ಚಿಕನ್‌ ಪೀಸ್‌ ಇಲ್ಲದ ಬಿರಿಯಾನಿಕೊಟ್ಟ ಹೊಟೆಲ್‌ ವಿರುದ್ಧ ಕೇಸ್‌!

KannadaprabhaNewsNetwork |  
Published : Dec 06, 2023, 01:15 AM IST
ನ್ಯಾಯಾಲಯ | Kannada Prabha

ಸಾರಾಂಶ

ಮನೇಲಿ ಬಿರಿಯಾನಿ ಓಪನ್‌ ಮಾಡಿ ನೋಡಿದ್ರೆ ಪೀಸೇ ಇರಲಿಲ್ಲವಂತೆ. ಬಳಿಕ ಅವರು ಹೋಟೆಲ್‌ಗೆ ಸರಿಯಾಗಿ ಪಾಠ ಕಲಿಸುವ ಅಂತಾ ಗ್ರಾಹಕರ ನ್ಯಾಯಾಲಯಕ್ಕೆ ದೂರು ನೀಡಿದ್ದಾರೆ.

ದುಡ್ಡು ಕೊಟ್ಟು ಚಿಕನ್‌ ಬಿರಿಯಾನಿ ತಿನ್ನೋಕೆ ಹೋದಾಗ ಬಿರಿಯಾನಿಯಲ್ಲಿ ಪೀಸೇ ಇಲ್ಲದಿದ್ದರೆ ಮನಸ್ಸಿಗೆ ಎಷ್ಟು ಸಂಕಟವಾಗುತ್ತೆ ಅನ್ನೋದು ಅನುಭವಿಸಿದವರಿಗೇ ಗೊತ್ತು ಬಿಡಿ. ಅಂದ ಹಾಗೆ ಇಲ್ಲಿ ಆಗಿದ್ದು ಇಷ್ಟೆ. ಮನೆಯಲ್ಲಿ ಗ್ಯಾಸ್‌ ಸಿಲಿಂಡರ್‌ ಖಾಲಿಯಾಗಿತ್ತು ಎಂಬ ಕಾರಣಕ್ಕೆ ಬೆಂಗಳೂರಿನ ನಿವಾಸಿ ಕೃಷ್ಣಪ್ಪ ಎಂಬುವವರು ಐಟಿಐ ಲೇಔಟ್‌ನಲ್ಲಿರುವ ಹೋಟೆಲ್‌ ಪ್ರಶಾಂತ್‌ಗೆ ಹೋಗಿ 150 ರು. ಕೊಟ್ಟು ಬಿರಿಯಾನಿ ಪಾರ್ಸಲ್‌ ತಗೊಂಡು ಬಂದಿದ್ದರಂತೆ. ಮನೇಲಿ ಬಿರಿಯಾನಿ ಓಪನ್‌ ಮಾಡಿ ನೋಡಿದ್ರೆ ಪೀಸೇ ಇರಲಿಲ್ಲವಂತೆ. ಬಳಿಕ ಅವರು ಹೋಟೆಲ್‌ಗೆ ಸರಿಯಾಗಿ ಪಾಠ ಕಲಿಸುವ ಅಂತಾ ಗ್ರಾಹಕರ ನ್ಯಾಯಾಲಯಕ್ಕೆ ದೂರು ನೀಡಿದ್ದಾರೆ. ಸಾಕ್ಷಿಗೆಂದು ಬಿರಿಯಾನಿ ಫೋಟೋನೆ ನೀಡಿದ್ದರಂತೆ ಬಳಿಕ ಕೋರ್ಟ್ ಹೋಟೆಲ್‌ಗೆ 1,000 ಪರಿಹಾರ ಮತ್ತು 150 ರು. ನೀಡುವಂತೆ ಆದೇಶಿಸಿದೆ.

PREV
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.

Recommended Stories

ಮಾರ್ಚ್‌ 8ಕ್ಕೆ ಯಶ್ ಟಾಕ್ಸಿಕ್ ಟ್ರೇಲರ್
ನಟಿಯರ ಮಾನಕ್ಕೆ ಧಕ್ಕೆಯಾಗುತ್ತಿದೆ : ಸಪ್ತಮಿ ಗೌಡ