;Resize=(412,232))
ಸಾಹಿತಿ, ನಟಿ, ರಂಗಕರ್ಮಿ ಹೀಗೆ ಬೇರೆ ಬೇರೆ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸುವ ಸಾಮರ್ಥ್ಯವುಳ್ಳ ಅಪಾರ ಪ್ರತಿಭಾವಂತೆ ಅಕ್ಷತಾ ಪಾಂಡವಪುರ ಇದೀಗ ಸಿನಿಮಾ ನಿರ್ದೇಶನಕ್ಕೆ ಇಳಿಯುತ್ತಿದ್ದಾರೆ. ಪ್ರಸ್ತುತ ಅವರು ಸಿನಿಮಾ ನಿರ್ಮಾಣ ಪ್ರಕ್ರಿಯೆಗಳನ್ನು ಆರಂಭಿಸಿದ್ದು, ಕ್ರೌಡ್ ಫಂಡಿಂಗ್ ಮೂಲಕ ಸಿನಿಮಾ ರೂಪಿಸುವ ಉದ್ದೇಶ ಹೊಂದಿದ್ದಾರೆ.
ಸಿನಿಮಾದಲ್ಲಿನ ನಟನೆಗೆ ರಾಜ್ಯ ಪ್ರಶಸ್ತಿ, ಫಿಲ್ಮ್ ಫೇರ್ ಪ್ರಶಸ್ತಿ ಪಡೆದಿರುವ ಅವರು ‘ಲೀಕ್ ಔಟ್’ ಎಂಬ ವಿಶಿಷ್ಟ ರಂಗಪ್ರಯೋಗದಿಂದ ನಾಡಿನುದ್ದಕ್ಕೂ ಜನಪ್ರೀತಿ ಗಳಿಸಿದ್ದಾರೆ. ಆ ರಂಗಪ್ರಯೋಗ 125 ಪ್ರದರ್ಶನ ಕಂಡಿರುವುದು ಅವರ ಹೆಗ್ಗಳಿಕೆ.
‘ನಾನು ನಟಿಯಾಗಿದ್ದರೂ ಸಿನಿಮಾ ನಿರ್ದೇಶನ ನನ್ನ ಕನಸು. ಕಳೆದ ಎರಡು ವರ್ಷಗಳಿಂದ ನಾನು ಈ ಕುರಿತೇ ಆಲೋಚಿಸುತ್ತಿದ್ದೇನೆ. ಇದೀಗ ಸಮಾನ ಮನಸ್ಕರ ತಂಡ ಕಟ್ಟುತ್ತಿದ್ದೇನೆ. ಒಂದು ವಿಡಂಬನಾತ್ಮಕ ಕತೆಯನ್ನು ಪ್ರಸ್ತುತ ಪಡಿಸುವ ಆಸೆ ನನ್ನದು. ತುಂಬಾ ದೊಡ್ಡ ತಾರಾಗಣವಿರುವ ಈ ಚಿತ್ರದಲ್ಲಿ ಮಹಿಳಾ ಪಾತ್ರಗಳು ಜಾಸ್ತಿ ಇರುತ್ತವೆ’ ಎಂದು ಅವರು ಅಕ್ಷತಾ ಪಾಂಡವಪುರ ತಿಳಿಸಿದ್ದಾರೆ.
ಸದ್ಯ ಪ್ರೀ ಪ್ರೊಡಕ್ಷನ್ ಹಂತದಲ್ಲಿರುವ ಈ ಸಿನಿಮಾ ತಂಡ ಸೇರುವ ಆಸಕ್ತಿ ಇರುವವರು 9353771172 ಸಂಖ್ಯೆ ಸಂಪರ್ಕಿಸಬಹುದು.