ಯಶ್‌ ನಟನೆಯ ಟಾಕ್ಸಿಕ್‌ ಚಿತ್ರದಿಂದ ಹೊರನಡೆದ ಕರೀನಾ

KannadaprabhaNewsNetwork |  
Published : May 04, 2024, 12:39 AM ISTUpdated : May 04, 2024, 05:22 AM IST
Kareena Kapoor Khan 8 gym wear look

ಸಾರಾಂಶ

ಟಾಕ್ಸಿಕ್‌ ಸಿನಿಮಾದಲ್ಲಿ ಯಶ್‌ ಸೋದರಿ ಪಾತ್ರ ಮಾಡಬೇಕಿದ್ದ ಕರೀನಾ ಕಪೂರ್‌ ಇದೀಗ ಸಿನಿಮಾದಿಂದ ಹೊರನಡೆದಿದ್ದಾರೆ.

 ಸಿನಿವಾರ್ತೆ

ಯಶ್‌ ನಟನೆಯ ‘ಟಾಕ್ಸಿಕ್‌’ ಸಿನಿಮಾದಿಂದ ಬಾಲಿವುಡ್‌ ನಟಿ ಕರೀನಾ ಕಪೂರ್‌ ಹೊರನಡೆದಿದ್ದಾರೆ ಎನ್ನಲಾಗಿದೆ. ಅವರು ಈ ಸಿನಿಮಾದಲ್ಲಿ ಯಶ್‌ ಸಹೋದರಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿತ್ತು. ಆದರೆ ಇದೀಗ ಡೇಟ್ಸ್ ಹೊಂದಾಣಿಕೆಯಾಗದ ಕಾರಣ ಕರೀನಾ ಈ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಆಪ್ತ ಮೂಲಗಳು ತಿಳಿಸಿವೆ.

‘ಟಾಕ್ಸಿಕ್‌’ ಸಿನಿಮಾದ ಯಶ್‌ ಸಹೋದರಿಯದು ಪಾತ್ರ ಬಹಳ ಸ್ಟ್ರಾಂಗ್‌ ಹಾಗೂ ಚಾಲೆಂಜಿಂಗ್‌ ಪಾತ್ರವಾಗಿತ್ತು ಎನ್ನಲಾಗಿದೆ. ಕರೀನಾ ಅವರು ಈ ರೋಲ್‌ಗೆ ಸೂಕ್ತ ಅನಿಸಿದ ಕಾರಣ ಚಿತ್ರತಂಡ ಅವರನ್ನು ಸಂಪರ್ಕಿಸಿ ಒಪ್ಪಿಗೆ ಪಡೆಯುವಲ್ಲಿ ಯಶಸ್ವಿಯಾಗಿತ್ತು. ಆದರೆ ಇದೀಗ ಅವರ ಅಲಭ್ಯತೆ ಹಿನ್ನೆಲೆಯಲ್ಲಿ ಮತ್ತೊಬ್ಬ ಜನಪ್ರಿಯ ಪ್ಯಾನ್‌ ಇಂಡಿಯಾ ನಟಿಯ ಶೋಧದಲ್ಲಿ ಚಿತ್ರತಂಡ ನಿರತವಾಗಿದೆ.

PREV
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.

Recommended Stories

ಸಹನಟಿ, ಬದುಕಿಗೆ ಪ್ರೇಮ ರಶ್ಮಿಯಾದಳು! 14 ವರ್ಷದ ಪ್ರೀತಿಗೆ ಸದ್ಯದಲ್ಲೆ ಮದುವೆ ಬಂಧ - ಜೆ.ಪಿ. ತುಮಿನಾಡು
ಅನೌಷ್ಕಾ ಶಂಕರ್ ಸಂಗೀತ ಕಾರ್ಯಕ್ರಮದಲ್ಲಿ ಅರಿಜಿತ್ ಸಿಂಗ್