;Resize=(412,232))
ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ ಟೀಸರ್ 5 ಭಾಷೆಗಳಲ್ಲಿ ಕೆವಿಎನ್ ಪ್ರೊಡಕ್ಷನ್ಸ್ ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿ ನಂ.1 ಟ್ರೆಂಡ್ ಆಗಿದೆ. 3 ಬಗೆಯ ಲುಕ್‌ನಲ್ಲಿ ಯಶ್ ಕಾಣಿಸಿಕೊಂಡಿದ್ದಾರೆ. ಅದರಲ್ಲಿ ಯುವಕನ ಲುಕ್ ಕುತೂಹಲ ಕೆರಳಿಸಿದೆ. ಇದರಲ್ಲಿ ರಾಯ ಹಾಗೂ ಅವನ ಮಗನ ಕಥೆ ಇರಬಹುದು ಎಂಬ ಊಹೆ ಹರಿದಾಡುತ್ತಿದೆ. ‘ಐ ಆಮ್ ಹೋಮ್ ಡ್ಯಾಡಿ’ ಎಂಬ ಯುವಕನ ಮಾತೂ ಇದಕ್ಕೆ ಪುಷ್ಠಿ ನೀಡುತ್ತದೆ.
ಈ ಹಿಂದೆ ಯಶ್ ಅವರ ‘ನಾನ್ ಬರೋವರ್ಗೂ ಬೇರೆಯವ್ರ ಹವಾ, ನಾನ್ ಬಂದ್ಮೇಲೆ ನಂದೇ ಹವಾ’ ಎಂಬ ಡೈಲಾಗ್, ಕೆಜಿಎಫ್‌ನ ‘ವೈಲೆನ್ಸ್’ ಡೈಲಾಗ್ ಸಿಕ್ಕಾಪಟ್ಟೆ ಫೇಮಸ್ ಆಗಿತ್ತು. ‘ಟಾಕ್ಸಿಕ್’ ಟೀಸರ್‌ನಲ್ಲಿರುವ, ‘ಇಟ್ಸ್ ಓವರ್, ವೆನ್ ಐ ಸೇ ಇಟ್ಸ್ ಓವರ್!’ ಅನ್ನುವ ಪವರ್‌ಫುಲ್ ಡೈಲಾಗ್ ಇದರ ಮುಂದುವರಿಕೆಯಂತಿದೆ. ಇದೇ ದಿನ ರಿಲೀಸ್ ಆಗುವ ‘ಧುರಂಧರ್’ ಸಿನಿಮಾಕ್ಕೆ ಟಾಂಗ್ ನೀಡುವ ರೀತಿಯಲ್ಲೂ ಈ ಡೈಲಾಗ್ ಬಳಕೆಯಾಗುತ್ತಿರುವುದು ವಿಶೇಷ.
ಈ ಟೀಸರ್‌ನಲ್ಲಿ ಯಶ್ ಅವರೇ ಹೈಲೈಟ್ ಆಗಿದ್ದು, ನಾಯಕಿಯರನ್ನು ತೋರಿಸಿಲ್ಲ. ಕೆಲವೆಡೆ ಅಸ್ಪಷ್ಟ ಚಹರೆಯಷ್ಟೇ ಇದೆ. ಟೀಸರ್ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ವಿವಿಧ ಭಾಷೆಗಳಲ್ಲಿ 1 ಕೋಟಿ ವೀಕ್ಷಣೆ ದಾಖಲಾಗಿದೆ.