ಒಂದು ಸರಳ ಪ್ರೇಮಕತೆ ಚಿತ್ರತಂಡದ ವಿನೂತನ ಪ್ರಚಾರ

KannadaprabhaNewsNetwork | Updated : Feb 07 2024, 11:41 AM IST

ಸಾರಾಂಶ

ಒಂದು ಸರಳ ಪ್ರೇಮಕತೆ ಚಿತ್ರತಂಡದಿಂದ ಬೆಂಗಳೂರಿನಿಂದ ಮೈಸೂರಿಗೆ ಕಾರ್ ರಾಲಿ. ಒಂದು ವಿನೂತನ ಪ್ರಚಾರ ಕಾರ್ಯಕ್ರಮ.

ಕನ್ನಡಪ್ರಭ ಸಿನಿವಾರ್ತೆ

ಸಿಂಪಲ್‌ ಸುನಿ ನಿರ್ದೇಶನದ ‘ಒಂದು ಸರಳ ಪ್ರೇಮಕತೆ’ ಚಿತ್ರತಂಡ ಫೆ.6ರಂದು ಬೆಂಗಳೂರಿನಿಂದ ಮೈಸೂರಿಗೆ ಕಾರ್ ರ್‍ಯಾಲಿ ಮಾಡುವ ಮೂಲಕ ವಿನೂತನ ಪ್ರಚಾರ ಮಾಡಿದೆ. ಈ ಸಿನಿಮಾ ಫೆ.8ರಂದು ಬಿಡುಗಡೆ ಆಗಲಿದೆ.

ಚಿತ್ರದ ನಾಯಕ ವಿನಯ್‌ ರಾಜ್‌ಕುಮಾರ್‌ ಬೆಳಿಗ್ಗೆ ಕಂಠೀರವ ಸ್ಟುಡಿಯೋಗೆ ತೆರಳಿ ರಾಜ್‌ಕುಮಾರ್‌, ಪಾರ್ವತಮ್ಮ ರಾಜ್‌ಕುಮಾರ್‌, ಪುನೀತ್‌ ರಾಜ್‌ಕುಮಾರ್‌ ಸಮಾಧಿ ನಮಿಸಿ ಆಶೀರ್ವಾದ ಪಡೆದುಕೊಂಡರು. 

ನಂತರ ಕಾರ್‌ ರ್‍ಯಾಲಿಯಲ್ಲಿ ಪಾಲ್ಗೊಂಡರು. ಅವರೊಂದಿಗೆ ನಿರ್ದೇಶಕ ಸಿಂಪಲ್ ಸುನಿ, ಚಿತ್ರತಂಡದ ಸದಸ್ಯರು ಮತ್ತು ಅಭಿಮಾನಿಗಳು ರ್‍ಯಾಲಿಯಲ್ಲಿ ಪಾಲ್ಗೊಂಡರು.

ಪ್ರೇಮಕಥಾ ಹಂದರವುಳ್ಳ ಈ ಸಿನಿಮಾದಲ್ಲಿ ಮಲ್ಲಿಕಾ ಸಿಂಗ್‌ ಹಾಗೂ ಸ್ವಾತಿಷ್ಠಾ ಕೃಷ್ಣನ್ ನಾಯಕಿಯರಾಗಿ ನಟಿಸಿದ್ದಾರೆ. ಮೈಸೂರು ರಮೇಶ್ ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ಫೆ.8ರಂದು ಅನೇಕ ಕಡೆಗಳಲ್ಲಿ ಪೇಯ್ಡ್‌ ಪ್ರೀಮಿಯರ್‌ ಶೋಗಳಿವೆ. ಬುಕ್‌ಮೈಶೋದಲ್ಲಿ ಈಗಾಗಲೇ ಬುಕಿಂಗ್‌ ಶುರುವಾಗಿದೆ.

Share this article