ಕನ್ನಡಪ್ರಭ ವಾರ್ತೆ ಮೈಸೂರು ನಜರಬಾದ್‌ನ ಛತ್ರಿಮರದ ಬಳಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ. ಸುಮಾರು 40 ರಿಂದ 50 ವರ್ಷದ ವ್ಯಕ್ತಿಯು 5.5 ಅಡಿ ಎತ್ತರವಿದ್ದು, ಸಾಧಾರಣ ಮೈಕಟ್ಟು, ಕೋಲು ಮುಖ, ಕಪ್ಪು ಮೈ ಬಣ್ಣ, ಕಪ್ಪು ಮತ್ತು ಬಿಳಿಯ ತಲೆಕೂದಲು ಇದೆ. ಮೃತ ವ್ಯಕ್ತಿಯ ಮೈ ಮೇಲೆ ಕೆಂಪು ಬಣ್ಣದ ತುಂಬು ತೋಳಿನ ಶರ್ಟ್‌ಮತ್ತು ಕಪ್ಪು ಬಣ್ಣದ ನೈಟ್‌ಪ್ಯಾಂಟ್‌ಇರುತ್ತದೆ. ಮೃತನ ಎಡ ಎದೆಯ ಮೇಲೆ ಅಂಬಿ ಎಂಬ ಅಚ್ಚೆ ಮತ್ತು ಬಲಗೈಯಲ್ಲಿ ಅಚ್ಚೆ ಇದ್ದು, ಸ್ಪಷ್ಟವಾಗಿ ಕಾಣಿಸುವುದಿಲ್ಲ. ಈ ಚಹರೆಯುಳ್ಳ ವ್ಯಕ್ತಿಯ ವರಸುದಾರರು ಇದ್ದಲ್ಲಿ ನಜರಬಾದ್‌ಪೊಲೀಸ್‌ಠಾಣೆ ದೂ. 0821- 2418339 ಸಂಪರ್ಕಿಸಬಹುದು. ಮತ್ತೊಂದು ಪ್ರಕರಣದಲ್ಲಿ ಬೆಂಗಳೂರು- ಮೈಸೂರು ರಸ್ತೆ ಹಳೆ ಗೇಟ್ ಬಳಿಯ ದಂಡಿಮಾರಮ್ಮ ದೇವಸ್ಥಾನದ ಕಡೆಗೆ ಹೋಗುವ ರಸ್ತೆ ಪಕ್ಕದ ಚರಂಡಿ ಛೇಂಬರ್‌ನ ಮೇಲ್ಭಾಗದಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ. 50 ವರ್ಷದ ಈ ವ್ಯಕ್ತಿಯು 165 ಸೆ.ಮೀ. ಎತ್ತರವಿದ್ದು, ಗುಂಡು ಮುಖ, ಸಾಧಾರಣ ಮೈಕಟ್ಟು ಹೊಂದಿದ್ದಾರೆ. ಈ ಚಹರೆಯುಳ್ಳ ವ್ಯಕ್ತಿಯ ವಾರಸುದಾರರು ಇದ್ದಲ್ಲಿ ನರಸಿಂಹರಾಜ ಪೊಲೀಸ್‌ಠಾಣೆ ದೂ. 2418312 ಸಂಪರ್ಕಿಸಬಹುದು.