ಆರೋಪಿಯ ಫೋನ್‌ನಲ್ಲಿ ಆನ್ಲೈನ್‌ ಬೆಟ್ಟಿಂಗ್‌ ಆಡಿದ ಎಸ್ಐ ಸಸ್ಪೆಂಡ್‌!

Published : Jun 02, 2025, 10:02 AM IST
KSRP

ಸಾರಾಂಶ

ಪೊಲೀಸರೇ ಆರೋಪಿಯ ಮೊಬೈಲ್‌ ಬಳಸಿ ಆನ್‌ಲೈನ್‌ನಲ್ಲಿ ಬೆಟ್ಟಿಂಗ್ ಆಡಿ ಅಮಾನತಾಗಿರುವ ಘಟನೆ ತುಮಕೂರು ಜಿಲ್ಲೆಯ ತುರುವೇಕೆರೆಯಲ್ಲಿ ಬೆಳಕಿಗೆ ಬಂದಿದೆ.

  ತುರುವೇಕೆರೆ(ತುಮಕೂರು) : ಜೂಜಾಟ, ಬೆಟ್ಟಿಂಗ್ ಆಡುವವರನ್ನು ಜೈಲಿಗೆ ಅಟ್ಟಬೇಕಾದ ಪೊಲೀಸರೇ ಆರೋಪಿಯ ಮೊಬೈಲ್‌ ಬಳಸಿ ಆನ್‌ಲೈನ್‌ನಲ್ಲಿ ಬೆಟ್ಟಿಂಗ್ ಆಡಿ ಅಮಾನತಾಗಿರುವ ಘಟನೆ ತುಮಕೂರು ಜಿಲ್ಲೆಯ ತುರುವೇಕೆರೆಯಲ್ಲಿ ಬೆಳಕಿಗೆ ಬಂದಿದೆ. ತುರುವೇಕೆರೆ ಸಬ್ ಇನ್ಸ್‌ಪೆಕ್ಟರ್ ಸಂಗಮೇಶ ಮೇಟಿ ಅಮಾನತುಗೊಂಡ ಪೊಲೀಸ್‌.

ಏನಿದು ಘಟನೆ?:

ಪ್ರಕರಣವೊಂದರಲ್ಲಿ ತಪ್ಪಿತಸ್ಥನಾಗಿದ್ದ ಆರೋಪಿಯೊಬ್ಬನನ್ನು ಜೈಲಿಗೆ ಬಿಡಬೇಕಾದ ಸಂದರ್ಭದಲ್ಲಿ ಆತನ ಮೊಬೈಲ್ ತೆಗೆದುಕೊಂಡು, ಫೊನ್ ಪೇ ಪಾಸ್‌ವರ್ಡ್‌ ಪಡೆದು ಆನ್‌ಲೈನ್‌ನಲ್ಲಿ ಬೆಟ್ಟಿಂಗ್ ಆಡಿದ್ದಾರೆ.

ಈ ಸಂಬಂಧ ಆರೋಪಿ ಸಬ್ ಇನ್ಸ್‌ಪೆಕ್ಟರ್ ಸಂಗಮೇಶ ಅವರು ನನ್ನ ಮೊಬೈಲ್‌ ಪಡೆದು ಬೆಟ್ಟಿಂಗ್‌ ಆಡಿ ನನ್ನ ಖಾತೆಯಲ್ಲಿದ್ದ ₹95000 ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದರು.

ಈ ಸಂಬಂಧ ತನಿಖೆ ಮಾಡಿದಾಗ ಸಂಗಮೇಶ ಅವರು ಆರೋಪಿಯ ಹಣ ದುರುಪಯೋಗ ಮಾಡಿರುವುದು ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಹಿರಿಯ ಅಧಿಕಾರಿಗಳು ಜಿಲ್ಲಾ ಎಸ್ಪಿಗೆ ಸೂಚನೆ ನೀಡಿದ್ದಾರೆ. ಅದರಂತೆಯೇ ಸಬ್ ಇನ್ಸ್‌ಪೆಕ್ಟರ್‌ ಅವರನ್ನು ಜಿಲ್ಲಾ ಎಸ್ಪಿ ಅಶೋಕ್ ಅವರು ಅಮಾನತು ಮಾಡಿದ್ದಾರೆ.

PREV
Read more Articles on

Recommended Stories

ಅಕ್ರಮ ಆಸ್ತಿ ಗಳಿಕೆ ಮಾಡಿದ್ದ ಬಿಎಂಟಿಸಿ ಅಧಿಕಾರಿಗೆ 3 ವರ್ಷ ಜೈಲುವಾಸ, 70 ಲಕ್ಷ ರು. ದಂಡ
ಬೆಂಗ್ಳೂರಲ್ಲಿ ಬೀದಿ ನಾಯಿ ಮೇಲೆ ಸಾಮೂಹಿಕ ರೇಪ್‌ ಆರೋಪ!