ಬೆಂಗಳೂರು ನಗರದಲ್ಲಿ ಮಳೆ ನಿಂತರೂ ಮುಗಿಯುತ್ತಿಲ್ಲ ಅವಾಂತರ

KannadaprabhaNewsNetwork |  
Published : May 02, 2026, 04:00 AM ISTUpdated : May 02, 2026, 04:45 AM IST
Bengaluru

ಸಾರಾಂಶ

ಬುಧವಾರ ನಗರದಲ್ಲಿ ಬಿದ್ದ ರಣಭೀಕರ ಮಳೆಗೆ ಧರೆಗೆ ಬಿದ್ದ ಮರಗಳು, ಕಸತುಂಬಿದ ಚರಂಡಿಗಳನ್ನು ಶುಕ್ರವಾರ ಕಳೆದರೂ ಪಾಲಿಕೆ ತೆರವುಗೊಳಿಸದ ಕಾರಣ ಸಾರ್ವಜನಿಕರು ಪರದಾಡುವಂತಾಗಿತ್ತು. ನಗರದ ಕೆ.ಆರ್.ವೃತ್ತ ಅಂಡರ್ ಪಾಸ್‌ನಲ್ಲಿ ನದಿಯಂತೆ ತುಂಬಿದ್ದ ನೀರನ್ನು ಪಾಲಿಕೆ ಅಧಿಕಾರಿಗಳು ತೆರವು

 ಬೆಂಗಳೂರು :  ಬುಧವಾರ ನಗರದಲ್ಲಿ ಬಿದ್ದ ರಣಭೀಕರ ಮಳೆಗೆ ಧರೆಗೆ ಬಿದ್ದ ಮರಗಳು, ಕಸತುಂಬಿದ ಚರಂಡಿಗಳನ್ನು ಶುಕ್ರವಾರ ಕಳೆದರೂ ಪಾಲಿಕೆ ತೆರವುಗೊಳಿಸದ ಕಾರಣ ಸಾರ್ವಜನಿಕರು ಪರದಾಡುವಂತಾಗಿತ್ತು.

ನಗರದ ಕೆ.ಆರ್.ವೃತ್ತ ಅಂಡರ್ ಪಾಸ್‌ನಲ್ಲಿ ನದಿಯಂತೆ ತುಂಬಿದ್ದ ನೀರನ್ನು ಪಾಲಿಕೆ ಅಧಿಕಾರಿಗಳು, ಅಗ್ನಿಶಾಮಕದಳ ಸಿಬ್ಬಂದಿ ಜಂಟಿ ಕಾರ್ಯಾಚರಣೆ ನಡೆಸಿ ಶುಕ್ರವಾರ ಮಧ್ಯಾಹ್ನದ ವೇಳೆಗೆ ತೆರವುಗೊಳಿಸಿದರೂ ಸಂಚಾರಕ್ಕೆ ಮುಕ್ತವಾಗಿಸಲು ತಿಣುಕಾಡುತ್ತಿದ್ದರು.ನಗರದ ಪಶ್ಚಿಮ ಪಾಲಿಕೆ ವ್ಯಾಪ್ತಿಯ ಹಲವೆಡೆ ಬಿದ್ದ ಮರಗಳನ್ನು ತೆರವುಗೊಳಿಸಿದರೂ ಕೆಲವನ್ನು ತೆರವು ಮಾಡಲು ಸಿಬ್ಬಂದಿಯೇ ಬಂದಿರಲಿಲ್ಲ.  

ಬೃಹತ್ ಮರವನ್ನು ಶುಕ್ರವಾರವೂ ತೆರವುಗೊಳಿಸಿರಲಿಲ್ಲ

ಕ್ರೆಸೆಂಟ್ ರಸ್ತೆಯ ಗುರುರಾಜ ಕಲ್ಯಾಣ ಮಂಟಪ ಹಿಂಭಾಗದಲ್ಲಿ ರಸ್ತೆಗೆ ಅಡ್ಡಲಾಗಿ ಬಿದ್ದಿರುವ ಬೃಹತ್ ಮರವನ್ನು ಶುಕ್ರವಾರವೂ ತೆರವುಗೊಳಿಸಿರಲಿಲ್ಲ. ಮರದ ಜೊತೆಗೆ ಲೈಟ್ ಕಂಬಗಳೂ ಮುರಿದು ಬಿದ್ದಿವೆ. ಕೇಬಲ್‌ಗಳು ಅಪಾಯಕಾರಿಯಾಗಿ ಜೋತು ಬಿದ್ದಿವೆ. ರಸ್ತೆಯಲ್ಲಿದ್ದ ಕಾರು ಮತ್ತು ಎರಡು ಬೈಕ್‌ಗಳು ಜಖಂಗೊಂಡಿವೆ. ಖಾಸಗಿ ಆಸ್ಪತ್ರೆ ಹಾಗೂ ವಿವಿಧ ಕಚೇರಿ ಮತ್ತು ಹೊಟೇಲ್‌ಗಳಿಗೆ ಬರುವವರಿಗೆ ಈ ರಸ್ತೆಯೇ ಮುಖ್ಯ ಸಂಪರ್ಕ ರಸ್ತೆಯಾಗಿದೆ. ಸಂಚಾರ ಬಂದ್‌ನಿಂದ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದರು. ಸಂಜೆಯ ವೇಳೆಗೆ ಕ್ರೇನ್ ಮೂಲಕ ತೆರವುಗೊಳಿಸಿತಾದರೂ ತೆರವು ಕಾರ್ಯ ಪೂರ್ಣಗೊಳಿಸಿರಲಿಲ್ಲ.

ರಾಜಾಜಿನಗರ ವಾರಿಯರ್ ಬೇಕರಿ ಬಳಿ ಬಿದ್ದಿರುವ ಬೃಹತ್ ಮರವನ್ನು ಪಾಲಿಕೆ ಅಧಿಕಾರಿಗಳು ತೆರವುಗೊಳಿಸಲು ಕ್ರಮ ಕೈಗೊಂಡಿಲ್ಲ. ಮರ ರಸ್ತೆ ಮತ್ತು ಫುಟ್‌ಪಾತ್‌ ಮೇಲೆ ಬಿದ್ದಿರುವ ಪರಿಣಾಮ ವಾಹನ ಸವಾರರು ಹಾಗೂ ಪಾದಚಾರಿಗಳು ಪರದಾಡುವಂತಾಗಿದೆ.ಜಯನಗರ 2ನೇ ಬ್ಲಾಕ್ 7ನೇ ಮುಖ್ಯ ರಸ್ತೆ ಹಾಗೂ ಸೆಂಟ್ರಲ್ ಕಾಲೇಜು ರಸ್ತೆಯಲ್ಲೂ ಮರಗಳು ಬಿದ್ದಿದ್ದು, ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ. ಎರಡು ದಿನಗಳಾದರೂ ಪಾಲಿಕೆ ಸಿಬ್ಬಂದಿ ಬಾರದ ಕಾರಣ ಸಂಚಾರ ಪೊಲೀಸರು ಸ್ವತಃ ಮರ ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.

ನಗರದ ಪಶ್ಚಿಮ ಪಾಲಿಕೆ ವ್ಯಾಪ್ತಿಯ ಮಲ್ಲೇಶ್ವರಂ, ರಾಜಾಜಿನಗರ, ಮಹಾಲಕ್ಷ್ಮಿ ಲೇ ಔಟ್, ವಿಜಯನಗರ, ಗೋವಿಂದರಾಜನಗರ, ಆರ್.ಆರ್.ನಗರ, ಯಶವಂತಪುರ, ದಾಸರಹಳ್ಳಿ(4 ವಾರ್ಡ್ ), ಬಸವನಗುಡಿ, ಪದ್ಮನಾಭನಗರ(4 ವಾರ್ಡ್)ಗಳಲ್ಲಿ ಮರಗಳ ತೆರವು ಕಾರ್ಯ ಮುಂದುವರಿದಿತ್ತು.

ಒಟ್ಟು 152 ಮರಗಳು ನೆಲಕ್ಕೆ ಬಿದ್ದಿದ್ದವು

ಇಲ್ಲಿ ಒಟ್ಟು 152 ಮರಗಳು ನೆಲಕ್ಕೆ ಬಿದ್ದಿದ್ದವು, ಇವುಗಳಲ್ಲಿ 124 ಮರಗಳನ್ನು ತೆರವುಗೊಳಿಸಲಾಗಿದೆ. ನಗರದಲ್ಲಿ ಅತ್ಯಂತ ಹೆಚ್ಚು ಎಂದರೆ 481 ಮರಗಳು ಮುರಿದು ಬಿದ್ದಿದ್ದು, 367 ಕೊಂಬೆಗಳನ್ನು ತೆರವುಗೊಳಿಸಲಾಗಿದೆ. ಇಲ್ಲಿ ಇನ್ನೂ 28 ಮರಗಳು ಹಾಗೂ 114 ಕೊಂಬೆಗಳು ರಸ್ತೆಯಲ್ಲಿಯೇ ಬಿದ್ದಿವೆ.

ಉತ್ತರ ಪಾಲಿಕೆ ವ್ಯಾಪ್ತಿಯ ದಾಸರಹಳ್ಳಿ ಕೆಲವು ವಾರ್ಡ್ ಗಳು, ಆರ್.ಆರ್.ನಗರ ಕೆಲವು ವಾರ್ಡ್ ಗಳು, ಹೆಬ್ಬಾಳ, ಯಲಹಂಕ, ಬ್ಯಾಟರಾಯನಪುರ, ಸರ್ವಜ್ಞ ನಗರ, ಪುಲಿಕೇಶಿನಗರ ವ್ಯಾಪ್ತಿಯಲ್ಲಿ ಮರಗಳು ಬಿದ್ದು ಸಂಚರಿಸಲು ರಸ್ತೆಗಳಿಲ್ಲದೆ ವಾಹನ ಸವಾರರ ಪರದಾಟ ಮುಂದುವರಿದಿತ್ತು.ಇಲ್ಲಿ ಕೆಳಗೆ ಬಿದ್ದ ಮರಗಳು 35, ಕೊಂಬೆಗಳು 102, ಇವುಗಳಲ್ಲಿ ತೆರವುಗೊಳಿಸಲಾದ ಮರಗಳು 35, ಕೊಂಬೆಗಳ ಸಂಖ್ಯೆ 94,ಇಲ್ಲಿ ಮರಗಳನ್ನು ತೆರವುಗೊಳಿಸಲಾಗಿದ್ದು, 8 ಕೊಂಬೆಗಳು ಮಾತ್ರ ಬಾಕಿ ಇವೆ.

ನಗರ ಕೇಂದ್ರ ಪಾಲಿಕೆ ವ್ಯಾಪ್ತಿಯ ಸಿ.ವಿ.ರಾಮನ್ ನಗರ, ಶಾಂತಿನಗರ, ಗಾಂಧಿನಗರ, ಶಿವಾಜಿನಗರ, ಚಾಮರಾಜಪೇಟೆ, ಚಿಕ್ಕಪೇಟೆಗಳಲ್ಲಿ ಇನ್ನೂ ಮರಗಳನ್ನು ತೆರವುಗೊಳಿಸಬೇಕಾಗಿದ್ದು, ಅತ್ಯಂತ ಜನನಿಬಿಢ ಪ್ರದೇಶಗಳಾದ ಇಲ್ಲಿ ವ್ಯಾಪಾರಿಗಳು ಹಾಗೂ ಗ್ರಾಹಕರು ಸುತ್ತಿ ಬಳಸಿ ಅಂಗಡಿಗಳಿಗೆ ತೆರಳುತ್ತಿರುವ ದೃಶ್ಯ ಕಂಡುಬಂತು.ಇಲ್ಲಿ ಒಟ್ಟು 121 ಮರಗಳು ಬಿದ್ದಿದ್ದು, 204 ಮರದ ಕೊಂಬೆಗಳು ಮುರಿದು ಬಿದ್ದಿದ್ದವು. ಇವುಗಳಲ್ಲಿ 97 ಮರಗಳನ್ನು ತೆರವುಗೊಳಿಸಿದ್ದು. 159 ಕೊಂಬೆಗಳನ್ನು ತೆರವು ಮಾಡಲಾಗಿದೆ. ಇನ್ನೂ 24 ಮರಗಳು, 45 ಕೊಂಬೆಗಳು ರಸ್ತೆಯಲ್ಲೇ ಬಿದ್ದಿವೆ.

ನಗರದ ಪೂರ್ವ ಪಾಲಿಕೆ ವ್ಯಾಪ್ತಿಯ ಮಹದೇವಪುರ, ಕೆ.ಆರ್.ಪುರಂ ವ್ಯಾಪ್ತಿಯ ಹಲವು ರಸ್ತೆಗಳಲ್ಲಿ 6 ಮರಗಳು ಉರುಳಿಬಿದ್ದು 8ಕೊಂಬೆಗಳು ಮುರಿದಿದ್ದವು. ಇಲ್ಲಿ ಪಾಲಿಕೆ ಸಿಬ್ಬಂದಿ ಎಲ್ಲಾ ಮರಗಳನ್ನು ತೆರವುಗೊಳಿಸಿದ್ದಾರೆ.

ನಗರದ ದಕ್ಷಿಣ ಪಾಲಿಕೆ ವ್ಯಾಪ್ತಿಯ ಬೊಮ್ಮನಹಳ್ಳಿ, ಬೆಂಗಳೂರು ದಕ್ಷಿಣ, ಬಿಟಿಎಂ ಲೇ ಔಟ್, ಜಯನಗರ, ಪದ್ಮನಾಭನಗರದ ನಾಲ್ಕು ವಾರ್ಡ್ ಗಳಲ್ಲಿ 62 ಮರಗಳು ಉರುಳಿಬಿದ್ದು, 186 ಕೊಂಬೆಗಳು ಮುರಿದುಬಿದ್ದಿದ್ದವು. ಇವುಗಳಲ್ಲಿ 56 ಮರಗಳನ್ನು ತೆರವುಗೊಳಿಸಲಾಗಿದೆ, 171 ಕೊಂಬೆಗಳನ್ನು ಹೊರಗೆ ಸಾಗಿಸಲಾಗಿದೆ. ಇನ್ನೂ 6 ಮರಗಳು, ಹಾಗೂ 15 ಕೊಂಬೆಗಳು ರಸ್ತೆಯಲ್ಲಿಯೇ ಬಿದ್ದಿವೆ.ಧರೆಗುರುಳಿದ ಮರ376

ಮುರಿದು ಬಿದ್ದ ಕೊಂಬೆ981

ತೆರವುಗೊಳಿಸಿದ ಮರ318

ತೆರವುಗೊಳಿಸಿದ ಕೊಂಬೆ799

ಬಾಕಿ ಬಿದ್ದ ಮರಗಳು58

ರಸ್ತೆಯಲ್ಲಿರುವ ಕೊಂಬೆಗಳು 

182448 ಅಪಾಯಕಾರಿ ಗುರತಿಸಿದ ಪೊಲೀಸರು

ನಗರದ ವಿವಿಧೆಡೆ ಅಪಾಯಕಾರಿ ಸ್ಥಿತಿಯಲ್ಲಿರುವ 448 ಮರಗಳನ್ನು ಸಂಚಾರ ಪೊಲೀಸರು ಗುರುತಿಸಿ ಜಿಬಿಎ ಮಾಹಿತಿ ನೀಡಿದ್ದಾರೆ. ಆದ್ಯತೆ ಮೇಲೆ ಮರಗಳನ್ನು ಪೂರ್ತಿಯಾಗಿ ಕತ್ತರಿಸುವುದಾ ಅಥವಾ ರೆಂಬೆ, ಕೊಂಬೆ ಕತ್ತರಿಸಬೇಕೇ ಎನ್ನುವುದನ್ನು ಪಾಲಿಕೆ ನಿರ್ಧರಿಸುತ್ತದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.
Read more Articles on

Recommended Stories

ಜಾಲತಾಣಗಳಲ್ಲಿ ಮಹಿಳೆಯರಿಗೆ ಗಾಳ ಹಾಕಿ ಬ್ಲ್ಯಾಕ್ಮೇಲ್‌ ಮಾಡಿದ ಕಿರುತರೆ ನಟ ಬಂಧನ
ಮಫ್ತಿಯಲ್ಲಿದ್ದ ಮುಖ್ಯ ಪೇದೆಯಿಂದ ಹಲ್ಲೆ, ದೃಷ್ಟಿ ಕಳೆದುಕೊಂಡ ವ್ಯಕ್ತಿ