ವೀರ ಕಂಬಳದಲ್ಲಿ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ನಟಿಸಿದ್ದಾರೆ

Published : Feb 11, 2026, 01:32 PM IST
D Veerendra Heggade

ಸಾರಾಂಶ

- 700 ವರ್ಷಕ್ಕೂ ಅಧಿಕ ಇತಿಹಾಸ ಇರುವ ಕಂಬಳ ಎಂಬ ತುಳುನಾಡ ಕ್ರೀಡೆಯನ್ನು ಎರಡು ಮನೆತನಗಳ ಘರ್ಷಣೆಯ ಹಿನ್ನೆಲೆಯಲ್ಲಿ ಕಟ್ಟಿಕೊಟ್ಟಿದ್ದೇವೆ.- ಇದೇ ಮೊದಲ ಬಾರಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಸಿನಿಮಾದಲ್ಲಿ ನಟಿಸಿದ್ದಾರೆ.

  ಸಿನಿವಾರ್ತೆ

- 700 ವರ್ಷಕ್ಕೂ ಅಧಿಕ ಇತಿಹಾಸ ಇರುವ ಕಂಬಳ ಎಂಬ ತುಳುನಾಡ ಕ್ರೀಡೆಯನ್ನು ಎರಡು ಮನೆತನಗಳ ಘರ್ಷಣೆಯ ಹಿನ್ನೆಲೆಯಲ್ಲಿ ಕಟ್ಟಿಕೊಟ್ಟಿದ್ದೇವೆ.

- ಇದೇ ಮೊದಲ ಬಾರಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಸಿನಿಮಾದಲ್ಲಿ ನಟಿಸಿದ್ದಾರೆ.

- ಕಂಬಳದ ಕಥೆಯನ್ನೇ ಪ್ರಧಾನವಾಗಿಟ್ಟುಕೊಂಡು ಬಂದಿರುವ ಮೊದಲ ಕನ್ನಡ ಚಿತ್ರವಿದು.

- ಮೊದಲ ಸಲ ದುಬೈನ ಒಂಟೆ ರೇಸ್‌ ಅನ್ನು ಸಿನಿಮಾದಲ್ಲಿ ತಂದಿದ್ದೇವೆ.

ಫೆ.27ರಂದು ‘ವೀರ ಕಂಬಳ’ ಸಿನಿಮಾ ವಿಶೇಷತೆಗಳನ್ನು ನಿರ್ದೇಶಕ ರಾಜೇಂದ್ರಸಿಂಗ್‌ ಬಾಬು ಹೀಗೆ ತೆರೆದಿಡುತ್ತಾರೆ.

‘ಸಿನಿಮಾದಲ್ಲಿ ಬರುವ ಪ್ರತಿಯೊಂದು ವಿಚಾರವೂ ನೈಜ

‘ಸಿನಿಮಾದಲ್ಲಿ ಬರುವ ಪ್ರತಿಯೊಂದು ವಿಚಾರವೂ ನೈಜವಾದದ್ದು. ಇದರ ಸಂಶೋಧನೆಗಾಗಿ ವರ್ಷಗಟ್ಟಲೆ ಕೆಲಸ ಮಾಡಿದ್ದೇವೆ. ಇಗೋ ಕಾರಣಕ್ಕೆ ಸೃಷ್ಟಿಯಾದ ಕೌಟುಂಬಿಕ ಕಲಹದಿಂದ; ಒಮ್ಮೆ ಆರಂಭವಾದರೆ ನಿಲ್ಲಲೇ ಬಾರದ ಕಂಬಳ ನಿಲ್ಲುವಂತಾಗುತ್ತದೆ. ಇದರಿಂದ ಕುಟುಂಬಗಳಿಗೆ ಅನೇಕ ಸಮಸ್ಯೆಗಳು ಬರುತ್ತವೆ. ಈ ಕೌಟುಂಬಿಕ ವ್ಯಾಜ್ಯವನ್ನು ಬಗೆಹರಿಸಿ ಕಂಬಳವನ್ನು ಹಿಂದಿನ ಗತ್ತಿನಲ್ಲಿ ಮುನ್ನಡೆಯುವಂತೆ ಆಶೀರ್ವದಿಸುವ ವೀರೇಂದ್ರ ಸನ್ನಿವೇಶದಲ್ಲಿ ಹೆಗ್ಗಡೆಯವರು ಕಾಣಿಸಿಕೊಂಡಿದ್ದಾರೆ. ಕೋಳಿ ಅಂಕದಂಥಾ ತುಳುನಾಡಿನ ಆಚರಣೆಗಳೂ ಚಿತ್ರದಲ್ಲಿವೆ. 2 ಗಂಟೆ 20 ನಿಮಿಷಗಳಲ್ಲಿ ಇವನ್ನೆಲ್ಲ ಹೇಳುವುದು ನಿಜಕ್ಕೂ ಚಾಲೆಂಜಿಂಗ್‌ ಆಗಿತ್ತು’ ಎಂದು ಅವರು ಹೇಳಿದರು.

ಡಾ. ವಿನಿತಾ ವಿಜಯ್ ಕುಮಾರ್ ರೆಡ್ಡಿ ಮತ್ತು ಅರುಣ್ ರೈ ತೊಡಾರ್ ನಿರ್ಮಾಣದ ಈ ಚಿತ್ರ ಕನ್ನಡ ಹಾಗೂ ತುಳು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ವಿಜಯಕುಮಾರ್‌ ಕೊಡಿಯಾಲ್‌ಬೈಲ್‌ ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ಆದಿತ್ಯ, ಸ್ವರಾಜ್‌ ಶೆಟ್ಟಿ, ಪ್ರಕಾಶ್‌ ರೈ, ರವಿಶಂಕರ್‌, ರಾಧಿಕಾ ಚೇತನ್‌, ನವೀನ್‌ ಡಿ ಪಡೀಲ್‌, ಭೋಜರಾಜ ವಾಮಂಜೂರ್‌, ಗೋಪೀನಾಥ್ ಭಟ್‌ ನಟಿಸಿದ್ದಾರೆ.

 

PREV
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.
Read more Articles on

Recommended Stories

ಈ ಲೆವೆಲ್‌ಗೆ ಜನ ವಿಲನ್‌ನ ಇಷ್ಟಪಡ್ತಾರೆ ಅಂತ ನಿರೀಕ್ಷಿಸಿರಲಿಲ್ಲ : ಅನಿರುದ್ದ ಭಟ್
ಯಶ್‌ ಮಗನ ಪಾತ್ರದಲ್ಲಿ ರಾಘವ್‌ ಜುಯಲ್‌