ಅದಾನಿ ಸಮೂಹದ ತನಿಖಾವರದಿ ಸಲ್ಲಿಸದ ಸೆಬಿ ವಿರುದ್ಧಸುಪ್ರೀಂಕೋರ್ಟ್‌ಗೆ ದೂರು

KannadaprabhaNewsNetwork |  
Published : Nov 20, 2023, 12:45 AM IST
ಅದಾನಿ | Kannada Prabha

ಸಾರಾಂಶ

ವರ್ಷಾರಂಭದಲ್ಲಿ ಭಾರೀ ಸಂಚಲನ ಮೂಡಿಸಿದ್ದ ಹಿಂಡನ್‌ಬರ್ಗ್ ವರದಿಯಲ್ಲಿ ಅದಾನಿ ಸಮೂಹದ ಮೇಲೆ ಕೇಳಿ ಬಂದಿದ್ದ ಆರೋಪದ ವಿಚಾರಣೆಯನ್ನು ಸೆಬಿ ವಿಳಂಬ ಮಾಡುತ್ತಿರುವುದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ದಾಖಲಿಸಲಾಗಿದೆ

ನವದೆಹಲಿ: ವರ್ಷಾರಂಭದಲ್ಲಿ ಭಾರೀ ಸಂಚಲನ ಮೂಡಿಸಿದ್ದ ಹಿಂಡನ್‌ಬರ್ಗ್ ವರದಿಯಲ್ಲಿ ಅದಾನಿ ಸಮೂಹದ ಮೇಲೆ ಕೇಳಿ ಬಂದಿದ್ದ ಆರೋಪದ ವಿಚಾರಣೆಯನ್ನು ಸೆಬಿ ವಿಳಂಬ ಮಾಡುತ್ತಿರುವುದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ದಾಖಲಿಸಲಾಗಿದೆ. ತನಿಖೆ ಪೂರ್ಣಕ್ಕೆ ಸೆಬಿಗೆ ಆ.14ರ ಗಡುವು ನೀಡಿದ್ದರೂ ಅದು ಇನ್ನೂ ತನ್ನ ಅಂತಿಮ ವರದಿ ಸಲ್ಲಿಸಿಲ್ಲ. ಹೀಗಾಗಿ ಸೆಬಿ ವಿರುದ್ಧ ನ್ಯಾಯಾಂಗ ನಿಂದನಾ ಪ್ರಕರಣ ದಾಖಲಿಸುವಂತೆ ಕೋರಿ ವಿಶಾಲ್‌ ತಿವಾರಿ ಎಂಬುವವರು ಮನವಿ ಮಾಡಿದ್ದಾರೆ. ಅದಾನಿ ಸಮೂಹದ ವಿರುದ್ಧದ 24 ಆರೋಪದ ಪೈಕಿ 22ರ ವಿಚಾರಣೆ ಪೂರ್ಣಗೊಳಿಸಿರುವುದಾಗಿ ಸೆಬಿ ಆ.25ರಂದು ತಿಳಿಸಿತ್ತು.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ಟಿಪ್ಪರ್ ಲಾರಿಗೆ ಕಾರು ಡಿಕ್ಕಿ: ಅಕ್ಕ-ತಮ್ಮ ಸ್ಥಳದಲ್ಲೇ ಸಾವು; ಮೂವರಿಗೆ ಗಾಯ
ಒಂದು ವರ್ಷದಲ್ಲಿ ಲಕ್ಷಗಟ್ಟಲೇ ಮೆಟ್ರೋ ನಿಯಮ ಉಲ್ಲಂಘನೆ ಕೇಸ್‌ ದಾಖಲು