ಬೆಂಗಳೂರು : ಆನ್‌ಲೈನ್‌ ಗೇಮಿಂಗ್‌ ಆ್ಯಪ್‌ನಲ್ಲಿ ಜೂಜಾಡಿ ₹3 ಕೋಟಿ ಕಳೆದುಕೊಂಡ ಟೆಕಿ

KannadaprabhaNewsNetwork |  
Published : Dec 08, 2024, 01:16 AM ISTUpdated : Dec 08, 2024, 05:38 AM IST
ಹಣ  | Kannada Prabha

ಸಾರಾಂಶ

ಆನ್‌ಲೈನ್‌ ಗೇಮಿಂಗ್‌ನಲ್ಲಿ ಹಣ ಕಳೆದುಕೊಳ್ಳುವವರ ಸಂಖ್ಯೆ ಮುಂದುವರೆದಿದ್ದು, ಮತ್ತೆ ಸಾಫ್ಟ್‌ವೇರ್ ಉದ್ಯೋಗಿಯೊಬ್ಬರು 3 ಕೋಟಿ ರು ಮೋಸ ಹೋಗಿದ್ದಾರೆ.

 ಬೆಂಗಳೂರು : ಆನ್‌ಲೈನ್‌ ಗೇಮಿಂಗ್‌ನಲ್ಲಿ ಹಣ ಕಳೆದುಕೊಳ್ಳುವವರ ಸಂಖ್ಯೆ ಮುಂದುವರೆದಿದ್ದು, ಮತ್ತೆ ಸಾಫ್ಟ್‌ವೇರ್ ಉದ್ಯೋಗಿಯೊಬ್ಬರು 3 ಕೋಟಿ ರು ಮೋಸ ಹೋಗಿದ್ದಾರೆ.

ನಗರದ ಮೆಕಾಲೆ ಚರ್ಚ್ ರೋಡ್ ನಿವಾಸಿ ನಿಶಾಂತ್ ಶ್ರೀವಾತ್ಸವ್ ಮೋಸ ಹೋಗಿದ್ದು, ಆನ್‌ಲೈನ್ನ ಪ್ಯಾಕೆಟ್ 52 ಹೆಸರಿನ ಆ್ಯಪ್‌ನಲ್ಲಿ ಜೂಜಾಡಿ ಹಣ ಕಳೆದುಕೊಂಡಿದ್ದಾರೆ. ಈ ಸಂಬಂಧ ಕೇಂದ್ರ ವಿಭಾಗದ ಸಿಇಎನ್‌ ಠಾಣೆಗೆ ಆ ಆ್ಯಪ್‌ ಸಿಇಓ ಹಾಗೂ ಗೇಮ್ಸ್ ಕ್ರಾಫ್ಟ್ ಕಂಪನಿ ಸಿಇಒ ಸೇರಿ ಇತರರ ವಿರುದ್ಧ ಉದ್ಯೋಗಿ ನೀಡಿದ ದೂರಿನ ಮೇರೆಗೆ ಎಫ್‌ಐಆರ್ ದಾಖಲಾಗಿದೆ. ಇತ್ತೀಚಿಗೆ ಆನ್‌ಲೈನ್ ಗೇಮಿಂಗ್ ಹಾಗೂ ಟ್ರೇಡಿಂಗ್‌ ಹೆಸರಿನಲ್ಲಿ ಹಣ ಹೂಡಿಕೆ ನೆಪದಲ್ಲಿ ಮೋಸ ಹೋಗುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಸಿಇಎನ್‌ ಠಾಣೆಗಳಲ್ಲಿ ನಿರಂತರವಾಗಿ ದೂರುಗಳು ದಾಖಲಾಗುತ್ತಿವೆ.

ಹೇಗೆ ಹಣ ಹೂಡಿಕೆ?: ಕಳೆದ ವರ್ಷ ‘ಪ್ಯಾಕೆಟ್ 52’ ಆ್ಯಪ್‌ನಲ್ಲಿ ಖಾತೆ ತೆರೆಯಲಾಯಿತು. ಆನಂತರ ಡಿಸೆಂಬರ್‌ನಲ್ಲಿ ಬಹಳಷ್ಟು ವಂಚನೆ ಚಟುವಟಿಕೆಗಳ ಬಗ್ಗೆ ಆ್ಯಪ್‌ನ ಬಳಕೆದಾರರು ದೂರುಗಳನ್ನು ಹೇಳಲಾರಂಭಿಸಿದರು. ನಾನು ಕಡಿಮೆ ಮೊತ್ತದ ಆಟದಲ್ಲಿ ಗೆಲುವು ಕಂಡಾಗ ಆ್ಯಪ್ ನಿರ್ವಹಣೆಕಾರರು ಪ್ರತಿಕ್ರಿಯಿಸುತ್ತಿದ್ದರು. ಆದರೆ ದೊಡ್ಡ ಮೊತ್ತ ಗೆದ್ದರು ಯಾವುದೇ ಪ್ರತಿಕ್ರಿಯೆ ನೀಡುತ್ತಿರಲಿಲ್ಲ. ಹಾಗೆ ಹಣದ ಬಗ್ಗೆ ಸಹ ಚಕಾರವೆತ್ತಿರಲಿಲ್ಲ. ಹೀಗಾಗಿ ತಮ್ಮ ಆ್ಯಪ್‌ನಲ್ಲಿ ಕೆಲ ವಂಚನೆಗಳು ನಡೆಯುತ್ತಿವೆ ಎಂದು ಆ್ಯಪ್‌ ನಿರ್ವಹಣೆಕಾರರು ಒಪ್ಪಿದ್ದರೂ ಕೂಡ ಕಳೆದುಕೊಂಡ ಹಣ ಮರಳಿಸಲಿಲ್ಲ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

ಈ ವಂಚನೆಯ ಚಟುವಟಿಕೆಗಳು ಆಟಗಾರರಿಂದ ನಡೆಯುತ್ತಿವೆಯೇ ಅಥವಾ ಆ್ಯಪ್‌ನ ಮೂಲದಲ್ಲಿಯೇ ಇವೆಯೇ ಎಂಬುದು ಗೊತ್ತಾಗಲಿಲ್ಲ. ಹೀಗಾಗಿ ಸಣ್ಣ ಪ್ರಮಾಣದ ಮೊತ್ತಗಳಲ್ಲಿ ಗೆಲುವು ಸಿಗುತ್ತಿದೆ. ಆದರೆ ದೊಡ್ಡ ಮೊತ್ತದ ಆಟಗಳಲ್ಲಿ ಕೆಲ ನಿರ್ದಿಷ್ಟ ವ್ಯಕ್ತಿಗಳೇ ವಿಜಯ ಸಾಧಿಸುತ್ತಿದ್ದರಿಂದ ಮೋಸದ ಶಂಕೆ ಮೂಡಿತು ಎಂದು ದೂರಿದ್ದಾರೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ತಡೆಗೋಡೆಗೆ ಕಾರು ಡಿಕ್ಕಿ: ನವ ವಿವಾಹಿತೆ ಸಾವು
ಬೈರತಿಗೆ ಮಧ್ಯಂತರ ಬೇಲಿಲ್ಲ, ಸಿಐಡಿ ಶೋಧ