ನಾಗಮಂಗಲ:
ತಾಲೂಕಿನ ದೇವಲಾಪುರ ಹೋಬಳಿಯ ಕಸಲಗೆರೆ ಗ್ರಾಮದ ಶಿವಲಿಂಗೇಗೌಡರ ಪುತ್ರ ಗಂಗರಾಜು (61) ಮತ್ತು ಆನಂದ್ ಪುತ್ರ ಜಯಶಂಕರ(33) ಘಟನೆಯಲ್ಲಿ ಮೃತಪಟ್ಟವರು.
ತಾಲೂಕಿನ ಕಾಚೇನಹಳ್ಳಿಯಲ್ಲಿ ನಡೆಯುತ್ತಿದ್ದ ಗ್ರಾಮದೇವತೆ ಹಬ್ಬಕ್ಕೆಂದು ಕಸಲಗೆರೆ ಗ್ರಾಮದಿಂದ ಗಂಗರಾಜು ಮತ್ತು ಜಯಶಂಕರ ಬೈಕ್ ನಲ್ಲಿ ತೆರಳುತಿದ್ದ ವೇಳೆ ಬೆಳ್ಳೂರು ಕಡೆಯಿಂದ ನಾಗಮಂಗಲಕ್ಕೆ ಬರುತ್ತಿದ್ದ ಕಾರು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಈ ಅವಘಡ ಸಂಭವಿಸಿದೆ.ಡಿಕ್ಕಿಯ ರಭಸಕ್ಕೆ ಬೈಕ್ ಸಂಪೂರ್ಣ ಜಖಂಗೊಂಡು ಗಂಗರಾಜು ಮತ್ತು ಜಯಶಂಕರ ಸ್ಥಳದಲ್ಲೇ ಕೊನೆಯುಸಿರೆಳೆದರು. ಘಟನೆ ಸಂಭವಿಸುತ್ತಿದ್ದಂತೆ ಚಾಲಕ ಕಾರು ಬಿಟ್ಟು ಪರಾರಿಯಾಗಿದ್ದನು.
ಶನಿವಾರ ಬೆಳಗ್ಗೆ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಗಂಗರಾಜ್ ಮತ್ತು ಜಯಶಂಕರ ಅವರ ಮೃತದೇಹವನ್ನು ವಾರಸುದಾರರಿಗೆ ಹಸ್ತಾಂತರಿಸಲಾಯಿತು. ಆಸ್ಪತ್ರೆ ಆವರಣದಲ್ಲಿ ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟುವಂತಿತ್ತು. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ನಾಗಮಂಗಲ ಠಾಣೆ ಪೊಲೀಸರು ಮುಂದಿನ ಕಾನೂನು ಕ್ರಮ ವಹಿಸಿದ್ದಾರೆ. ಕಲ್ಲು ತೋರಿಸಿ ಬೆದರಿಸಿ ಯುವಕನಿಂದ ಬಾಲಕಿ ಅಪಹರಣಕನ್ನಡಪ್ರಭ ವಾರ್ತೆ ಮಂಡ್ಯ
ಕಲ್ಲು ತೋರಿಸಿ ಬೆದರಿಸಿ ಬಾಲಕಿಯೊಬ್ಬಳನ್ನು ಯುವಕನೋರ್ವ ಅಪಹರಿಸಿಕೊಂಡು ಹೋಗಿರುವ ಘಟನೆ ನಗರದ ಗುತ್ತಲು ಬಡಾವಣೆಯಲ್ಲಿ ನಡೆದಿದೆ.ಇಲ್ಲಿನ ಮಾರುತಿ ನಗರದ ಚಂದು ಅಲಿಯಾಸ್ ಕಾಕ್ರೋಚ್ ಎಂಬಾತ ಅದೇ ಬಡಾವಣೆಯ ಬಾಲಕಿಯನ್ನು ಅಪಹರಿಸಿರುವುದಾಗಿ ಪೂರ್ವ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮಾ.೧೩ರಂದು ಬೆಳಗ್ಗೆ ೯.೩೦ರ ಸಮಯದಲ್ಲಿ ಕೃಷ್ಣ ಎಂಬುವರು ನಮ್ಮ ಮನೆಯ ಬಳಿ ಬಂದು ಇನ್ವಿಟೇಷನ್ ಕಾರ್ಡ್‌ಗಳನ್ನು ಪ್ಯಾಕ್ ಮಾಡಲು ತಮ್ಮ ಮಗಳನ್ನು ಬೈಕ್‌ನಲ್ಲಿ ಕರೆದುಕೊಂಡು ಹೋಗಿದ್ದು, ನಂತರ ೯.೪೫ರ ಸಮಯದಲ್ಲಿ ಬಾಲಕಿಯ ತಾಯಿ ಮೊಬೈಲ್‌ಗೆ ಕರೆ ಮಾಡಿ ಗುತ್ತಲಿನಲ್ಲಿರುವ ಭಾರತ್ ಪೆಟ್ರೋಲ್ ಬಂಕ್ ಹಿಂಭಾಗದ ರಸ್ತೆಯಲ್ಲಿ ತೆರಳುವಾಗ ಚಂದು ಅಲಿಯಾಸ್ ಕಾಕ್ರೋಚ್ ಎಂಬಾತ ಕಲ್ಲು ತೋರಿಸಿ ಹೆದರಿಸಿ ಬಾಲಕಿಯನ್ನು ಎಳೆದುಕೊಂಡು ಹೋದನೆಂದು ತಿಳಿಸಿರುವುದಾಗಿ ಬಾಲಕಿಯ ತಾಯಿ ದೂರಿನಲ್ಲಿ ತಿಳಿಸಿದ್ದಾರೆ. ನನ್ನ ಮಗಳನ್ನು ಬಲವಂತವಾಗಿ ಅಪಹರಣ ಮಾಡಿರುವ ಚಂದು ಅಲಿಯಾಸ್ ಕಾಕ್ರೋಚ್ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಪೊಲೀಸರಲ್ಲಿ ಮನವಿ ಮಾಡಿದ್ದಾರೆ.ಎಳನೀರು ಕೀಳಲು ಹೋದಾಗ ಜೇನು ಕಚ್ಚಿ ವ್ಯಕ್ತಿ ಸಾವುಕನ್ನಡಪ್ರಭ ವಾರ್ತೆ ಮಂಡ್ಯಎಳನೀರು ಕೀಳಲು ಹೋದಾಗ ವ್ಯಕ್ತಿಯೊಬ್ಬನಿಗೆ ಜೇನು ನೊಣಗಳು ಕಚ್ಚಿ ವ್ಯಕ್ತಿಯೊಬ್ಬ ಸಾವನ್ನಪ್ಪಿರುವ ಘಟನೆ ನಾಗಮಂಗಲ ತಾಲೂಕಿನ ಅಳೀಸಂದ್ರ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಮಹಾಲಿಂಗಯ್ಯ ಮೃತ ವ್ಯಕ್ತಿ. ಈತ ಗ್ರಾಮದ ಪಕ್ಕದಲ್ಲಿರುವ ಅವರ ಜಮೀನಿನ ತೆಂಗಿನಮರದಲ್ಲಿ ಎಳನೀಉ ಕೀಳಲು ಹೋದ ಸಮಯದಲ್ಲಿ ಜೇನು ನೊಣಗಳು ತಾಳಿ ನಡೆಸಿ ದೇಹವನ್ನೆಲ್ಲಾ ಕಚ್ಚಿವೆ. ಜೇನುನೊಣಗಳಲ್ಲಿರುವ ವಿಷದಿಂದ ಆತ ಸ್ಥಳದಲ್ಲೇ ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ. ಹರಿಪ್ರಸಾದ್ ಎಂಬುವರು ನೀಡಿದ ದೂರಿನನ್ವಯ ಬಿಂಡಿಗನವಿಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.