ಅಕ್ಕಸಾಲಿಗ ಸಮುದಾಯದವರ ವಿರುದ್ಧ ಅವಹೇಳನ : ಆರ್‌.ಆರ್‌.ಗೋಲ್ಡ್‌ ಪ್ಯಾಲೇಸ್‌ ವಿರುದ್ಧ ಆಕ್ರೋಶ

KannadaprabhaNewsNetwork |  
Published : Mar 06, 2025, 01:32 AM ISTUpdated : Mar 06, 2025, 04:25 AM IST
Is it OK to wear silver and gold jewelry together

ಸಾರಾಂಶ

ಅಕ್ಕಸಾಲಿಗ ಸಮುದಾಯದವರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿರುವ ಆರ್‌.ಆರ್‌.ಗೋಲ್ಡ್‌ ಪ್ಯಾಲೇಸ್‌ನವರು ಕ್ಷಮೆ ಯಾಚಿಸಬೇಕು ಎಂದು ವಿಶ್ವಕರ್ಮ ಸೇವಾ ಸಮಿತಿ ಅಧ್ಯಕ್ಷ ಮಧುಸೂದನ್‌ ಆಗ್ರಹಿಸಿದರು.

 ಬೆಂಗಳೂರು : ಅಕ್ಕಸಾಲಿಗ ಸಮುದಾಯದವರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿರುವ ಆರ್‌.ಆರ್‌.ಗೋಲ್ಡ್‌ ಪ್ಯಾಲೇಸ್‌ನವರು ಕ್ಷಮೆ ಯಾಚಿಸಬೇಕು ಎಂದು ವಿಶ್ವಕರ್ಮ ಸೇವಾ ಸಮಿತಿ ಅಧ್ಯಕ್ಷ ಮಧುಸೂದನ್‌ ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಕ್ಕಸಾಲಿಗರು ಪ್ರತಿ 10 ಗ್ರಾಂಗೆ 1 ಗ್ರಾಂ ಚಿನ್ನವನ್ನು ವಂಚಿಸುತ್ತಾರೆ ಎಂದು ಆರ್‌.ಆರ್‌.ಗೋಲ್ಡ್‌ ಪ್ಯಾಲೇಸ್‌ನವರು ಹೇಳಿಕೆ ನೀಡಿರುವುದು ಅಕ್ಕಸಾಲಿಗ ಸಮುದಾಯಕ್ಕೆ ಮಾಡಿದ ಅವಮಾನವಾಗಿದೆ. ಆದ್ದರಿಂದ ತಕ್ಷಣ ಹೇಳಿಕೆಯನ್ನು ವಾಪಸ್‌ ಪಡೆದು ಸಮುದಾಯದ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದರು.

ಅಕ್ಕಸಾಲಿಗ ಸಮುದಾಯದವರು ತಲೆಮಾರುಗಳಿಂದ ಸಾಂಪ್ರದಾಯಿಕ ಕರಕುಶಲ ಪದ್ಧತಿಯನ್ನು ಸಂರಕ್ಷಿಸುತ್ತಿದ್ದು ನ್ಯಾಯಯುತವಾಗಿ ವ್ಯಾಪಾರ ಮಾಡುತ್ತಿದ್ದಾರೆ. ಹೀಗಿರುವಾಗ ಸಮುದಾಯದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದು ಖಂಡನೀಯ. ತಕ್ಷಣ ಆರ್.ಆರ್.ಗೋಲ್ಡ್ ಪ್ಯಾಲೇಸ್‌ನವರು ಕ್ಷಮೆ ಕೇಳಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ಶಾಸಕ ಬೈರತಿಗೆ ಕಂಟಕವಾದ ಕುಂಭಮೇಳ ಯಾತ್ರೆ!
5 ಜಿಲ್ಲೆಗಳಿಗೆ 2 ದಿನ ಶೀತ ಅಲೆ ರೆಡ್‌ ಅಲರ್ಟ್‌