)
ಕನ್ನಡಪ್ರಭ ವಾರ್ತೆ ಬೆಂಗಳೂರು
ನೈಜೀರಿಯಾ ಪ್ರಜೆ ಜಸ್ಟೀಸ್, ಜೋಚಿನ್ ಒನೆಬುಚಿ, ನ್ವೋಯೆ ಬೆಂಜಮಿನ್ ಒಬಿನ್ನಾ, ಡಿಶಾ ದೇಬೇಂದ್ರ ನಾಯಕ್, ಲಾಲಮ್ ಪ್ರೂದ್ವಿರಾಜ್, ಕೇರಳದ ಸಾಮ್ಯುಯಲ್ ಜಾನ್ ಬಂಧಿತರಾಗಿದ್ದು, ಆರೋಪಿಗಳಿಂದ 54 ಗ್ರಾಂ ಎಡಿಎಂಎ ಕ್ರಿಸ್ಟೆಲ್, 410 ಗ್ರಾಂ ಹೈಡ್ರೋ ಗಾಂಜಾ, 18 ಕೇಜಿ ಗಾಂಜಾ ಸೇರಿದಂತೆ ₹44 ಲಕ್ಷ ಮೌಲ್ಯದ ಡ್ರಗ್ಸ್ ಹಾಗೂ 4 ಮೊಬೈಲ್‌ಗಳನ್ನು ಜಪ್ತಿ ಮಾಡಲಾಗಿದೆ.
ಹಲವು ದಿನಗಳಿಂದ ಪ್ರತ್ಯೇಕವಾಗಿ ಈ ಆರು ಮಂದಿ ಡ್ರಗ್ಸ್ ದಂಧೆಯಲ್ಲಿ ತೊಡಗಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದು ಯಲಹಂಕ, ಕೆಂಪೇಗೌಡನಗರ (ಕೆಜಿ ನಗರ), ರಾಮಮೂರ್ತಿ ನಗರ, ಹೆಣ್ಣೂರು ಹಾಗೂ ರಾಜಗೋಪಾಲನಗರ ಠಾಣೆಗಳ ವ್ಯಾಪ್ತಿ ಸಿಸಿಬಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದೆ ಎಂದು ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ.ಖಾಸಗಿ ಕಂಪನಿಯಲ್ಲಿ ಮಾರುಕಟ್ಟೆ ವಿಭಾಗದ ವ್ಯವಸ್ಥಾಪಕನಾಗಿ ಲಾಲಮ್ ಕೆಲಸ ಮಾಡುತ್ತಿದ್ದು, ಯಲಹಂಕ ಸಮೀಪ ಆತ ವಾಸವಾಗಿದ್ದ. ಹೊರ ರಾಜ್ಯಗಳಿಂದ ಕಡಿಮೆ ಬೆಲೆಗೆ ಗಾಂಜಾ ಖರೀದಿಸಿ ನಗರದಲ್ಲಿ ಆತ ದುಬಾರಿ ಬೆಲೆಗೆ ಮಾರುತ್ತಿದ್ದ. ಈತನ ಬಳಿ ₹8 ಲಕ್ಷ ಮೌಲ್ಯದ 8.1 ಕೇಜಿ ಗಾಂಜಾ ಜಪ್ತಿಯಾಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಸ್ವಿಗ್ಗಿ ಡೆಲವರಿ ಬಾಯ್
ವಿದೇಶಿ ಪೆಡ್ಲರ್ ಗಲಾಟೆ
5 ವರ್ಷಗಳ ಹಿಂದೆ ಬ್ಯುಸಿನೆಸ್ ವೀಸಾದಡಿ ನಗರಕ್ಕೆ ಬಂದಿದ್ದ ಆರೋಪಿ, ತನ್ನ ಸೋದರನ ಜತೆ ಸೇರಿಕೊಂಡು ನಗರದಲ್ಲಿ ಡ್ರಗ್ಸ್ ದಂಧೆ ನಡೆಸುತ್ತಿದ್ದ. ಈ ಪೆಡ್ಲರ್‌ನಿಂದ 54 ಗ್ರಾಂ ಎಡಿಎಂಎ ಕ್ರಿಸ್ಟೆಲ್ ಜಪ್ತಿ ಮಾಡಲಾಗಿದೆ. ತಪ್ಪಿಸಿಕೊಂಡಿರುವ ಆತನ ಸೋದರನ ಪತ್ತೆಗೆ ತನಿಖೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಅಕ್ರಮವಾಗಿ ನೆಲೆಸಿದ್ದರೂ
ಇನ್ನು ರಾಮಮೂರ್ತಿ ನಗರದಲ್ಲಿ ಮತ್ತಿಬ್ಬರು ವಿದೇಶಿ ಪ್ರಜೆಗಳು ಸಿಸಿಬಿ ಗಾಳಕ್ಕೆ ಸಿಲುಕಿದ್ದಾರೆ. ವೃತ್ತಿಪರ ಪೆಡ್ಲರ್‌ಗಳಾಗಿದ್ದ ಜೋಚಿನ್ ಒನೆಬುಚಿ, ನ್ವೋಯೆ ಬೆಂಜಮಿನ್ ಒಬಿನ್ನಾನನ್ನು ವಶಕ್ಕೆ ಪಡೆದು ಡಿಟೆನ್ಷನ್ ಸೆಂಟರ್‌ಗೆ ಕಳುಹಿಸಲಾಗಿದೆ. ಈ ಇಬ್ಬರು ವೀಸಾ ಅವಧಿ ಮುಗಿದ ಬಳಿಕ ನಗರದಲ್ಲಿ ಕಾನೂನು ಬಾಹಿರವಾಗಿ ನೆಲೆಸಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.