ಬೆಂಗಳೂರಿನ ಟೆಕ್ಕಿ ಆತ್ಮಹತ್ಯೆ-ಆರ್ಥಿಕ ಸಾಮರ್ಥ್ಯವನ್ನು ಮೀರಿ ಕೋಟ್ಯಂತರ ಹಣವನ್ನು ವಸೂಲಿ : ನಟಿ ಕಂಗನಾ ಕಿಡಿ

KannadaprabhaNewsNetwork |  
Published : Dec 12, 2024, 01:48 AM ISTUpdated : Dec 12, 2024, 04:30 AM IST
ಕಂಗನಾ | Kannada Prabha

ಸಾರಾಂಶ

 ಟೆಕ್ಕಿ ಅತುಲ್‌ ಸುಬಾಷ್‌ ಆತ್ಮಹತ್ಯೆ  ಪ್ರಕರದ ಬಗ್ಗೆ  ಕಂಗನಾ ರಾಣಾವತ್ ಪ್ರತಿಕ್ರಿಯಿಸಿದ್ದು, ‘ಪತ್ನಿಯಿಂದ ಕಿರುಕುಳಕ್ಕೆ ಒಳಗಾದ ಬಗ್ಗೆ ಟೆಕ್ಕಿ ಮಾಡಿರುವ ವಿಡಿಯೋ ಹೃದಯ ವಿದ್ರಾಕವಾಗಿದೆ. ಆತನ ಆರ್ಥಿಕ ಸಾಮರ್ಥ್ಯವನ್ನು ಮೀರಿ ಕೋಟ್ಯಂತರ ಹಣವನ್ನು ವಸೂಲಿ ಮಾಡಲಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ನವದೆಹಲಿ: ಪತ್ನಿ ಕಿರುಕುಳಕ್ಕೆ ಬೇಸತ್ತು ಬೆಂಗಳೂರಿನ ಟೆಕ್ಕಿ ಅತುಲ್‌ ಸುಬಾಷ್‌ ಆತ್ಮಹತ್ಯೆ ಮಾಡಿಕೊಂಡ ಪ್ರಕರದ ಬಗ್ಗೆ ನಟಿ, ಬಿಜೆಪಿ ಸಂಸದೆ ಕಂಗನಾ ರಾಣಾವತ್ ಪ್ರತಿಕ್ರಿಯಿಸಿದ್ದು, ‘ಪತ್ನಿಯಿಂದ ಕಿರುಕುಳಕ್ಕೆ ಒಳಗಾದ ಬಗ್ಗೆ ಟೆಕ್ಕಿ ಮಾಡಿರುವ ವಿಡಿಯೋ ಹೃದಯ ವಿದ್ರಾಕವಾಗಿದೆ. ಆತನ ಆರ್ಥಿಕ ಸಾಮರ್ಥ್ಯವನ್ನು ಮೀರಿ ಕೋಟ್ಯಂತರ ಹಣವನ್ನು ವಸೂಲಿ ಮಾಡಲಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಮಾತನಾಡಿದ ಕಂಗನಾ, ‘ಅತುಲ್‌ ಅವರ ವಿಡಿಯೋ ಹೃದಯ ವಿದ್ರಾವಕವಾಗಿದ್ದು, ಇಡೀ ದೇಶಕ್ಕೆ ಆಘಾತವಾಗಿದೆ. ನಕಲಿ ಸ್ತ್ರೀವಾದ ಖಂಡನೀಯ. ಅವರ ಆರ್ಥಿಕ ಸಾಮರ್ಥ್ಯಕ್ಕಿಂತ ಹೆಚ್ಚಿನ ಹಣವನ್ನು ಸುಲಿಗೆ ಮಾಡಲಾಗುತ್ತಿದೆ. ಆ ವ್ಯಕ್ತಿ ತೀವ್ರ ಒತ್ತಡಕ್ಕೆ ಒಳಗಾಗಿ ಆಘಾತದ ಹೆಜ್ಜೆಯನ್ನಿಟ್ಟರು’ ಎಂದು ಹೇಳಿದ್ದಾರೆ.

‘ಆದರೆ ಒಬ್ಬ ಮಹಿಳೆಯ ತಪ್ಪಿನಿಂದ ಇತರ ಮಹಿಳೆಯರು ಪ್ರತಿದಿನ ಕಿರುಕುಳಕ್ಕೆ ಒಳಗಾಗುವುದನ್ನು ಅಲ್ಲಗೆಳೆಯಲು ಆಗದು. ಶೇ.99ರಷ್ಟು ಮದುವೆ ಪ್ರಕರಣಗಳಲ್ಲಿ ಪುರುಷರದ್ದೇ ತಪ್ಪಿರುತ್ತದೆ ’ ಎಂದೂ ಹೇಳಿದ್ದಾರೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ಆನ್‌ಲೈನ್‌ನಲ್ಲಿ ಪರಿಚಯವಾದ ಯುವಕನಿಂದ ಗೃಹಿಣಿಗೆ ಕಿರುಕುಳ
20 ವಾಹನಕ್ಕೆ ಗುದ್ದಿಸಿದ ಟ್ರಕ್‌ನ್ನು 12 ಕಿ.ಮೀ. ಚೇಸ್‌ ಮಾಡಿದ ಪೊಲೀಸರು