ಸಚಿವರು 3 ಕೋಟಿ ಅನುದಾನ ಚಿಂತಾಮಣಿಗೆ ಒಯ್ದಿದ್ದಾರೆಂಬುದು ಸುಳ್ಳು : ಭರಣಿ ವೆಂಕಟೇಶ್‌

KannadaprabhaNewsNetwork |  
Published : Apr 22, 2026, 01:15 AM IST
Bharani Venkatesh

ಸಾರಾಂಶ

ಎಸ್ಸಿ ಎಸ್ಟಿಗೆ ಬಂದ 3 ಕೋಟಿ ಅನುದಾನ ಚಿಕ್ಕಬಳ್ಳಾಪುರದಿಂದ ಚಿಂತಾಮಣಿಗೆ ತೆಗೆದು ಕೊಂಡು ಹೋಗಿದ್ದಾರೆ ಎಂದು ಸಚಿವರ ವಿರುದ್ಧ ದೂರಲಾಗಿದೆ. ಇದು ಅಪ್ಪಟ ಸುಳ್ಳು ಎಂದು ಕೆಎಂಎಫ್ ಹಾಗೂ ಚಿಮುಲ್ ನಿರ್ದೇಶಕ ಭರಣಿ ವೆಂಕಟೇಶ್ ದೂರಿದರು.

 ಚಿಕ್ಕಬಳ್ಳಾಪುರ :  ಎಸ್ಸಿ ಎಸ್ಟಿಗೆ ಬಂದ 3 ಕೋಟಿ ಅನುದಾನ ಚಿಕ್ಕಬಳ್ಳಾಪುರದಿಂದ ಚಿಂತಾಮಣಿಗೆ ತೆಗೆದು ಕೊಂಡು ಹೋಗಿದ್ದಾರೆ ಎಂದು ಸಚಿವರ ವಿರುದ್ಧ ದೂರಲಾಗಿದೆ. ಇದು ಅಪ್ಪಟ ಸುಳ್ಳು ಎಂದು ಕೆಎಂಎಫ್ ಹಾಗೂ ಚಿಮುಲ್ ನಿರ್ದೇಶಕ ಭರಣಿ ವೆಂಕಟೇಶ್ ದೂರಿದರು.

ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಬುಧವಾರ ಸಚಿವರ ಬಗ್ಗೆ ಮಾಡಿರುವ ಸುಳ್ಳು ಆರೋಪದ ಬಗ್ಗೆ ಸ್ಪಷ್ಟನೆ ನೀಡಲು ನಡೆಸಿದ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಯಾರೋ ಒಬ್ಬರು ಪೋನ್ ಮಾಡಿ ಸರ್ ತಪ್ಪಾಗಿದೆ. ಬೈ ಮಿಸ್ಟೇಕ್ ಅದನ್ನು ಮಾಧ್ಯಮಕ್ಕೆ ಕೊಟ್ಟು ಬಿಟ್ಟಿದ್ದಾರೆ. ಅದೆಲ್ಲಾ ಸುಳ್ಳು, 3 ಕೋಟಿ ಅನುದಾನದ ಪೈಕಿ 99 ಲಕ್ಷ ಮೊದಲು ಕಂತಾಗಿ ಬಿಡುಗಡೆ ಮಾಡಿದ್ದು, ಆಕ್ಷನ್ ಪ್ಲಾನ್ ಆಗಿದೆ. ಕಾಮಗಾರಿ ನಡೆಯುತ್ತಿದೆ. ಸುದ್ದಿಗೋಷ್ಠಿ ಯಲ್ಲಿ ಇದನ್ನು ಪ್ರಸ್ತಾಪ ಮಾಡಬೇಡಿ ಎಂದು ತಿಳಿಸಿದ್ದಾರೆ. ಇದಕ್ಕೆ ಅರ್ಥ ಏನು? ಮೀಡಿಯಾಗೆ ಕೊಟ್ಟು ಪ್ರಸಾರ ಆದ ಮೇಲೆ ನಿಲ್ಲಿಸಿ ಎಂದರೆ ಹೇಗೆ. ಈ ಸುದ್ದಿ ನೋಡಿರುವ ಜನತೆ ನಿಜವೇನೋ ಎಂದು ಅರಿಯುವುದಿಲ್ಲವೆ ? ಎಂದು ಬೇಸರಿಸಿದರು.

ಚಿಂತಾಮಣಿ ವಿಧಾನ ಸಭಾ ಕ್ಷೇತ್ರ ಎಂದು ತಪ್ಪಾಗಿ ನಮೂದಾಗಿದೆ.

2025-26ನೇ ಸಾಲಿನಲ್ಲಿ ಚಿಕ್ಕಬಳ್ಳಾಪುರ ವಿಧಾನ ಸಭಾ ಕ್ಷೇತ್ರ ಎನ್ನುವ ಬದಲಿಗೆ ಚಿಂತಾಮಣಿ ವಿಧಾನ ಸಭಾ ಕ್ಷೇತ್ರ ಎಂದು ತಪ್ಪಾಗಿ ನಮೂದಾಗಿದೆ. ಅಷ್ಟೇ. ಇದನ್ನು ಅರಿಯದ ಸ್ಥಳಿಯ ಶಾಸಕರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ದೀನ ದಲಿತ ವಿರೋಧಿ, ನನ್ನ ಕ್ಷೇತ್ರದ ಪಜಾತಿ, ವರ್ಗದ ಅಭಿವೃದ್ಧಿಗೆ ಬಂದಿದ್ದ 3 ಕೋಟಿಯನ್ನು ಚಿಂತಾಮಣಿಗೆ ಸಾಗಿಸಿದ್ದಾರೆ ಎಂದಿದ್ದಾರೆ. ಶಾಸಕ ಪ್ರದೀಪ್ ಈಶ್ವರ್ ಅವರು ಅಂಬೇಡ್ಕರ್ ಜಯಂತಿಗೆ ಬರದಿರಲು ಇದೂ ಒಂದು ಮುಖ್ಯ ಕಾರಣ. ದಲಿತರ ಅಭಿವೃದ್ಧಿ ತಂಟೆಗೆ ಬಂದರೆ ನಾನು ಸುಮ್ಮನಿರುವುದಿಲ್ಲ ಎಂಬ ಸಂದೇಶವನ್ನು ಯೂಟ್ಯೂಬ್ ಮತ್ತು ಸೋಷಿಯಲ್ ಮೀಡಿಯಾದಲ್ಲಿ ಹಾಕಿದ್ದಾರೆ. ನಿಮ್ಮನ್ನು ಈ ಸ್ಥಿತಿಯಲ್ಲಿ ನೋಡಲು ಸಚಿವರು ಸಾಕಷ್ಟು ಕಷ್ಟಪಟ್ಟಿದ್ದಾರೆ ಎಂದು ಹೇಳಿದರು.

ಸಂಬಂಧಿಸದ ವಿಚಾರಗಳಿಗೆ ತಲೆಹಾಕುತ್ತಾ ನಗೆಪಾಟಲಿಗೆ ಈಡಾಗಿದ್ದಾರೆ

ನಂದಿ ಮೆಡಿಕಲ್ ಸಂಶೋಧನಾ ಕೇಂದ್ರಕ್ಕೆ ಬಾಕಿಯಿದ್ದ 340 ಕೋಟಿ ಬಿಡುಗಡೆ, ಹೊಸ ಕಟ್ಟಡದಲ್ಲಿ ವೈದ್ಯಕೀಯ ಉಪಕರಣ ಖರೀದಿ ಮಾಡಲು 40 ಕೋಟಿ, ರಸ್ತೆ ಅಪಘಾತ ತಪ್ಪಿಸಲು ವೈದ್ಯಕೀಯ ಕಾಲೇಜು ಬಳಿ ಕಿರಿದಾದ ರಸ್ತೆ ಅಗಲೀಕರಣ ಮಾಡಲು ಲೋಕೋಪಯೋಗಿ ಇಲಾಖೆಯಿಂದ 2.40 ಕೋಟಿ, ಉನ್ನತ ಶಿಕ್ಷಣ ಇಲಾಖೆ ವ್ಯಾಪ್ತಿಗೆ ಬರುವ ಕೆಇಎ ಡಯಾಗ್ನಸ್ಟಿಕ್ ಸೆಂಟರ್ ಮಾಡಲು 8.20 ಕೋಟಿ ಇಪ್ಪತ್ತು ಲಕ್ಷ, ಎಂ.ಆರ್.ಐ ಯಂತ್ರ ಅಳವಡಿಸಲು 11ಕೋಟಿ, ಸಿಟಿ ಸ್ಕ್ಯಾನ್ ಉನ್ನತೀಕರಿಸಲು 7 ಕೋಟಿ ಅನುದಾನ ಕೊಟ್ಟಿದ್ದಾರೆ. ಯುಜಿಡಿ ನೀರು ಗೋಪಾಲಕೃಷ್ಣ ಕೆರೆಗೆ ಹರಿಯುವುದನ್ನು ತಡೆಯಲು 30 ಕೋಟಿ ಕೊಡಿಸಿದ್ದಾರೆ. 15ನೇ ಹಣಕಾಸು ಯೋಜನೆಯ 40 ಕೋಟಿ ಸೇರಿ ಒಟ್ಟು 70 ಕೋಟಿಯಿದೆ. ಇದಕ್ಕೆ ಆಕ್ಷನ್ ಪ್ಲಾನ್ ಮಾಡಿ ಪಕ್ಷದಿಂದ ಇಷ್ಟು ಅನುದಾನ ಬಂದಿದೆ ಎಂದು ಸಭೆ ಮಾಡಿ ನಗರಸಭಾ ಸದಸ್ಯರಿಗೆ ಹಂಚಿ ಅಭಿವೃದ್ದಿ ಮಾಡಿದ್ದಿದರೆ ಮುಂಬರುವ ಚುನಾವಣೆಯಲ್ಲಿ ಪಕ್ಷಕ್ಕೆ ಅನುಕೂಲ ಆಗುತ್ತಿರಲಿಲ್ಲವೇ? ಇದನ್ನು ಬಿಟ್ಟು ಶಾಸಕರು ತಮಗೆ ಸಂಬಂಧಿಸದ ವಿಚಾರಗಳಿಗೆ ತಲೆಹಾಕುತ್ತಾ ನಗೆಪಾಟಲಿಗೆ ಈಡಾಗಿದ್ದಾರೆ ಎಂದು ದೂರಿದರು.

ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣ ಅಭಿವೃದ್ದಿಗೆ 10 ಕೋಟಿ ಅನುದಾನ ಮಂಜೂರು ಮಾಡಿದ್ದಾರೆ. ಸರ್ಕಾರಿ ಪದವಿ ಮಹಿಳಾ ಕಾಲೇಜಿಗೆ 6 ಕೋಟಿ ಅನುದಾನ, ಸರಕಾರಿ ಪ್ರಥಮದರ್ಜೆ ಕಾಲೇಜು (ಮುನ್ಸಿಪಲ್) ಅಭಿವೃದ್ದಿಗೆ 6 ಕೋಟಿ, ನಂದಿಬೆಟ್ಟದಲ್ಲಿ ದೀಪಾಲಂಕಾರಕ್ಕೆ 9 ಕೋಟಿ. ಅಂತಾರಾಷ್ಟ್ರೀಯ ಹೂವಿನ ಮಾರುಕಟ್ಟೆಗೆ 140ಕೋಟಿ ರು. ಕ್ಯಾಬಿನೆಟ್‌ನಲ್ಲಿ ಇಟ್ಟು 20 ಎಕರೆ ಭೂ ಮಂಜೂರು ಮಾಡಿಸಿದ್ದಾರೆ. ಹೀಗೆ ಅನುದಾನ ಪಟ್ಟಿ ನೀಡಿದ ಅವರು, ಇದು ಶಾಸಕರ ಅನುದಾನ ಅಲ್ಲ, ಚಿಂತಾಮಣಿಗೆ ಅನುದಾನ ತೆಗೆದುಕೊಂಡು ಹೋಗುವ ದರ್ದು ಅವರಿಗಿಲ್ಲ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಕಾಕಲಚಿಂತೆ ರಾಜಣ್ಣ, ಮೋಹನ್‌ ರೆಡ್ಡಿ, ಆವುಲ ರೆಡ್ಡಿ, ಮಿಲ್ಟನ್ ವೆಂಕಟೇಶ್, ಮಂಚೇನಹಳ್ಳಿ ಪ್ರಕಾಶ್, ಶೆಟ್ಟಿವಾರಹಳ್ಳಿ ಶ್ರೀನಿವಾಸ್, ರಾಜೇಶ್, ಶಂಕರ್, ಚಂದ್ರಣ್ಣ, ಜಾವಿದ್ ಪಾಷ, ನುಗಿತಹಳ್ಳಿ ರವಿ ಮತ್ತಿತರರು ಇದ್ದರು.

PREV
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.
Read more Articles on

Recommended Stories

ಡಿಂಪಲ್ ಕ್ವೀನ್ ರಚಿತಾ ರಾಮ್ ಸ್ವೀಟ್ - 14
ಗಿಲ್ಲಿ ನಟ ಈಗ ಹೀರೋ ಹೊಸ ಸಿನಿಮಾಕ್ಕೆ ಕೆವಿಎನ್ ಸಾಥ್