;Resize=(412,232))
‘ಸಂಬಂಧಗಳನ್ನು ಮರೆಯುತ್ತಿದ್ದೇವೆ. ಅನಗತ್ಯ ಕಾರಣಗಳಿಂದ ದೂರಾಗುತ್ತಿದ್ದೇವೆ. ಜಾತಿ, ಮತ, ಪಂಥ ಇತ್ಯಾದಿ ಎಲ್ಲಾ ಬಿಟ್ಟು ಒಂದಾಗೋಣ ಅನ್ನುವುದನ್ನು ಹೇಳುವುದಕ್ಕಿತ್ತು. ಅದಕ್ಕಾಗಿ ಈ ಹಾಡು ಮಾಡಿದ್ದೇವೆ’.
ಅವರ ನಟನೆ, ನಿರ್ಮಾಣದ, ಪೂರ್ಣಚಂದ್ರ ಮೈಸೂರು ನಿರ್ದೇಶನದ ‘ಮದರ್ ಪ್ರಾಮಿಸ್’ ಚಿತ್ರದ ‘ಓ ಬೆಳಕೇ ಬಾ ಬೆಳಕೆ’ ಹಾಡು ಬಿಡುಗಡೆಯಾಗಿದೆ. ಇಡೀ ಚಿತ್ರತಂಡ ತುಮಕೂರಿನ ಸಿದ್ದಗಂಗಾ ಮಠದಲ್ಲಿನ ಮಕ್ಕಳ ಜೊತೆ ಹೋಗಿ ಈ ಹಾಡನ್ನು ಚಿತ್ರೀರಿಸಿಕೊಂಡಿದೆ.
‘ಸಿದ್ಧಗಂಗಾ ಮಠದಲ್ಲಿ ಜಾತಿ ಭೇದವಿಲ್ಲದೆ, ಎಲ್ಲಾ ಊರಿನ ಮಕ್ಕಳು ಬಂದು ವಿದ್ಯಾಭ್ಯಾಸ ಪಡೆಯುತ್ತಾರೆ. ಆ ಸ್ಥಳದಲ್ಲಿದ್ದರೆ ಒಂದು ವಿಶಿಷ್ಟ ಅನುಭೂತಿ ಆವರಿಸುತ್ತದೆ. ಹಾಗಾಗಿ ಅಲ್ಲಿಯೇ ಹೋಗಿ ಈ ಹಾಡನ್ನು ಚಿತ್ರೀಕರಿಸಿಕೊಂಡೆವು. ಈ ಹಾಡು ನಮ್ಮ ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ಬರುತ್ತದೆ. ಬಹುತೇಕ ಸಿನಿಮಾ ನಮ್ಮನ್ನು ನಗಿಸುತ್ತದೆ, ಆದರೆ ಕೊನೆಯಲ್ಲಿ ಮೌನವಾಗಿಸುತ್ತದೆ. ಯಾಕೆ ಆ ಮೌನ ಅಂತ ತಿಳಿಯಲು ನೀವು ಸಿನಿಮಾ ನೋಡಬೇಕು’ ಅನ್ನುತ್ತಾರೆ ಧನಂಜಯ್.
ಧನಂಜಯ್ ಅವರೇ ಈ ಹಾಡು ಬರೆದಿದ್ದು, ನವನೀತ್ ಶ್ಯಾಮ್ ಸಂಗೀತ ನೀಡಿದ್ದಾರೆ. ಹರ್ಷ ಮುರುಂಡಿ ಶಿವಲಿಂಗಪ್ಪ ನಿರ್ಮಾಣದ ಈ ಸಿನಿಮಾ ಜುಲೈ 10ರಂದು ಬಿಡುಗಡೆಯಾಗುತ್ತಿದೆ.