ಪ್ರಜ್ವಲ್ ಪೆನ್‌ಡ್ರೈವ್‌ ಕೇಸ್‌: ಸಂತ್ರಸ್ತೆಯ ಕಿಡ್ನಾಪ್‌ ಮಾಡಿಸಿದ್ದು ರೇವಣ್ಣ, ಭವಾನಿ..!

ಸಾರಾಂಶ

ಹಾಸನ ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಕೃತ್ಯದ ಸಂತ್ರಸ್ತೆ ಅಪಹರಣ ಪ್ರಕರಣ ಸಂಬಂಧ ಎಚ್.ಡಿ.ರೇವಣ್ಣ, ಭವಾನಿ ಸೇರಿದಂತೆ 11 ಆರೋಪಿಗಳ ವಿರುದ್ಧ ನಗರದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ವಿಶೇಷ ತನಿಖಾ ತಂಡ (ಎಸ್‌ಐಟಿ) ಆರೋಪ ಪಟ್ಟಿ ಸಲ್ಲಿಸಿದೆ

ಬೆಂಗಳೂರು : ಹಾಸನ ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಕೃತ್ಯದ ಸಂತ್ರಸ್ತೆ ಅಪಹರಣ ಪ್ರಕರಣ ಸಂಬಂಧ ಎಚ್.ಡಿ.ರೇವಣ್ಣ, ಭವಾನಿ ಸೇರಿದಂತೆ 11 ಆರೋಪಿಗಳ ವಿರುದ್ಧ ನಗರದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ವಿಶೇಷ ತನಿಖಾ ತಂಡ (ಎಸ್‌ಐಟಿ) ಆರೋಪ ಪಟ್ಟಿ ಸಲ್ಲಿಸಿದೆ. ಇದರೊಂದಿಗೆ ಹಾಸನ ಪೆನ್ ಡ್ರೈವ್ ಹಗರಣದಲ್ಲಿ ಮೊದಲ ಚಾರ್ಜ್‌ ಶೀಟ್ ಸಲ್ಲಿಸಿದ್ದು, ಆಪಹರಣ ಪ್ರಕರಣದಲ್ಲಿ ಮಾಜಿ ಸಚಿವ ಎಚ್ .ಡಿ.ರೇವಣ್ಣ ಕುಟುಂಬದ ಮೇಲಿನ ಆರೋಪಗಳು ತನಿಖೆಯಲ್ಲಿ ರುಜುವಾತಾಗಿದೆ ಎಂದು ಎಸ್‌ಐಟಿ ಹೇಳಿದೆ.

500ಕ್ಕೂ ಹೆಚ್ಚಿನ ಪುಟದ ಆರೋಪ ಪಟ್ಟಿ:

ಸಂತ್ರಸ್ತೆ ಅಪಹರಣ ಪ್ರಕರಣದಲ್ಲಿ ರೇವಣ್ಣ ಸೇರಿದಂತೆ ಎಂಟು ಮಂದಿಯನ್ನು ಎಸ್‌ಐಟಿ ಪೊಲೀಸರು ಬಂಧಿಸಿದ್ದರು. ಆದರೆ ಭವಾನಿ ರೇವಣ್ಣ ನಿರೀಕ್ಷಣಾ ಜಾಮೀನು ಪಡೆದಿದ್ದರು. ಇನ್ನು ಕೃತ್ಯದಲ್ಲಿ ತಲೆಮರೆಸಿಕೊಂಡಿರುವ ಭವಾನಿ ಸೋದರನ ಪುತ್ರ ಶರತ್ ಹಾಗೂ ಕಾರು ಚಾಲಕ ಅಜಿತ್ ಪತ್ತೆಗೆ ತನಿಖೆ ಮುಂದುವರೆದಿದ್ದು, ಈ ಸಲ್ಲಿಕೆಯಾಗಲಿದೆ ಎಂದು ಮೂಲಗಳು ಹೇಳಿವೆ.

ಕುಟುಂಬದ ವಿರುದ್ಧ ರಾಜಕೀಯ ಷಡ್ಯಂತ್ರ ನಡೆದಿದೆ; ಕಾಲವೇ ಉತ್ತರಿಸಲಿದೆ: ಎಂಎಲ್‌ಸಿ ಸೂರಜ್ ರೇವಣ್ಣ

ಎರಡೂವರೆ ತಿಂಗಳು ಸುದೀರ್ಘವಾಗಿ ಅಪಹರಣ ಪ್ರಕರಣದ ತನಿಖೆ ನಡೆಸಿದ ಎಸ್ ಐಟಿ, ನ್ಯಾಯಾಲಯಕ್ಕೆ ಸಂತ್ರಸ್ತ ಹಾಗೂ ಆಕೆಯ ಕುಟುಂಬ ಸದಸ್ಯರು ನ್ಯಾಯಾಲಯದ ಮುಂದೆ 164ರಡಿ ನೀಡಿದ್ದ ಹೇಳಿಕೆಗಳು ಒಳಗೊಂಡಂತೆ ಸುಮಾರು 500ಕ್ಕೂ ಹೆಚ್ಚಿನ ಪುಟಗಳ ಆರೋಪ ಪಟ್ಟಿಯನ್ನು ಎಸ್‌ಐಟಿ ಸಲ್ಲಿಸಿದೆ. ಇದರೊಂದಿಗೆ ವೈದ್ಯಕೀಯ ಪುರಾವೆಗಳನ್ನು ಅಧಿಕಾರಿಗಳು ಆಡ ಕಗೊಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪ್ರಕರಣದ ಹಿನ್ನೆಲೆ:

ಲೋಕಸಭಾ ಚುನಾವಣೆ ವೇಳೆ ಪ್ರಜ್ವಲ್ ರೇವಣ್ಣ ಅವರಿಗೆ ಸೇರಿದ್ದು ಎನ್ನಲಾದ ಅಶ್ಲೀಲ ವಿಡಿಯೋಗಳು ತುಂಬಿದ್ದ ಪೆನ್ ಡ್ರೈವ್ ಸಾರ್ವಜನಿಕ ವಲಯದಲ್ಲಿ ಕಂಡು ಬಂದಿತ್ತು. ಆಗ ತಮ್ಮ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮೈಸೂರು ಜಿಲ್ಲೆ ಕೆ.ಆರ್.ನಗರ ತಾಲೂಕಿನ ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಆರೋಪಕ್ಕೆ ಪ್ರಜ್ವಲ್ ತುತ್ತಾಗಿದ್ದರು. ಈ ಕೃತ್ಯದ ಬಗ್ಗೆ ದೂರು ದಾಖಲಾಗುವ ಭೀತಿಯಲ್ಲಿ ಎಚ್. ಡಿ. ರೇವಣ್ಣ ಹಾಗೂ ಅವರ ಪತ್ನಿ ಭವಾನಿ ತಮ್ಮ ಪುತ್ರನ ರಕ್ಷಣೆಗೆ ಬೆಂಬಲಿಗರ ಮೂಲಕ ಸಂತ್ರಸ್ತ ಯನ್ನು ಅಪಹರಿಸಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ಕೆ.ಆರ್.ನಗರ ಠಾಣೆಯಲ್ಲಿ ರೇವಣ್ಣ ಹಾಗೂ ಇತರರ ಮೇಲೆ ಇದೇ ಮೇ 3 ಎಫ್‌ಐಆರ್‌ ದಾಖಲಾಗಿತ್ತು.

ಆರೋಪಿಗಳು ಯಾರ್ಯಾರು? :

ಮಾಜಿ ಸಚಿವ ರೇವಣ್ಣ, ಅವರ ಪತ್ನಿ ಭವಾನಿ ರೇವಣ್ಣ, ಕೆ.ಆರ್.ನಗರ ತಾಲೂಕು ಮಾಜಿ ಜಿಪಂ ಸದಸ್ಯ ಹೊಸೂರು ಕೀರ್ತಿ, ಗ್ರಾಮ ಪಂಚಾಯಿತಿ ಸದಸ್ಯ ಮನುಗೌಡ, ಭವಾನಿ ಸಂಬಂಧಿಕ ಸತೀಶ್ ಬಾಬು, ಎಚ್.ಕೆ.ಸುಜಯ್, ತಪಡಿ ಮಧು, ಭವಾನಿ ಕಾರು ಚಾಲಕ ಆಜಿತ್ ಹಾಗೂ , 364 (5) ಅಪಹರಣ ಹಾಗೂ 120 (ಬಿ) ಅಪರಾಧಿಕ ಸಂಚು ಸೇರಿದಂತೆ ಇತರೆ ಪರಿಚ್ಛೇದಗಳಡಿ ಅಪಹರಣ ಪ್ರಕರಣ ಸಂಬಂಧ ಎಸ್‌ಐಟಿ ಆರೋಪ ಪಟ್ಟಿ ಸಲ್ಲಿಸಿದೆ.

Share this article