ಜಮೀನಿಗೆ ತೆರಳುತ್ತಿದ್ದ ವೇಳೆ ಆಕಸ್ಮಿಕವಾಗಿ ವಿಸಿ ನಾಲೆ ಟ್ರ್ಯಾಕ್ಟರ್ ಪಲ್ಟಿಯಾಗಿ ರೈತ ಸಾವನ್ನಪ್ಪಿರುವ ಘಟನೆ ತಾಲೂಕಿನ ಕಾಳೇನಹಳ್ಳಿಯಲ್ಲಿ ಬಳಿ ನಡೆದಿದೆ.
ಪಾಂಡವಪುರ : ಜಮೀನಿಗೆ ತೆರಳುತ್ತಿದ್ದ ವೇಳೆ ಆಕಸ್ಮಿಕವಾಗಿ ವಿಸಿ ನಾಲೆ ಟ್ರ್ಯಾಕ್ಟರ್ ಪಲ್ಟಿಯಾಗಿ ರೈತ ಸಾವನ್ನಪ್ಪಿರುವ ಘಟನೆ ತಾಲೂಕಿನ ಕಾಳೇನಹಳ್ಳಿಯಲ್ಲಿ ಬಳಿ ನಡೆದಿದೆ.
ಗ್ರಾಮದ ರೈತ ಕಾಳೇಗೌಡ ಪುತ್ರ ನವೀನ್ (34) ಮೃತ ವ್ಯಕ್ತಿ. ಜಮೀನಿನ ಉಳಿಮೆ ಮಾಡುವುದಕ್ಕಾಗಿ ವಿಸಿ ನಾಲೆ ಏರಿ ಮೇಲೆ ಟ್ರ್ಯಾಕ್ಟರ್ ತೆಗೆದುಕೊಂಡು ಹೋಗುವ ವೇಳೆ ಆಯತಪ್ಪಿ ಟ್ರ್ಯಾಕ್ಟರ್ ಸಮೇತ ನವೀನ್ ವಿಸಿ ನಾಲೆಗೆ ಉರುಳಿ ಬಿದಿದ್ದಾನೆ.
ವಿಸಿ ನಾಲೆಯ ತುಂಬ ನೀರು ಬರುತ್ತಿದ್ದ ಹಿನ್ನೆಲೆಯಲ್ಲಿ ನವೀನ್ ಸಾವನ್ನಪ್ಪಿದ್ದಾನೆ. ನಾಲೆ ತುಂಬ ನೀರು ಇದ್ದ ಹಿನ್ನೆಲೆಯಲ್ಲಿ ಮೃತ ದೇಹ ಪತ್ತೆ ಮಾಡುವುದು ಕಷ್ಟವಾದ ಹಿನ್ನೆಲೆಯಲ್ಲಿ ನಾಲೆ ನೀರನ್ನು ಕಡಿಮೆ ಪೊಲೀಸರು ನಂತರ ಮೃತ ದೇಹಕ್ಕೆ ಹುಡುಕಾಟ ನಡೆಸಿದಾಗ ಟ್ರ್ಯಾಕ್ಟರ್ ಬಿದಿದ್ದ ಸ್ಥಳದಿಂದ ಸ್ವಲ್ಪ ದೂರದಲ್ಲಿ ಮೃತ ದೇಹ ಪತ್ತೆಯಾಗಿದೆ.
ಮಂಡ್ಯ ಮಿಮ್ಸ್ ಆಸ್ಪತ್ರೆಯಲ್ಲಿ ಶವಪರೀಕ್ಷೆ ನಡೆಸಿ ಪೊಲೀಸರು ವಾರಸ್ಸುದಾರರಿಗೆ ಮೃತದೇಹ ಒಪ್ಪಿಸಿದ್ದಾರೆ.
ಈ ಘಟನೆ ಸಂಬಂಧ ಮೇಲುಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಪೊಲೀಸರಿಂದ 1.90 ಕೆಜಿ ಗಾಂಜಾ ವಶ, ಮಹಿಳೆ ಬಂಧನ
ಮಳವಳ್ಳಿ: ಪಟ್ಟಣದ ಮಡಿವಾಳರ ಬೀದಿ ಮನೆ ಮೇಲೆ ಭಾನುವಾರ ರಾತ್ರಿ ದಾಳಿ ನಡೆಸಿದ ಪಟ್ಟಣದ ಪೊಲೀಸರು ಮಹಿಳೆಯನ್ನು ಬಂಧಿಸಿ ಸುಮಾರು 1.90 ಕೆ.ಜಿ.ಗಾಂಜಾ ವಶಪಡಿಸಿಕೊಂಡಿದ್ದಾರೆ.ಕೋಟೆ ಮಡಿವಾಳರ ಬೀದಿ ಲಕ್ಷ್ಮಿ(58) ಬಂಧಿತ ಮಹಿಳೆ. ಮನೆಯಲ್ಲಿ ಗಾಂಜಾ ಮಾರಾಟದ ಖಚಿತ ಮಾಹಿತಿ ಮೇರೆಗೆ ಡಿವೈಎಸ್ಪಿ ವಿ.ಕೃಷ್ಣಪ್ಪ ಹಾಗೂ ಸಿಪಿಐ ಎಂ.ರವಿಕುಮಾರ್ ನೇತೃತ್ವದಲ್ಲಿ ದಾಳಿ ಮಾಡಿದ ಪೊಲೀಸರು ಮಹಿಳೆಯನ್ನು ಬಂಧಿಸಿ ಮನೆ ಅಡುಗೆ ಕೋಣೆಯಲ್ಲಿದ್ದ 1 ಕೆ.ಜಿ.870 ಗ್ರಾಂ ತೂಕದ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತ ಮಹಿಳೆಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಕಾರ್ಯಾಚರಣೆಯಲ್ಲಿ ಪಿಎಸ್ಐ ಜಯಲಕ್ಷ್ಮಮ್ಮ, ಎಎಸ್ಐ ಸುರೇಶ್, ಸಿಬ್ಬಂದಿ ಹರ್ಷವರ್ಧನ್, ಮನೋಜ್, ಹರ್ಷವರ್ಧನ್, ಪ್ರಕಾಶ್, ಮಾದೇಶ್, ಮಧು ಇದ್ದರು.ಈ ಸಂಬಂಧ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.