ಡೇಟಿಂಗ್‌ ಆ್ಯಪಲ್ಲಿ ಚೆಲುವೆ ಬಲೆಗೆ ಬಿದ್ದ ಟೆಕ್ಕಿಗೆ ₹1.6 ಕೋಟಿ ವಂಚನೆ

KannadaprabhaNewsNetwork |  
Published : May 29, 2026, 03:30 AM IST
Money

ಸಾರಾಂಶ

ಡೇಟಿಂಗ್ ಆ್ಯಪ್‌ನಲ್ಲಿ ’ಬೆಳದಿಂಗಳ ಬಾಲೆ’ಯೊಬ್ಬಳ ಮಾತಿಗೆ ಮರುಳಾಗಿ ಸಾಫ್ಟ್‌ವೇರ್ ಉದ್ಯೋಗಿಯೊಬ್ಬ 1.6 ಕೋಟಿ ರು.ಕಳೆದುಕೊಂಡ ಪ್ರಸಂಗ ನಡೆದಿದೆ. ನಗರದ ಎಲೆಕ್ಟ್ರಾನಿಕ್‌ ಸಿಟಿ ನಿವಾಸಿಯಾದ 32 ವರ್ಷದ ಟೆಕ್ಕಿ ಮೋಸ ಹೋಗಿದ್ದು, ಈ ಸಂಬಂಧ ಆತ ನೀಡಿದ ದೂರಿನ ಮೇರೆಗೆ ಆಗ್ನೇಯ ವಿಭಾಗದ ಸೈಬರ್ ಕ್ರೈಂ ಠಾಣೆಯಲ್ಲಿ ಅಪರಿಚಿತಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

 ಬೆಂಗಳೂರು :  ಡೇಟಿಂಗ್ ಆ್ಯಪ್‌ನಲ್ಲಿ ’ಬೆಳದಿಂಗಳ ಬಾಲೆ’ಯೊಬ್ಬಳ ಮಾತಿಗೆ ಮರುಳಾಗಿ ಸಾಫ್ಟ್‌ವೇರ್ ಉದ್ಯೋಗಿಯೊಬ್ಬ 1.6 ಕೋಟಿ ರು.ಕಳೆದುಕೊಂಡ ಪ್ರಸಂಗ ನಡೆದಿದೆ. ನಗರದ ಎಲೆಕ್ಟ್ರಾನಿಕ್‌ ಸಿಟಿ ನಿವಾಸಿಯಾದ 32 ವರ್ಷದ ಟೆಕ್ಕಿ ಮೋಸ ಹೋಗಿದ್ದು, ಈ ಸಂಬಂಧ ಆತ ನೀಡಿದ ದೂರಿನ ಮೇರೆಗೆ ಆಗ್ನೇಯ ವಿಭಾಗದ ಸೈಬರ್ ಕ್ರೈಂ ಠಾಣೆಯಲ್ಲಿ ಅಪರಿಚಿತಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಕೆಲ ತಿಂಗಳ ಹಿಂದೆ ಟೆಕ್ಕಿಗೆ ಡೇಟಿಂಗ್ ಆ್ಯಪ್‌ನಲ್ಲಿ ರಿಯಾ ಅಗರ್ವಾಲ್ ಎಂಬಾಕೆಯ ಪರಿಚಯವಾಗಿದೆ. ಬಳಿಕ ಚಾಟಿಂಗ್ ನಡೆದು ಕೊನೆಗೆ ಮೊಬೈಲ್ ಸಂಖ್ಯೆಗಳು ಪರಸ್ಪರ ವಿನಿಯಮವಾಗಿವೆ. ಮಾತುಕತೆ ಮುಂದುವರಿದಿದೆ. ಆಗ ತಾನು ಹೇಳಿದಂತೆ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ದುಪ್ಪಟ್ಟ ಲಾಭಗಳಿಸಬಹುದು ಎಂದು ಆಕೆ ಆಮಿಷವೊಡ್ಡಿದ್ದಳು.

ಈ ಸಲಹೆಗೆ ಒಪ್ಪಿದ ಆತ ಮಾಯಾಂಗನೆ ಸೂಚಿಸಿದ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ 1.6 ಕೋಟಿ ರು ಹಣ ವರ್ಗಾವಣೆ ಮಾಡಿದ್ದಾನೆ. ಮೊದಲು ಲಾಭವೆಂದು 4 ಸಾವಿರ ರು.ಮಾತ್ರ ಕೊಟ್ಟ ಆಕೆ, ಕೊನೆಗೆ ಟೆಕ್ಕಿಗೆ ಸೋಡಾ ಚೀಟಿ ನೀಡಿದ್ದಾಳೆ. ಹಣ ಸಂದಾಯವಾದ ಬಳಿಕ ಆಕೆ ವರಸೆ ಬದಲಾಗಿದೆ. ಆಗ ತನ್ನ ಹಣ ಮರಳಿಸುವಂತೆ ಸಂತ್ರಸ್ತ ಕೇಳುತ್ತಿದ್ದಂತೆ ಆ ಸುಂದರಿ ನಾಪತ್ತೆ ಆಗಿದ್ದಾಳೆ. ಅಂತಿಮವಾಗಿ ಟೆಕ್ಕಿಗೆ ಮೋಸ ಹೋಗಿರುವುದು ಅರಿವಿಗೆ ಬಂದಿದೆ. ಬಳಿಕ ಸೈಬರ್ ಕ್ರೈಂ ಠಾಣೆಗೆ ಆತ ದೂರು ನೀಡಿದ್ದಾನೆ ಎಂದು ತಿಳಿದು ಬಂದಿದೆ.

ಡೇಟಿಂಗ್‌ ಆ್ಯಪ್‌ನಲ್ಲಿ ಸುಂದರಿ ಬಲೆಗೆ ಬಿದ್ದ ಎಲೆಕ್ಟ್ರಾನಿಕ್‌ ಸಿಟಿ ನಿವಾಸಿ 32 ವರ್ಷದ ಟೆಕ್ಕಿ

ರಿಯಾ ಅಗರ್ವಾಲ್ ಎಂಬಾಕೆಯ ಜೊತೆ ಮಾತುಕತೆ ಬಳಿಕ ಮೊಬೈಲ್‌ ಸಂಖ್ಯೆ ವಿನಿಮಯ

ಟೆಕ್ಕಿಗೆ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಲಾಭಗಳಿಸುವ ಆಮಿಷವೊಡ್ಡಿದ ವಂಚಕಿ

ಸುಂದರಿಯ ಮಾತು ಕೇಳಿ 1.6 ಕೋಟಿ ರು. ವರ್ಗಾವಣೆ ಮಾಡಿ ಮೋಸ ಹೋದ ಎಂಜಿನಿಯರ್‌

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.
Read more Articles on

Recommended Stories

ಡಗ್ಸ್‌ ಕೇಸಲ್ಲಿ ನೈಜೀರಿಯಾ ಪ್ರಜೆಗೆ ಜಾಮೀನು ನಿರಾಕರಿಸಿದ ಹೈಕೋರ್ಟ್‌
ಎಪಿಕೆ ಫೈಲ್‌ ಸೃಷ್ಟಿಸಿ ವಂಚನೆ ಕೇಸಲ್ಲಿ ಉದ್ಯೋಗಿ ಬಂಧನ ಬೇಡ : ಹೈಕೋರ್ಟ್