ರೇಣುಕಾಸ್ವಾಮಿ ಕೊಲೆ ಪ್ರಕರಣ : ನಟ ದರ್ಶನ್‌ ನ ಮೂವರು ಸಹಚರರಿಗೆ ಜಾಮೀನು- ಬಿಡುಗಡೆ ಇಂದು

Published : Sep 26, 2024, 09:50 AM IST
DARSHAN GANG

ಸಾರಾಂಶ

ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ತುಮಕೂರು ಜೈಲಿನಲ್ಲಿರುವ ನಟ ದರ್ಶನ್‌ನ ಮೂವರು ಸಹಚರರಿಗೆ ಜಾಮೀನು ಮಂಜೂರಾದರೂ ಬುಧವಾರ ಬಿಡುಗಡೆ ಭಾಗ್ಯ ಸಿಗಲಿಲ್ಲ.

ತುಮಕೂರು: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ತುಮಕೂರು ಜೈಲಿನಲ್ಲಿರುವ ನಟ ದರ್ಶನ್‌ನ ಮೂವರು ಸಹಚರರಿಗೆ ಜಾಮೀನು ಮಂಜೂರಾದರೂ ಬುಧವಾರ ಬಿಡುಗಡೆ ಭಾಗ್ಯ ಸಿಗಲಿಲ್ಲ. 

ಬೆಂಗಳೂರಿನ ಗಿರಿನಗರದವರಾದ ಆರ್‌.ಕೇಶವಮೂರ್ತಿ(27), ವಿ.ಕಾರ್ತಿಕ್‌(27) ಮತ್ತು ಬಿ.ಜಿ.ರೋಡ್‌ನ ಎಲ್‌. ನಿಖಿಲ್‌ ನಾಯಕ್‌(21)ಗೆ ಹೈಕೋರ್ಟ್‌ ಸೋಮವಾರ ಷರತ್ತುಬದ್ಧ ಜಾಮೀನು ನೀಡಿತ್ತು. 

ಈ ಹಿನ್ನೆಲೆಯಲ್ಲಿ ಆರೋಪಿಗಳು ಬುಧವಾರ ಬಿಡುಗಡೆಯಾಗುವ ನಿರೀಕ್ಷೆ ಇತ್ತು. ಈ ಹಿನ್ನೆಲೆಯಲ್ಲಿ ಇವರ ಸಂಬಂಧಿಕರು ಜೈಲಿನ ಹೊರಗೆ ಕಾಯುತ್ತಿದ್ದರು. ಆದರೆ, ಆದೇಶದ ಪ್ರತಿ ಸಿಗದ ಹಿನ್ನೆಲೆಯಲ್ಲಿ ಮೂವರೂ ಗುರುವಾರ ಬಿಡುಗಡೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ.

PREV

Recommended Stories

ರೈತನ ಬ್ಯಾಂಕ್ ಖಾತೆಯಲ್ಲಿದ್ದ ಕೋಟ್ಯಂತರ ರು.ಗೆ ಕದೀಮರಿಂದ ಕನ್ನ..!
ಗ್ರಾಮ ಲೆಕ್ಕಿಗರ ಹುದ್ದೆಗೆ ನಕಲಿ ಅಂಗವಿಕಲ ಪ್ರಮಾಣಪತ್ರ ಸಲ್ಲಿಕೆ...!