ಲೆಡೀಸ್ ಬಾರ್ ಚಿತ್ರಕ್ಕೆ 25 ದಿನಗಳನ್ನು ಪೂರೈಸಿದ್ದು, ಚಿತ್ರತಂಡ ಯಶಸ್ಸಿನ ಸಂಭ್ರಮವನ್ನು ಮಾಧ್ಯಮಗಳ ಮುಂದೆ ಹಂಚಿಕೊಂಡಿತು
ಕನ್ನಡಪ್ರಭ ಸಿನಿವಾರ್ತೆ
ಟಿ ಎಂ ಸೋಮರಾಜು ನಿರ್ಮಾಣ, ಮುತ್ತು ಎ ಎನ್ ನಿರ್ದೇಶನದ ‘ಲೇಡಿಸ್ ಬಾರ್’ ಚಿತ್ರ 25 ದಿನಗಳನ್ನು ಪೂರೈಸಿದ್ದು, ಚಿತ್ರತಂಡ ಸಂಭ್ರಮಾಚರಣೆ ಮಾಡಿದೆ. ಕಾರ್ಯಕ್ರಮಕ್ಕೆ ಹಿರಿಯ ನಟ ಅಶೋಕ್ ಆಗಮಿಸಿ ಶುಭ ಹಾರೈಸಿದರು.
ನಿರ್ದೇಶಕ ಮುತ್ತು ಎ ಎನ್, ‘ನಮ್ಮ ಸಿನಿಮಾ ತೆರೆಕಂಡಾಗ ತುಂಬಾ ಚಿತ್ರಗಳು ಬಿಡುಗಡೆ ಆಗಿದ್ದವು. ಆದರೂ ನಮ್ಮ ಚಿತ್ರ 25 ದಿನಗಳನ್ನು ಪೂರೈಸಿರುವುದು ನಮ್ಮ ದೊಡ್ಡ ಗೆಲುವು’ ಎಂದರು. ಹರೀಶ್ ರಾಜ್, ಕೆಂಪೇಗೌಡ, ಗಣೇಶ್ ರಾವ್, ಮೀನಾಕ್ಷಿ ಇದ್ದರು.
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.