ಸಾಲಬಾಧೆ: ವಿಷ ಸೇವಿಸಿ ರೈತ ಆತ್ಮಹತ್ಯೆ

KannadaprabhaNewsNetwork |  
Published : Nov 20, 2025, 12:15 AM IST
19ಕೆಎಂಎನ್ ಡಿ14 | Kannada Prabha

ಸಾರಾಂಶ

ಸಾಲಬಾಧೆಯಿಂದ ವಿಷ ಸೇವಿಸಿ ರೈತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಾಂಡವಪುರ ತಾಲೂಕಿನ ಅಗಟಹಳ್ಳಿಯಲ್ಲಿ ನಡೆದಿದೆ. ಗ್ರಾಮದ ತ್ರಿಪುರ ಸುಂದರ ಆತ್ಮಹತ್ಯೆಗೆ ಶರಣಾದ ರೈತ. ಈತ ರೈತಸಂಘದ ಅಪ್ಪಟ ಕಾರ್ಯಕರ್ತನಾಗಿ ಶಾಸಕ ದರ್ಶನ್ ಪುಟ್ಟಣ್ಣಯ್ಯ ಬೆಂಬಲಿಗನಾಗಿದ್ದನು.

ಪಾಂಡವಪುರ:

ಸಾಲಬಾಧೆಯಿಂದ ವಿಷ ಸೇವಿಸಿ ರೈತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಅಗಟಹಳ್ಳಿಯಲ್ಲಿ ನಡೆದಿದೆ.

ಗ್ರಾಮದ ತ್ರಿಪುರ ಸುಂದರ (42) ಆತ್ಮಹತ್ಯೆಗೆ ಶರಣಾದ ರೈತ. ಮೃತ ರೈತ ತ್ರಿಪುರ ಸುಂದರ ರೈತಸಂಘದ ಅಪ್ಪಟ ಕಾರ್ಯಕರ್ತನಾಗಿ ಶಾಸಕ ದರ್ಶನ್ ಪುಟ್ಟಣ್ಣಯ್ಯ ಬೆಂಬಲಿಗನಾಗಿದ್ದನು. ತನ್ನ ಜಮೀನಿನಲ್ಲಿ ತರಕಾರಿ, ರಾಗಿ, ರೇಷ್ಮೆ ಬೆಳೆ ಬೆಳೆಯಲು ಕೃಷಿ ಪತ್ತಿನ ಸಹಕಾರ ಸಂಘ, ಮೈಕ್ರೋ ಫೈನಾನ್ಸ್, ಧರ್ಮಸ್ಥಳ ಸಂಘ, ಕೇಂದ್ರ ಹಾಗೂ ಕೈ ಸಾಲ ಸೇರಿದಂತೆ ವಿವಿಧೆಡೆ ಸುಮಾರು 10 ಲಕ್ಷ ರುವರೆಗೂ ಬೆಳೆ ಸಾಲ ಮಾಡಿದ್ದ. ಸಾಲಕ್ಕೆ ಹೆದರಿ ಕಳೆದ ಮೂರು ದಿನಗಳ ಹಿಂದೆ ಜಮೀನಿನಲ್ಲಿ ವಿಷ ಸೇವನೆ ಮಾಡಿ ರೈತ ತ್ರಿಪುರ ಸುಂದರ ಆತ್ಮಹತ್ಯೆಗೆ ಯತ್ನಿಸಿದ್ದರು. ಬಳಿಕ ಮಂಡ್ಯ ಮಿಮ್ಸ್ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

ಲಾರಿ ಡಿಕ್ಕಿ: ಮಹಿಳೆಗೆ ಗಾಯ

ನಾಗಮಂಗಲ:

ರಸ್ತೆ ದಾಟುತ್ತಿದ್ದ ಮಹಿಳೆಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ತೀವ್ರವಾಗಿ ಗಾಯಗೊಂಡಿರುವ ಘಟನೆ ಪಟ್ಟಣದ ಸರ್ಕಾರಿ ಆಸ್ಪತ್ರೆ ಮುಂಭಾಗ ನಡೆದಿದೆ.

ತಾಲೂಕಿನ ಎಸ್.ಚನ್ನಾಪುರ ಗ್ರಾಮದ ಸರೋಜಮ್ಮ (೫೭) ಎಂಬುವವರೇ ಗಾಯಗೊಂಡ ಮಹಿಳೆ. ಕಳೆದ ಹದಿನೈದು ದಿನಗಳ ಹಿಂದೆಯಷ್ಟೇ ಈಕೆಯ ಪತಿ ಈರೇಗೌಡ ಮೃತಪಟ್ಟಿದ್ದರು. ಹಾಲು ಒಕ್ಕೂಟದಿಂದ ೧೫ ಸಾವಿರ ಮೃತರ ಪರಿಹಾರ ನಿಧಿಯಿಂದ ನೀಡುತ್ತಿದ್ದು, ಹಣವನ್ನು ಪಡೆದುಕೊಳ್ಳಲು ನಾಗಮಂಗಲಕ್ಕೆ ಬಂದಿದ್ದರು. ಜೇವರ್ಗಿ-ಶ್ರೀರಂಗಪಟ್ಟಣ ಹೆದ್ದಾರಿಯಲ್ಲಿ ಶ್ರೀರಂಗಪಟ್ಟಣ ಕಡೆಗೆ ಹೋಗುತ್ತಿದ್ದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ನಡೆದಿದೆ. ತಕ್ಷಣ ಆಕೆಗೆ ಪ್ರಥಮ ಚಿಕಿತ್ಸೆ ಕೊಡಿಸಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ. ಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

PREV

Recommended Stories

ಎಟಿಎಂಗೆ ಹಣ ಹಾಕೋ ಕಾರು ತಡೆದು ಭರ್ಜರಿ ₹7 ಕೋಟಿ ದರೋಡೆ
ಆತ್ಮಾಹುತಿ ದಾಳಿ ಹುತಾತ್ಮತೆಗೆ ದಾರಿ : ಉಗ್ರ ಡಾ। ನಬಿ ವಿಡಿಯೋ