ವರದಕ್ಷಿಣೆ ಕಿರುಕುಳಕ್ಕೆ ಗೃಹಿಣಿ ಆತ್ಮಹತ್ಯೆ: ಪತಿ, ಅತ್ತೆಯ ಸೆರೆ

KannadaprabhaNewsNetwork |  
Published : Nov 10, 2026, 02:30 AM IST
ಕೇಂದ್ರ ಲೋಕ ಸೇವಾ ಆಯೋಗ ರಾಷ್ಟ್ರೀಯ ರಕ್ಷಣಾ ಅಕಾಡೆಮಿ(ಎನ್‌ಡಿಎ)ಗೆ ನಡೆಸುವ ಪರೀಕ್ಷೆಯಲ್ಲಿ ದೇಶಕ್ಕೆ ಪ್ರಥಮ ರ್‍ಯಾಂಕ್ ಪಡೆದುಕೊಂಡಿರುವ ಶ್ರೇಯ ಎನ್. ಗೌಡ ಸೋಮವಾರ ಭದ್ರಾವತಿ ನಗರಕ್ಕೆ ಆಗಮಿಸಿದ್ದು, ಇವರನ್ನು ಕ್ಷೇತ್ರದ ಜನತೆ ಅದ್ದೂರಿಯಾಗಿ ಸ್ವಾಗತಿಸಿದರು. | Kannada Prabha

ಸಾರಾಂಶ

ಪತಿ ಮನೆಯವರ ವರದಕ್ಷಿಣೆ ಹಾಗೂ ಮಾನಸಿಕವಾಗಿ ನೀಡುತ್ತಿದ್ದ ಕಿರುಕುಳ ತಾಳಲಾರದೆ ಗೃಹಿಣೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೋಣನಕುಂಟೆ ಪೊಲೀಸ್‌ ಠಾಣೆಯ ಜಂಬೂಸವಾರಿ ದಿಣ್ಣೆಯ ಮನೆಯೊಂದರಲ್ಲಿ ನಡೆದಿದೆ.

-8 ತಿಂಗಳ ಹಿಂದಷ್ಟೇ ವಿವಾಹ ಆಗಿದ್ದ ದಂಪತಿ

-ವರದಕ್ಷಿಣೆ ತರುವಂತೆ ಪತಿ, ಅತ್ತೆಯ ಕಿರುಕುಳಕನ್ನಡಪ್ರಭ ವಾರ್ತೆ ಬೆಂಗಳೂರು

ಪತಿ ಮನೆಯವರ ವರದಕ್ಷಿಣೆ ಹಾಗೂ ಮಾನಸಿಕವಾಗಿ ನೀಡುತ್ತಿದ್ದ ಕಿರುಕುಳ ತಾಳಲಾರದೆ ಗೃಹಿಣೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೋಣನಕುಂಟೆ ಪೊಲೀಸ್‌ ಠಾಣೆಯ ಜಂಬೂಸವಾರಿ ದಿಣ್ಣೆಯ ಮನೆಯೊಂದರಲ್ಲಿ ನಡೆದಿದೆ.

ಕೋಲಾರ ಮೂಲದ ಸಿರಿಶಾ(24) ಆತ್ಮಹತ್ಯೆಗೆ ಶರಣಾದವರು. ಮೃತರ ಕುಟುಂಬದವರು ನೀಡಿದ ದೂರಿನ ಅನ್ವಯ ಸಿರಿಶಾ ಪತಿ ಪ್ರದೀಪ್‌ ಮತ್ತು ಇವರ ತಾಯಿ ರಮಣಿ ಎಂಬುವರನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೋಲಾರ ಮೂಲದ ಸಿರಿಶಾ ಅವರು ಪ್ರದೀಪ್‌ನನ್ನು 8 ತಿಂಗಳ ಹಿಂದೆಯಷ್ಟೇ ವಿವಾಹವಾಗಿದ್ದರು. ಆರಂಭದಲ್ಲಿ ಅನೋನ್ಯವಾಗಿದ್ದರು, ನಂತರ ಸಣ್ಣ ಪುಟ್ಟ ವಿಚಾರಕ್ಕೆ ಯಾವಾಗಲು ಜಗಳವಾಡುತ್ತಿದ್ದರು. ಸಿರಿಶಾಗೆ ವರದಕ್ಷಿಣೆ ತರುವಂತೆ ಪತಿ ಹಾಗೂ ಅತ್ತೆ ಮಾನಸಿಕ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ಇದರಿಂದ ಮನನೊಂದ ಸಿರಿಶಾ ಸೋಮವಾರ ಬೆಳಗ್ಗೆ 7 ಗಂಟೆಯ ಸುಮಾರಿಗೆ ಜಂಬುಸವಾರಿ ದಿಣ್ಣೆ ಬಳಿಯ ಜಿ.ಆರ್ ಅಪಾರ್ಟ್‌ಮೆಂಟ್‌ನ ಕೊಣೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೃತಳ ಕುಟುಂಬದವರು ವರದಕ್ಷಿಣೆ ಕಿರುಕುಳದ ಆರೋಪ ಮಾಡಿದ್ದು, ಈ ಸಂಬಂಧ ಪ್ರಕರಣ ದಾಖಲಿಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ಬೆಂಗಳೂರು-ಮೈಸೂರು-ಕೇರಳ ಮಧ್ಯೆ ಡ್ರಗ್ಸ್‌ ಪೂರೈಕೆ ಜಾಲದ ಪ್ರಮುಖ ಆರೋಪಿ ಬಂಧನ
ಪತಿಯನ್ನು ಕೊಂದು ಹೃದಯಾಘಾತ ಕಥೆ ಕಟ್ಟಿದ್ದಳು!