ಪೊಲೀಸರ ಮೇಲೆ ಪವಿತ್ರಾ ಕಿಡಿಕಿಡಿ

Published : Aug 15, 2025, 09:22 AM IST
Pavithra Gowda

ಸಾರಾಂಶ

ಜಾಮೀನು ರದ್ದು ಬೆನ್ನಲ್ಲೇ ತನ್ನನ್ನು ಬಂಧಿಸಿ ಕರೆದೊಯ್ಯುವಾಗ ವಿಡಿಯೋ ಚಿತ್ರೀಕರಿಸುತ್ತಿದ್ದ ಪೊಲೀಸರ ಮೇಲೆ ಪವಿತ್ರಾಗೌಡ ರೇಗಾಡಿದ ಪ್ರಸಂಗ ನಡೆಯಿತು

ಬೆಂಗಳೂರು: ಜಾಮೀನು ರದ್ದು ಬೆನ್ನಲ್ಲೇ ತನ್ನನ್ನು ಬಂಧಿಸಿ ಕರೆದೊಯ್ಯುವಾಗ ವಿಡಿಯೋ ಚಿತ್ರೀಕರಿಸುತ್ತಿದ್ದ ಪೊಲೀಸರ ಮೇಲೆ ಪವಿತ್ರಾಗೌಡ ರೇಗಾಡಿದ ಪ್ರಸಂಗ ನಡೆಯಿತು. ರಾಜರಾಜೇಶ್ವರಿ ನಗರದಲ್ಲಿರುವ ಪವಿತ್ರಾಗೌಡ ಮನೆಗೆ ಗೋವಿಂದರಾಜನಗರ ಠಾಣೆ ಇನ್ಸ್‌ ಪೆಕ್ಟರ್ ಸುಬ್ರಹ್ಮಣಿ ನೇತೃತ್ವದ ತಂಡ ತೆರಳಿತು. 

ಆಗ ಬಂಧಿಸಿ ಮನೆಯಿಂದ ಆಕೆಯನ್ನು ಕರೆತರುವಾಗ ಮೆಟ್ಟಿಲ ಮೇಲೆ ನಿಂತು ಪೊಲೀಸರು ವಿಡಿಯೋ ಚಿತ್ರೀಕರಿಸುತ್ತಿದ್ದರು. ಈ ವೇಳೆ ತಾಳ್ಮೆ ಕಳೆದುಕೊಂಡ ಪವಿತ್ರಾಗೌಡ, ಏನ್ರೀ... ನಿಮಗೆ ಗೊತ್ತಾಗಲ್ವೇ ಎಂದು ಸಿಡಿಮಿಡಿಕೊಂಡಿದ್ದಾರೆ. ಆಕೆಯ ವರ್ತನೆಯಿಂದ ಪೊಲೀಸರು ಅರೆ ಕ್ಷಣ ತಬ್ಬಿಬ್ಬಾದರು.

PREV
Read more Articles on

Recommended Stories

ಕೊಲೆ ಆರೋಪಿ ದರ್ಶನ್‌ಗೆ ತಪ್ಪದ ದಯಾನಂದ್ ಕಂಟಕ
ದರ್ಶನ್‌ ಬೇಲ್‌ ರದ್ದಾಗಲು ಕಾರಣಿಕರ್ತ ಹೀರೋಗಳು