300 ಕೋಟಿಯತ್ತ ದಾಪುಗಾಲು ಹಾಕುತ್ತಿರುವ ಧುರಂಧರ್‌ 2

Published : Mar 21, 2026, 12:34 PM IST
ranveer singh Dhurandhar 2 box office worldwide Collection

ಸಾರಾಂಶ

ಆದಿತ್ಯ ಧರ್‌ ನಿರ್ದೇಶನದ ‘ಧುರಂಧರ್‌ 2’ ಸಿನಿಮಾ 300 ಕೋಟಿ ರು. ಕ್ಲಬ್‌ನತ್ತ ದಾಪುಗಾಲು ಹಾಕುತ್ತಿದೆ. ಮೊದಲ ದಿನವೇ ಪ್ರಿ ರಿಲೀಸ್‌ ಗಳಿಕೆ ಸೇರಿ ಚಿತ್ರದ ಕಲೆಕ್ಷನ್‌ 237 ಕೋಟಿ ರು.ಗೂ ಅಧಿಕವಾಗಿದ್ದು, ಭಾರತದಲ್ಲೇ ಈ ಸಿನಿಮಾ 173 ಕೋಟಿ ಕಲೆಕ್ಷನ್‌ ಮಾಡಿ ದಾಖಲೆ ಬರೆದಿದೆ.

 ಸಿನಿವಾರ್ತೆ

ಆದಿತ್ಯ ಧರ್‌ ನಿರ್ದೇಶನದ ‘ಧುರಂಧರ್‌ 2’ ಸಿನಿಮಾ 300 ಕೋಟಿ ರು. ಕ್ಲಬ್‌ನತ್ತ ದಾಪುಗಾಲು ಹಾಕುತ್ತಿದೆ. ಮೊದಲ ದಿನವೇ ಪ್ರಿ ರಿಲೀಸ್‌ ಗಳಿಕೆ ಸೇರಿ ಚಿತ್ರದ ಕಲೆಕ್ಷನ್‌ 237 ಕೋಟಿ ರು.ಗೂ ಅಧಿಕವಾಗಿದ್ದು, ಭಾರತದಲ್ಲೇ ಈ ಸಿನಿಮಾ 173 ಕೋಟಿ ಕಲೆಕ್ಷನ್‌ ಮಾಡಿ ದಾಖಲೆ ಬರೆದಿದೆ. ಈ ಮೂಲಕ ಓಪನಿಂಗ್‌ನಲ್ಲಿ ಈ ಮಟ್ಟಿನ ಗಳಿಕೆ ದಾಖಲಿಸಿದ ದೇಶದ ಎರಡನೇ ಅತೀ ದೊಡ್ಡ ಸಿನಿಮಾವಾಗಿ ಹೊರಹೊಮ್ಮಿದೆ.

ಗಳಿಕೆಯ ರೇಸ್‌ನಲ್ಲಿ ಎಸ್‌.ಎಸ್‌. ರಾಜಮೌಳಿ ನಿರ್ದೇಶನದ ‘ಆರ್‌ಆರ್‌ಆರ್‌’ ಸಿನಿಮಾವನ್ನು ಹಿಂದಿಕ್ಕಿದೆ. ಮೊದಲ ದಿನ ರೂ.275 ಕೋಟಿ ಕಲೆಕ್ಷನ್‌ ಮಾಡಿದ ಅಲ್ಲು ಅರ್ಜುನ್‌ ನಟನೆಯ ‘ಪುಷ್ಪ 2’ ಮೊದಲ ಸ್ಥಾನದಲ್ಲಿದೆ.

ಹಿಂದಿ ಭಾಷೆಯೊಂದರಲ್ಲೇ 105 ಕೋಟಿ ಕಲೆಕ್ಷನ್‌ ಮಾಡುವ ಮೂಲಕ ಅತ್ಯಧಿಕ ಗಳಿಕೆಯ ಬಾಲಿವುಡ್‌ ಸಿನಿಮಾವೆಂಬ ಗರಿಮೆಯೂ ‘ಧುರಂಧರ್‌ 2’ ಕಿರೀಟಕ್ಕೆ ಸೇರಿಕೊಂಡಿದೆ. ಈ ಸಿನಿಮಾ ಪ್ರೀಮಿಯರ್‌ ಶೋನಲ್ಲೇ 45 ಕೋಟಿ ರು.ಗಳಿಕೆ ಮಾಡಿದ್ದು, ಬಿಡುಗಡೆ ಪೂರ್ವದಲ್ಲಿ ಇದು ದಾಖಲೆಯ ಕಲೆಕ್ಷನ್‌ ಆಗಿದೆ.

ವಿಶ್ವಾದ್ಯಂತ ಅಭೂತಪೂರ್ವ ಪ್ರತಿಕ್ರಿಯೆ

‘ಧುರಂಧರ್‌ 2’ ಗೆ ವಿಶ್ವಾದ್ಯಂತ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಶೀಘ್ರ 1000 ಕೋಟಿ ರು. ಕ್ಲಬ್‌ ಸೇರುವ ವಿಶ್ವಾಸವಿದೆ. ಈ ಸಿನಿಮಾದ ಮೊದಲ ಭಾಗ ಗಳಿಕೆಯಲ್ಲಿ 1000 ಕೋಟಿ ರು.ಗಳ ಗಡಿ ದಾಟಿತ್ತು.

ರಣವೀರ್‌ ಸಿಂಗ್‌, ಅರ್ಜುನ್‌ ರಾಂಪಾಲ್‌, ಸಂಜಯ್‌ ದತ್‌, ರಾಕೇಶ್ ಬೇಡಿ ಮೊದಲಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.

PREV
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.
Read more Articles on

Recommended Stories

ಧುರಂಧರ್‌ 2 ಚಿತ್ರ ನೋಡಿದರೆ ಸಮಯ, ಹಣ ವ್ಯರ್ಥ: ರಮ್ಯಾ
ಕೆಡಿ ಚಿತ್ರದ ‘ಸೆರಗು ಸರ್‌ಸೇ’ ಹಾಡು ಬಗ್ಗೆ ಸಂಸತ್‌ನಲ್ಲೂ ಕಿಡಿ