ಕುಡಿದ ಮತ್ತಿನಲ್ಲಿ ತಲೆ ಮೇಲೆ ಕಲ್ಲು ಹಾಕಿ ಪತ್ನಿಯ ಶೀಲ ಶಂಕಿಸಿ ಹತ್ಯೆಗೈದ ಪತಿ...!

KannadaprabhaNewsNetwork | Updated : Apr 19 2025, 08:26 AM IST

ಸಾರಾಂಶ

ಕುಡಿದ ಅಮಲಿನಲ್ಲಿ ವ್ಯಕ್ತಿ ತನ್ನ ಪತ್ನಿ ಶೀಲ ಶಂಕಿಸಿ ತಲೆ ಮೇಲೆ ಕಲ್ಲು  ಹಾಕಿ ಬರ್ಬರವಾಗಿ ಹತ್ಯೆಗೈದಿರುವ ಘಟನೆ ಶ್ರೀರಂಗಪಟ್ಟಣ ತಾಲೂಕಿನ ಬಾಬುರಾಯನ ಕೊಪ್ಪಲು ಗ್ರಾಮದಲ್ಲಿ ನಡೆದಿದೆ. ತಾಲೂಕಿ ಪಿ.ಹೊಸಹಳ್ಳಿ ವೀರಭದ್ರಾಚಾರಿ ಪುತ್ರ ಚಂದ್ರ ತನ್ನ ಪತ್ನಿ ಸೌಮ್ಯ (32) ಅವರನ್ನು ಕೊಲೆ ಮಾಡಿದ ಆರೋಪಿ.

 ಶ್ರೀರಂಗಪಟ್ಟಣ : ಕುಡಿದ ಅಮಲಿನಲ್ಲಿ ವ್ಯಕ್ತಿ ತನ್ನ ಪತ್ನಿ ಶೀಲ ಶಂಕಿಸಿ ತಲೆ ಮೇಲೆ ಕಲ್ಲು ಎತ್ತುಹಾಕಿ ಬರ್ಬರವಾಗಿ ಹತ್ಯೆಗೈದಿರುವ ಘಟನೆ ತಾಲೂಕಿನ ಬಾಬುರಾಯನ ಕೊಪ್ಪಲು ಗ್ರಾಮದಲ್ಲಿ ನಡೆದಿದೆ.

ತಾಲೂಕಿ ಪಿ.ಹೊಸಹಳ್ಳಿ ವೀರಭದ್ರಾಚಾರಿ ಪುತ್ರ ಚಂದ್ರ ತನ್ನ ಪತ್ನಿ ಸೌಮ್ಯ (32) ಅವರನ್ನು ಕೊಲೆ ಮಾಡಿದ ಆರೋಪಿ.

ಪಾಂಡವಪುರ ತಾಲೂಕಿನ ಸಣಬ ಗ್ರಾಮದ ಸೌಮ್ಯಳನ್ನು 9 ವರ್ಷಗಳ ಹಿಂದೆ ಚಂದ್ರ ಅವರೊಂದಿಗೆ ವಿವಾಹ ಮಾಡಿಕೊಡಲಾಗಿತ್ತು. ಇವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಚಂದ್ರ ಮರಗೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದನು.

ಮದುವೆಯಾದ ನಂತರ 3 ವರ್ಷ ಪಿ.ಹೊಸಹಳ್ಳಿಯಲ್ಲಿ ವಾಸವಿದ್ದು ನಂತರ ಮೊಗರಹಳ್ಳಿ ಮಂಟಿ, ಕಿರಂಗೂರು, ಕಳೆದ 2 ತಿಂಗಳಿನಿಂದ ಬಾಬುರಾಯನಕೊಪ್ಪಲು ಗ್ರಾಮದಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸವಾಗಿದ್ದರು.

ಚಂದ್ರನಿಗೆ ಕುಡಿತದ ಅಭ್ಯಾಸವಿದ್ದು, ಕೂಲಿ ಕೆಲಸದಿಂದ ಬಂದ ಹಣವನ್ನೆಲ್ಲಾ ಕುಟುಂಬದ ಜೀವನಕ್ಕೆ ನೀಡದೆ ಕುಡಿದು ಹಣ ಖಾಲಿ ಮಾಡುತ್ತಿದ್ದನು. ಅಲ್ಲದೇ, ನಿತ್ಯ ಕುಡಿದು ಬಂದು ನನ್ನ ಮಗಳೊಂದಿಗೆ ಜಗಳ ಮಾಡಿ, ನೀನು ಅನೈತಿಕ ಸಂಬಂಧ ಇಟ್ಟುಕೊಂಡಿದ್ದೀಯಾ ನಿನ್ನನ್ನು ಮುಗಿಸುತ್ತೇನೆ ಎಂದು ಹೇಳುತ್ತಿದ್ದನು. ಗುರುವಾರ ತಡರಾತ್ರಿ ನನ್ನ ಮಗಳ ತಲೆ ಮೇಲೆ ಒಳ್ಳು ಕೊಲ್ಲು ಎತ್ತಿಹಾಕಿ ಕೊಲೆ ಮಾಡಿರುವುದಾಗಿ ತಂದೆ ನಿಂಗಾಚಾರಿ ಪೊಲೀಸರಿಗೆ ದೂರು ನೀಡಿದ್ದಾರೆ.

ಟೌನ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆರೋಪಿ ತಲೆ ಮರೆಸಿಕೊಂಡಿದ್ದು ಪತ್ತೆಗಾಗಿ ಬಲೆ ಬೀಡಿದ್ದಾರೆ. ಈ ಸಂಬಂಧ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗೂಡ್ಸ್ ವಾಹನ ಬೈಕ್‌ಗೆ ಡಿಕ್ಕಿ: ಹಿಂಬದಿ ಸವಾರ ಸಾವು

ಕನ್ನಡಪ್ರಭ ವಾರ್ತೆ ಮದ್ದೂರುಗೂಡ್ಸ್ ವಾಹನ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಹಿಂಬದಿ ಸವಾರ ಮೃತಪಟ್ಟು, ಚಾಲಕ ತೀವ್ರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ ಬೂದಗುಪ್ಪೆ ಗ್ರಾಮದ ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿ ಪಕ್ಕದ ಸರ್ವಿಸ್ ರಸ್ತೆಯಲ್ಲಿ ಗುರುವಾರ ರಾತ್ರಿ ಸಂಭವಿಸಿದೆ.

ಬೂದಗುಪ್ಪೆ ಗ್ರಾಮದ ಶ್ರೀಧರ್ (28) ಮೃತಪಟ್ಟ ಬೈಕ್ ಹಿಂಬದಿ ಸವಾರ. ತಲೆಗೆ ತೀವ್ರವಾದ ಬಿದ್ದ ಪೆಟ್ಟಿನಿಂದ ಈತನಿಗೆ ಮದ್ದೂರು ಆಸ್ಪತ್ರೆಯ ಪ್ರಥಮ ಚಿಕಿತ್ಸೆ ನಂತರ ಮೈಸೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಬೆಳಗ್ಗೆ ಮೃತಪಟ್ಟಿದ್ದಾನೆ. ಬೈಕ್ ಚಾಲನೆ ಮಾಡುತ್ತಿದ್ದ ಸದರಿ ಗ್ರಾಮದ ಆಕಾಶ್ ಕಾಲಿಗೆ ಬಿದ್ದ ಪೆಟ್ಟಿನಿಂದ ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕ್ಸೆ ಪಡೆಯುತ್ತಿದ್ದಾನೆ. ಮೃತ ಶ್ರೀಧರ್ ಹಾಗೂ ಗಾಯಾಳು ಆಕಾಶ್ ಮದ್ದೂರಿಗೆ ಕಾರ್ಯನಿಮಿತ್ತ ಬೈಕ್‌ನಲ್ಲಿ ಬಂದು ಸ್ವಗ್ರಾಮಕ್ಕೆ ತೆರಳುತ್ತಿದ್ದರು. ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿಯ ಸರ್ವಿಸ್ ರಸ್ತೆಯಲ್ಲಿ ಬೂದಗುಪ್ಪೆ ಗ್ರಾಮಕ್ಕೆ ತೆರಳಲು ತಿರುವು ತೆಗೆದುಕೊಳ್ಳುತ್ತಿದ್ದಾಗ ಬುಲೆರೋ ಗೂಡ್ಸ್ ವಾಹನ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಈ ಸಂಬಂಧ ಸಂಚಾರಿ ಠಾಣೆ ಪಿಎಸ್ಐ ಕಮಲಾಕ್ಷಿ ಪ್ರಕರಣ ದಾಖಲ ಮಾಡಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Share this article