ಶ್ರೀರಂಗಪಟ್ಟಣದ ಪ್ರಸಿದ್ಧ ಕರೀಘಟ್ಟದಲ್ಲಿ 100 ಎಕರೆಗೂ ಹೆಚ್ಚು ಪ್ರದೇಶ ಬೆಂಕಿಗಾಹುತಿ..!

KannadaprabhaNewsNetwork |  
Published : Feb 12, 2025, 12:36 AM IST
10ಕೆಎಂಎನ್ ಡಿ34 | Kannada Prabha

ಸಾರಾಂಶ

ಅರಣ್ಯ ಪ್ರದೇಶಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದರಿಂದ ಗಾಳಿ ಬೀಸುತ್ತಿದಂತೆ ಬೆಂಕಿಯ ಜ್ಞಾಲೆ ಮತ್ತಷ್ಟು ಹೆಚ್ಚಳವಾಗಿ ಸುಮಾರು 100ಕ್ಕೂ ಹೆಚ್ಚು ಅರಣ್ಯ ಪ್ರದೇಶವು ಸಂಪೂರ್ಣವಾಗಿ ಸುಟ್ಟು ಹೋಗಿದೆ. ಇದರಿಂದ ಹಲವು ಮರ, ಗಿಡಗಳು ಸೇರಿದಂತೆ ಮೊಲ, ಹಾವು, ಪ್ರಾಣಿ, ಪಕ್ಷಿಗಳು ಭಸ್ಮವಾಗಿರುವ ಘಟನೆ ನಡೆದಿದೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ತಾಲೂಕಿನ ಪ್ರಸಿದ್ಧ ಕರೀಘಟ್ಟದ ಶ್ರೀವೆಂಕಟರಮಣ ಸ್ವಾಮಿ ಬೆಟ್ಟದ ಅರಣ್ಯ ಪ್ರದೇಶಕ್ಕೆ ಬೆಂಕಿ ಬಿದ್ದು ಸುಮಾರು 100 ಎಕರೆಗೂ ಹೆಚ್ಚು ಪ್ರದೇಶ ಬೆಂಕಿಗಾಹುತಿಯಾಗಿದೆ.

ಅರಣ್ಯ ಪ್ರದೇಶಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದರಿಂದ ಗಾಳಿ ಬೀಸುತ್ತಿದಂತೆ ಬೆಂಕಿಯ ಜ್ಞಾಲೆ ಮತ್ತಷ್ಟು ಹೆಚ್ಚಳವಾಗಿ ಸುಮಾರು 100ಕ್ಕೂ ಹೆಚ್ಚು ಅರಣ್ಯ ಪ್ರದೇಶವು ಸಂಪೂರ್ಣವಾಗಿ ಸುಟ್ಟು ಹೋಗಿದೆ. ಇದರಿಂದ ಹಲವು ಮರ, ಗಿಡಗಳು ಸೇರಿದಂತೆ ಮೊಲ, ಹಾವು, ಪ್ರಾಣಿ, ಪಕ್ಷಿಗಳು ಭಸ್ಮವಾಗಿರುವ ಘಟನೆ ನಡೆದಿದೆ.

ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವ ಕೆಲಸಕ್ಕೆ ಮುಂದಾದರಾದರೂ ಬಹುತೇಕ ಅರಣ್ಯ ಪ್ರದೇಶಕ್ಕೆ ಬೆಂಕಿಯ ಜ್ವಾಲೆ ಹರಡಿ ಅರಣ್ಯ ಪ್ರದೇಶ ಹಾನಿಯಾಗಿದೆ. ಕಳೆದ ಕೆಲ ದಿನಗಳ ಹಿಂದೆಯಷ್ಟೆ ಗಣಂಗೂರು, ಗೌಡಹಳ್ಳಿ ಬಳಿಯ ಅರಣ್ಯ ಪ್ರದೇಶಕ್ಕೂ ಬೆಂಕಿ ಬಿದ್ದು ಹಾನಿಯುಂಟಾಗಿತ್ತು.

ಅಪರಿಚಿತ ಹೆಂಗಸಿನ ಶವ ಪತ್ತೆ

ಶ್ರೀರಂಗಪಟ್ಟಣ:

ಪಟ್ಟಣದ ಮೈಸೂರು ಮುಖ್ಯ ರಸ್ತೆಯ ಪಶ್ಚಿಮವಾಹಿನಿ ಕಾವೇರಿ ನದಿ ಸೇತುವೆ ಬಳಿ ಅಪರಿಚಿತ ಹೆಂಗಸಿನ ಶವ ಪತ್ತೆಯಾಗಿದೆ.

ಮೃತ ಹೆಂಗಸಿಗೆ ಸುಮಾರು 45 ರಿಂದ 50 ವರ್ಷವಾಗಿದೆ. 5.7 ಅಡಿ ಎತ್ತರ, ಗೋಧಿ ಮೈಬಣ್ಣ, ದೃಢಕಾಯ ಶರೀರ ಹೊಂದಿದ್ದು, ಕಾಫಿ ಬಣ್ಣದ ಗೆರೆವುಳ್ಳ ಹಳದಿ ಬಣ್ಣದ ಟಾಪ್, ಹಳದಿ ಬಣ್ಣದ ಲೆಗಿನ್ಸ್, ಬಲತೋಳಿನಲ್ಲಿ ತಾಯಿತದ ರೀತಿಯ ದಾರ ಮತ್ತು ಎಡಗಾಲಿನಲ್ಲಿ ಕಪ್ಪು ದಾರ ಧರಿಸಿದ್ದಾರೆ. ವಾರಸುದಾರರಿದಲ್ಲಿ ದೂ-08232 22488/ ಮೊ-9480804800/ 9480804855 ಅನ್ನು ಸಂಪರ್ಕಿಸಬಹುದು ಎಂದು ಶ್ರೀರಂಗಪಟ್ಟಣ ಟೌನ್ ಪೊಲೀಸ್ ಠಾಣೆ ಆರಕ್ಷಕ ನೀರಿಕ್ಷಕರು ತಿಳಿಸಿದ್ದಾರೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ಅಪಘಾತ: ಗಾಯಾಳು ಬೈಕ್‌ ಸವಾರ ಸಾವು
ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ: ಬೈಕ್ ಸವಾರ ಸಾವು; ಇಬ್ಬರಿಗೆ ಗಾಯ