರದೆ ರೈತ ವಿಶ್ವೇಶ್ವರಯ್ಯ ನಾಲೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದ್ದು, ಮಂಡ್ಯ ತಾಲೂಕು ಶಿವಳ್ಳಿ ಸಮೀಪದ ತಿಬ್ಬನಹಳ್ಳಿ ಬಳಿ ಶವ ಪತ್ತೆಯಾಗಿದೆ. ಶ್ರೀರಂಗಪಟ್ಟಣ ತಾಲೂಕಿನ ಚಿಹ್ನೇನಹಳ್ಳಿಯ ನೇರಳಯ್ಯ ಸಣ್ಣಪ್ಪನವರ ಪುತ್ರ ನಾಗರಾಜು ಮೃತ ರೈತ. ಮೃತ ನಾಗರಾಜುವಿಗೆ ಪತ್ನಿ, ಓರ್ವ ಪುತ್ರ ಮತ್ತು ಪುತ್ರಿ ಇದ್ದಾರೆ.

ಶ್ರೀರಂಗಪಟ್ಟಣ:

ಸಾಲ ಬಾಧೆ ತಾಳಲಾರದೆ ರೈತ ವಿಶ್ವೇಶ್ವರಯ್ಯ ನಾಲೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದ್ದು, ಮಂಡ್ಯ ತಾಲೂಕು ಶಿವಳ್ಳಿ ಸಮೀಪದ ತಿಬ್ಬನಹಳ್ಳಿ ಬಳಿ ಶವ ಪತ್ತೆಯಾಗಿದೆ.

ತಾಲೂಕಿನ ಚಿಹ್ನೇನಹಳ್ಳಿಯ ನೇರಳಯ್ಯ ಸಣ್ಣಪ್ಪನವರ ಪುತ್ರ ನಾಗರಾಜು (51) ಮೃತ ರೈತ. ಮೃತ ನಾಗರಾಜುವಿಗೆ ಪತ್ನಿ, ಓರ್ವ ಪುತ್ರ ಮತ್ತು ಪುತ್ರಿ ಇದ್ದಾರೆ.

ನಾಗರಾಜು ಸ್ವಗ್ರಾಮದ ತಮ್ಮ 2 ಎಕರೆ ಜಮೀನಿನಲ್ಲಿ ಕೃಷಿ ಮಾಡಿಕೊಂಡಿದ್ದರು. ಕಬ್ಬು ಬೆಳೆಯಲು ತಾಲೂಕಿನ ಬಲ್ಲೇನಹಳ್ಳಿಯ ಎಂಡಿಸಿಸಿ ಬ್ಯಾಂಕ್, ಕೆ.ಶೆಟ್ಟಹಳ್ಳಿ ಕೆನರಾ ಬ್ಯಾಂಕ್‌ನಲ್ಲಿ ಚಿನ್ನದ ಮೇಲೆ ಸಾಲ ಹಾಗೂ ಎಂ.ಶೆಟ್ಟಹಳ್ಳಿ ವ್ಯವಸಾಯ ಸೇವಾ ಸಹಕಾರ ಬ್ಯಾಂಕ್, ಸ್ತ್ರೀ ಶಕ್ತಿ ಸ್ವ-ಸಹಾಯ ಸಂಘಗಳು ಸೇರಿದಂತೆ ವಿವಿಧೆಡೆ ಕೈಸಾಲ ಸೇರಿ ಸುಮಾರು 8 ಲಕ್ಷ ರು ವರೆಗೂ ಸಾಲ ಮಾಡಿಕೊಂಡಿದ್ದರು ಎಂದು ತಿಳಿದುಬಂದಿದೆ.

ತೀವ್ರ ಕಷ್ಟ ಅನುಭವಿಸಿದ್ದ ಇವರು ಬಡ್ಡಿ ಹಣ ಕಟ್ಟುವ ಸಲುವಾಗಿ ಕೆಲ ತಿಂಗಳುಗಳಿಂದ ತಮ್ಮ ಸುತ್ತಮುತ್ತಲ ವಿವಿಧ ಹಳ್ಳಿಗಳ ಸಂಚರಿಸಿ ಕಾಫಿ-ಚಹಾ ಪುಡಿ ಮಾರುತ್ತಿದ್ದರು ಎನ್ನಲಾಗಿದೆ.

ಕಳೆದ ಅ.6ರಂದು ಪಾಂಡವಪುರ ತಾಲೂಕಿನ ಗಾಣದ ಹೊಸೂರು ಸಮೀಪದ ವಿ.ಸಿ.ನಾಲೆ ಬಳಿ ತಮ್ಮ ದ್ವಿಚಕ್ರ ವಾಹನ ನಿಲ್ಲಿಸಿ ಈತ ನಾಪತ್ತೆಯಾಗಿದ್ದರು. ತೀವ್ರ ಹುಡುಕಾಟದ ಬಳಿಕ ಶಿವಳ್ಳಿ ಸಮೀಪದ ತಿಬ್ಬನಹಳ್ಳಿ ಗ್ರಾಮ ಸಮೀಪ ನಾಲೆಯಲ್ಲಿ ಗುರುವಾರ ರೈತನ ಶವ ದೊರೆತಿದೆ. ಈ ಸಂಬಂಧ ಶಿವಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮರಣೋತ್ತರ ಪರೀಕ್ಷೆ ಬಳಿಕ ವಾರಸುದಾರರಿಗೆ ಶವ ಹಸ್ತಾಂತರಿಸಲಾಗಿದೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ಕಲ್ಲಿನಿಂದ ತಲೆ ಜಜ್ಜಿ 13 ವರ್ಷದ ಬಾಲಕನ ಹತ್ಯೆ
ಕೆ.ಆರ್.ಪೇಟೆ: ಪ್ರಿಯಕರನ ಜೊತೆ ಸೇರಿ ಮೊಮ್ಮಗಳಿಂದ ಅಜ್ಜಿ ಕೊಲೆ