‘ಉಪಾಧ್ಯಕ್ಷ’ ನಾಯಕಿ ಮಲೈಕಾ ವಸುಪಾಲ್‌ ಇದೀಗ ಝೈದ್‌ ಖಾನ್‌ ನಟನೆಯ ‘ಕಲ್ಟ್‌’ ಸಿನಿಮಾ ಟೀಮ್‌ಗೆ ಎಂಟ್ರಿ

KannadaprabhaNewsNetwork |  
Published : Sep 05, 2024, 12:37 AM ISTUpdated : Sep 05, 2024, 04:53 AM IST
Malaika Vasupal

ಸಾರಾಂಶ

‘ಉಪಾಧ್ಯಕ್ಷ’ ಖ್ಯಾತಿಯ ನಟಿ ಮಲೈಕಾ ವಸುಪಾಲ್‌, ಝೈದ್‌ ಖಾನ್‌ ನಟನೆಯ ‘ಕಲ್ಟ್‌’ ಸಿನಿಮಾದಲ್ಲಿ ಎರಡು ಶೇಡ್‌ ಇರುವ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ರಚಿತಾ ರಾಮ್‌ ಮತ್ತೊಬ್ಬ ನಾಯಕಿ.

 ಸಿನಿವಾರ್ತೆ

‘ಉಪಾಧ್ಯಕ್ಷ’ ಸಿನಿಮಾದ ನಾಯಕಿ ಮಲೈಕಾ ವಸುಪಾಲ್‌ ಇದೀಗ ಝೈದ್‌ ಖಾನ್‌ ನಟನೆಯ ‘ಕಲ್ಟ್‌’ ಸಿನಿಮಾ ಟೀಮ್‌ ಸೇರಿಕೊಂಡಿದ್ದಾರೆ. ಅನಿಲ್‌ ಕುಮಾರ್‌ ನಿರ್ದೇಶನದ ಈ ಸಿನಿಮಾದಲ್ಲಿ ಎರಡು ಶೇಡ್‌ ಇರುವ ಪಾತ್ರದಲ್ಲಿ ಮಲೈಕಾ ನಟಿಸಿದ್ದಾರೆ.

ಈ ಸಿನಿಮಾದ ನಾಯಕಿಯಾಗಿ ರಚಿತಾ ರಾಮ್‌ ಹೆಸರು ಈಗಾಗಲೇ ಘೋಷಣೆಯಾಗಿದ್ದು, ಮತ್ತೊಬ್ಬ ನಾಯಕಿಯಾಗಿ ಮಲೈಕಾ ನಟಿಸುತ್ತಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಮಲೈಕಾ, ‘ಈ ಸಿನಿಮಾದಲ್ಲಿ ನನ್ನ ಪಾತ್ರಕ್ಕೆ ಎರಡು ಶೇಡ್‌ ಇದೆ. ಅದರಲ್ಲಿ ಒಂದು ಸಾಂಪ್ರದಾಯಿಕ ಲುಕ್‌. ಅದಕ್ಕಾಗಿ ಭರತನಾಟ್ಯ, ಕಥಕ್‌ ನೃತ್ಯಗಳ ಎಕ್ಸ್‌ಪ್ರೆಶನ್‌ಗಳನ್ನು ಪ್ರಾಕ್ಟೀಸ್‌ ಮಾಡುತ್ತಿದ್ದೇನೆ. ಉಳಿದಂತೆ ನನ್ನ ಫಿಟ್‌ನೆಸ್‌ ಚೆನ್ನಾಗಿಯೇ ಇರುವ ಕಾರಣ ತೂಕ ಕಡಿಮೆ ಅಥವಾ ಹೆಚ್ಚು ಮಾಡುವ ಅವಶ್ಯಕತೆ ಇಲ್ಲ ಎಂದು ನಿರ್ದೇಶಕರೇ ಹೇಳಿದ್ದಾರೆ. ಅನಿಲ್‌ ಸರ್‌ ನಿರ್ದೇಶನದ ಉಪಾಧ್ಯಕ್ಷ ಸಿನಿಮಾದಲ್ಲಿ ನಾನು ನಟಿಸಿರುವ ಕಾರಣ ಅವರಿಗೆ ನನ್ನ ನಟನೆಯ ಶಕ್ತಿಯ ಬಗ್ಗೆ ಗೊತ್ತಿತ್ತು. ನನ್ನ ಸ್ಕಿಲ್‌ ಗುರುತಿಸುವ ಜೊತೆಗೆ ನಟನೆಯಲ್ಲಿ ಸ್ವಾತಂತ್ರ್ಯವನ್ನೂ ಕೊಟ್ಟಿದ್ದರು. ಅವರ ಜೊತೆಗೆ ಮತ್ತೆ ಕೆಲಸ ಮಾಡಲು ಖುಷಿ ಇದೆ. ಸೆಪ್ಟೆಂಬರ್, ಅಕ್ಟೋಬರ್‌ನಲ್ಲಿ ನನ್ನ ಭಾಗದ ಶೂಟಿಂಗ್‌ ನಡೆಯಲಿದೆ’ ಎಂದಿದ್ದಾರೆ.

‘ರಚಿತಾ ರಾಮ್‌ ಅವರಂಥಾ ಕಲಾವಿದೆಯ ಜೊತೆಗೆ ತೆರೆ ಹಂಚಿಕೊಳ್ಳಲು ಖುಷಿ ಇದೆ. ಅವರು ಇಂಡಸ್ಟ್ರಿಯಲ್ಲಿ ಸಾಕಷ್ಟು ಜನಪ್ರಿಯರಾಗಿರುವ ನಟಿ. ಈಗಷ್ಟೇ ಅಂಬೆಗಾಲಿಡುತ್ತಿರುವ ನನ್ನಂಥವರಿಗೆ ಅವರ ಜೊತೆ ನಟಿಸಲು ಅವಕಾಶ ಸಿಕ್ಕರೆ ಅದಕ್ಕಿಂತ ಖುಷಿ ಸಂಗತಿ ಇಲ್ಲ. ನಾನು ಕೇಳಿರುವ ಕಥೆಗಳಲ್ಲೇ ಈ ಸಿನಿಮಾ ಕಥೆ ವಿಭಿನ್ನ, ಇಂಟರೆಸ್ಟಿಂಗ್‌ ಆಗಿದೆ’ ಎಂದೂ ಮಲೈಕಾ ಹೇಳಿದ್ದಾರೆ.

ಲೋಕಿ ಸಿನಿಮಾ ಲಾಂಛನದಲ್ಲಿ ‘ಕಲ್ಟ್‌’ ಸಿನಿಮಾ ನಿರ್ಮಾಣವಾಗುತ್ತಿದೆ.

PREV
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.

Recommended Stories

ಟಾಕ್ಸಿಕ್ ಚಿತ್ರದ ಕಾರ್‌ ಸೀನ್‌ನಲ್ಲಿರೋ ನಟೇಲಿ ಬರ್ನ್‌ ಯಾರು?
ರಾಕಿಂಗ್‌ ಸ್ಟಾರ್‌ ಮುಂದಿನ ನಿರ್ದೇಶಕರಿಗೆ ಗೀತು ಮೋಹನ್‌ದಾಸ್‌ ಕಿವಿಮಾತು