ಬೀದಿ ನಾಯಿಗಳ ದಾಳಿಗೆ 20ಕ್ಕೂ ಅಧಿಕ ಕುರಿಗಳು ಸಾವು

KannadaprabhaNewsNetwork | Published : Aug 28, 2024 12:49 AM

ಸಾರಾಂಶ

ನಾಯಿ ದಾಳಿಯಿಂದ ಕುರಿಗಳ ಚಿರಾಟವನ್ನು ಗಮನಿಸಿದ ಅಕ್ಕಪಕ್ಕದ ಮನೆಯವರು ನೋಡಿ ಸ್ಥಳಕ್ಕೆ ಬಂದು ನಾಯಿಗಳನ್ನು ಓಡಿಸಿದ್ದಾರೆ. ಅಷ್ಟರಲ್ಲಿ 20ಕ್ಕೂ ಅಧಿಕ ಕುರಿಗಳು ಸಾವನ್ನಪ್ಪಿವೆ. ಹಲವು ಗಾಯಗೊಂಡಿವೆ. ವಿಷಯ ತಿಳಿದ ಗ್ರಾಪಂ ಮಾಜಿ ಅಧ್ಯಕ್ಷ ಜೆ.ದೇವೇಗೌಡ ಸ್ಥಳಕ್ಕೆ ಆಗಮಿಸಿ ವೀಕ್ಷಿಸಿದರು.

ಕನ್ನಡಪ್ರಭ ವಾರ್ತೆ ಪಾಂಡವಪುರ

ಮನೆ ಎದುರು ಕೂಡಿ ಹಾಕಿದ್ದ ಕುರಿಗಳ ಮೇಲೆ ಬೀದಿ ನಾಯಿಗಳ ದಾಳಿಯಿಂದ 20ಕ್ಕೂ ಅಧಿಕ ಕುರಿಗಳು ಸಾವನ್ನಪ್ಪಿರುವ ಘಟನೆ ತಾಲೂಕಿನ ಸುಂಕಾತೊಣ್ಣೂರು ಗ್ರಾಮದಲ್ಲಿ ಮಂಗಳವಾರ ನಡೆದಿದೆ.

ಗ್ರಾಮದ ಶಿವಣ್ಣೇಗೌಡರಿಗೆ ಸೇರಿ 20ಕ್ಕೂ ಅಧಿಕ ಕುರಿಗಳು ಸಾವನ್ನಪ್ಪಿದ್ದು, ಇದರಿಂದ ಲಕ್ಷಾಂತರ ರು ನಷ್ಟವಾಗಿದೆ. ರೈತ ಶಿವಣ್ಣೇಗೌಡರು ತಮ್ಮ ಮನೆ ಎದುರು ಕುರಿಗಳನ್ನು ಕೂಡಿ ಹಾಕಿ ಬೆಳಗ್ಗೆ ಇಡೀ ಕುಟುಂಬ ಹೂ ಕೂಯ್ಯಲು ಜಮೀನಿಗೆ ತೆರಳಿದ್ದಾರೆ. ಈ ವೇಳೆ ಬೀದಿ ನಾಯಿಗಳು ಕುರಿಗಳ ಗುಂಪಿನ ಮೇಲೆ ದಾಳಿ ನಡೆಸಿವೆ. ನಾಯಿಗಳ ದಾಳಿಯಿಂದ 20 ಕ್ಕೂ ಅಧಿಕ ಕುರಿಗಳು ಸ್ಥಳದಲ್ಲಿಯೇ ಸಾವನ್ನಪ್ಪಿವೆ.

ನಾಯಿ ದಾಳಿಯಿಂದ ಕುರಿಗಳ ಚಿರಾಟವನ್ನು ಗಮನಿಸಿದ ಅಕ್ಕಪಕ್ಕದ ಮನೆಯವರು ನೋಡಿ ಸ್ಥಳಕ್ಕೆ ಬಂದು ನಾಯಿಗಳನ್ನು ಓಡಿಸಿದ್ದಾರೆ. ಅಷ್ಟರಲ್ಲಿ 20ಕ್ಕೂ ಅಧಿಕ ಕುರಿಗಳು ಸಾವನ್ನಪ್ಪಿವೆ. ಹಲವು ಗಾಯಗೊಂಡಿವೆ.

ವಿಷಯ ತಿಳಿದ ಗ್ರಾಪಂ ಮಾಜಿ ಅಧ್ಯಕ್ಷ ಜೆ.ದೇವೇಗೌಡ ಸ್ಥಳಕ್ಕೆ ಆಗಮಿಸಿ ವೀಕ್ಷಿಸಿದರು. ರೈತ ಶಿವಣ್ಣೇಗೌಡರು ಕುರಿಗಳನ್ನೇ ನೆಚ್ಚಿಕೊಂಡು ಜೀವನ ನಡೆಸುತ್ತಿದ್ದರು. ಘಟನೆಯಿಂದ ಕುಟುಂಬಕ್ಕೆ ಲಕ್ಷಾಂತರ ರು.ನಷ್ಟವಾಗಿದೆ. ಸಂಬಂಧಿಸಿದ ಅಧಿಕಾರಿಗಳು ಕುರಿಗಳನ್ನು ಕಳೆದುಕೊಂಡ ನಷ್ಟ ಅನುಭವಿಸಿದ ಕುಟುಂಬಕ್ಕೆ ಸೂಕ್ತ ಪರಿಹಾರ ದೊರಕಿಸಿಕೊಡಬೇಕೆಂದು ಒತ್ತಾಯಿಸಿದರು.

ಪಶು ವೈದ್ಯಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿ ಸ್ಥಳದಲ್ಲಿಯೇ ಕುರಿಗಳ ಪಂಚನಾಮೆ ನಡೆಸಿದರು. ಇಲಾಖೆಯಿಂದ ರೈತ ಶಿವಣ್ಣೇಗೌಡರ ಕುಟುಂಬಕ್ಕೆ ಸೂಕ್ತ ಪರಿಹಾರ ದೊರಕಿಸಿಕೊಡಲಾಗುವುದು ಎಂದು ಭವರಸೆ ನೀಡಿದರು. ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ದೂರವಾಣಿ ಕರೆ ಮಾಡಿ ರೈತ ಶಿವಣ್ಣೇಗೌಡರಿಗೆ ಸಾಂತ್ವನ ಹೇಳಿದರು. ಪ್ರಕರಣ ಸಂಬಂಧ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಪರಿಹಾರ ದೊರಕಿಸಿಕೊಡಲಾಗುವುದು ಎಂದು ಭರವಸೆ ನೀಡಿದರು.

ಘಟನಾ ಸ್ಥಳಕ್ಕೆ ರೈತ ನಾಯಕಿ ಸುನೀತಾ ಪುಟ್ಟಣ್ಣಯ್ಯ ಭೇಟಿಕೊಟ್ಟು ಕುರಿ ಮಾಲೀಕ ರೈತ ಶಿವಣ್ಣೇಗೌಡರಿಗೆ ಸಾಂತ್ವನ ಹೇಳಿದರು.

Share this article