ಮಂಡ್ಯ ತಾಲೂಕಿನ ಶಿವಳ್ಳಿ, ಪಣಕನಹಳ್ಳಿ ಹಾಗೂ ನಗರದ ಸಂತೆಮಾಳದಲ್ಲಿ ಪ್ರತ್ಯೇಕ ಪ್ರಕರಣ - ಮೂವರು ಅಪರಿಚಿತ ವ್ಯಕ್ತಿಗಳ ಶವ ಪತ್ತೆ

KannadaprabhaNewsNetwork | Updated : Nov 21 2024, 04:17 AM IST

ಸಾರಾಂಶ

ಮಂಡ್ಯ ತಾಲೂಕು ಶಿವಳ್ಳಿ ಕರಿಕಲ್ಲು ಹತ್ತಿರದ ಭೈರವೇಶ್ವರ ದೇವಸ್ಥಾನದ ಮುಂದಿನ ಅರಳಿಕಟ್ಟೆ ಬಳಿ ಅಪರಿಚಿತ ಗಂಡಸಿನ ಶವ ಪತ್ತೆ, ಪಣಕನಹಳ್ಳಿ ರಸ್ತೆಯಲ್ಲಿ ಹಾಗೂ ಸಂತೆಮಾಳದ ಯೋಗನರಸಿಂಹ ಸಾಮಿಲ್ ನಲ್ಲಿ ಅಪರಿಚಿತ ವ್ಯಕ್ತಿ ಶವ ಪತ್ತೆಯಾಗಿದೆ.

  ಮಂಡ್ಯ : ತಾಲೂಕಿನ ಶಿವಳ್ಳಿ, ಪಣಕನಹಳ್ಳಿ ಹಾಗೂ ನಗರದ ಸಂತೆಮಾಳದಲ್ಲಿ ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ಅಪರಿಚಿತ ವ್ಯಕ್ತಿಗಳ ಶವಗಳು ಪತ್ತೆಯಾಗಿವೆ.

ತಾಲೂಕು ಶಿವಳ್ಳಿ ಕರಿಕಲ್ಲು ಹತ್ತಿರದ ಭೈರವೇಶ್ವರ ದೇವಸ್ಥಾನದ ಮುಂದಿನ ಅರಳಿಕಟ್ಟೆ ಬಳಿ ಅಪರಿಚಿತ ಗಂಡಸಿನ ಶವ ಪತ್ತೆಯಾಗಿದೆ. ಮೃತ ವ್ಯಕ್ತಿಗೆ ಸುಮಾರು 55 ರಿಂದ 60 ವರ್ಷವಾಗಿದೆ. 5.5 ಅಡಿ ಎತ್ತರ, ಸಾಧಾರಣ ಶರೀರ ಎಣ್ಣೆಗೆಂಪು ಬಣ್ಣ, ಕಪ್ಪು ಮಿಶ್ರಿತ ಬಿಳಿ ತಲೆ ಕೂದಲು, ಬಿಳಿ ಬಣ್ಣದ ಗಡ್ಡ ಮತ್ತು ಮೀಸೆ ಇದ್ದು ಮೃತನ ಮೈಮೇಲೆ ಮಾಸಲು ತುಂಬುತೋಳಿನ ಶರ್ಟ್, ಮಾಸಲು ಕಪ್ಪು ಬಣ್ಣದ ಪ್ಯಾಂಟ್ ತೊಟ್ಟಿದ್ದಾನೆ.

ವಾರಸುದಾರರಿದ್ದಲ್ಲಿ ದೂ-08232-277144, 224500 ಅನ್ನು ಸಂಪರ್ಕಿಸಬಹುದು ಎಂದು ಶಿವಳ್ಳಿ ಪೊಲೀಸ್ ಠಾಣೆ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ತಿಳಿಸಿದ್ದಾರೆ.

ತಾಲೂಕಿನ ಪಣಕನಹಳ್ಳಿ ರಸ್ತೆಯಲ್ಲಿ ಅಪರಿಚಿತ ವ್ಯಕ್ತಿ ಶವ ಪತ್ತೆಯಾಗಿದ್ದು, ಸುಮಾರು 65 ರಿಂದ 70 ವರ್ಷವಾಗಿದೆ. ಮೃತನ ಮೈಮೇಲೆ ಮಾಸಲು ಬಿಳಿ ಗೆರೆಯುಳ್ಳ ನೇರಳೆ ಬಣ್ಣದ ತುಂಬುತೋಳಿನ ಶರ್ಟ್, ಸಿಮೆಂಟ್ ಬಣ್ಣದ ಪ್ಯಾಂಟ್ ಧರಿಸಿದ್ದು ಎಡಗೈ ಮೇಲೆ ಚಡ್ಡಿ ನಿಂಗಯ್ಯ ಎಂದು ಕನ್ನಡದಲ್ಲಿ ಹಚ್ಚೆ ಇದೆ. ವಾರಸುದಾರರಿದ್ದಲ್ಲಿ ದೂ-08232-224500, 221345 ಅನ್ನು ಸಂಪರ್ಕಿಸಬಹುದು ಎಂದು ಮಂಡ್ಯ ಸೆಂಟ್ರಲ್ ಪೊಲೀಸ್ ಠಾಣೆ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ತಿಳಿಸಿದ್ದಾರೆ.

ನಗರದ ಸಂತೆಮಾಳದ ಯೋಗನರಸಿಂಹ ಸಾಮಿಲ್ ನಲ್ಲಿ ಅಪರಿಚಿತ ವ್ಯಕ್ತಿ ಶವ ಪತ್ತೆಯಾಗಿದೆ.

ಮೃತ ವ್ಯಕ್ತಿಗೆ ಸುಮಾರು 65 ರಿಂದ 70 ವರ್ಷವಾಗಿದೆ. ಸಾಧಾರಣ ಮೈಕಟ್ಟು, ಕೋಲುಮುಖ, ಎಣ್ಣೆಗೆಂಪು ಮೈಬಣ್ಣ ಇದ್ದು ಮೃತನ ಮೈಮೇಲೆ ನೀಲಿ ಬಣ್ಣದ ನಿಕ್ಕರ್ ಇದೆ. ವಾರಸುದಾರರಿದ್ದಲ್ಲಿ ದೂ- 08232-224500, 221345 ಅನ್ನು ಸಂಪರ್ಕಿಸಬಹುದು ಎಂದು ಮಂಡ್ಯ ಸೆಂಟ್ರಲ್ ಪೊಲೀಸ್ ಠಾಣೆ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ತಿಳಿಸಿದ್ದಾರೆ.

Share this article