ಲವ್ ಮಾಕ್‌ಟೇಲ್ 3 ಚಿತ್ರದ ಮೇಲೆ ಕೃತಿಚೌರ್ಯ ಆರೋಪ

Published : Mar 25, 2026, 12:39 PM IST
Love Mocktail 3 Movie

ಸಾರಾಂಶ

ಡಾರ್ಲಿಂಗ್‌ ಕೃಷ್ಣ ನಟನೆಯ ‘ಲವ್‌ ಮಾಕ್ಟೇಲ್‌ 3’ ಸಿನಿಮಾದ ಮೇಲೆ ಕೃತಿಚೌರ್ಯದ ಆರೋಪ ಕೇಳಿಬಂದಿದೆ. ‘ಮಾರಿಗೋಲ್ಡ್‌’ ನಿರ್ದೇಶಕ ರಾಘವೇಂದ್ರ ನಾಯಕ್‌ ಈ ಸಿನಿಮಾದ ದ್ವಿತೀಯಾರ್ಧದ ಕತೆ ತಮ್ಮದು ಎಂದು ಆರೋಪಿಸಿದ್ದಾರೆ.

  ಸಿನಿವಾರ್ತೆ

ಡಾರ್ಲಿಂಗ್‌ ಕೃಷ್ಣ ನಟನೆಯ ‘ಲವ್‌ ಮಾಕ್ಟೇಲ್‌ 3’ ಸಿನಿಮಾದ ಮೇಲೆ ಕೃತಿಚೌರ್ಯದ ಆರೋಪ ಕೇಳಿಬಂದಿದೆ. ‘ಮಾರಿಗೋಲ್ಡ್‌’ ನಿರ್ದೇಶಕ ರಾಘವೇಂದ್ರ ನಾಯಕ್‌ ಈ ಸಿನಿಮಾದ ದ್ವಿತೀಯಾರ್ಧದ ಕತೆ ತಮ್ಮದು ಎಂದು ಆರೋಪಿಸಿದ್ದಾರೆ.

ಈ ಕುರಿತು ವಿವರ ನೀಡಿರುವ ಅವರು, ‘ಮಾರಿಗೋಲ್ಡ್‌ ಸಿನಿಮಾ ಬಳಿಕ ಒಂದಿಷ್ಟು ಚಿತ್ರಗಳಿಗೆ ಸ್ಕ್ರಿಪ್ಟ್‌ ವರ್ಕ್‌ ಮಾಡುತ್ತಿದೆ. ಇದೇ ಸಂದರ್ಭ ನಿರ್ದೇಶಕ, ನಿರ್ಮಾಪಕ ಗುರು ದೇಶಪಾಂಡೆ ಅವರಿಗೆ ಕಥೆಯೊಂದನ್ನು ಹೇಳಿದ್ದೆ. ಅವರು ಅದನ್ನು ನಿರ್ದೇಶನ ಮಾಡಲು ಮುಂದಾಗಿ ನನಗೆ ಮುಂಗಡ ಹಣವನ್ನೂ ನೀಡಿದರು. 

6 ತಿಂಗಳಲ್ಲಿ ಸ್ಕ್ರೀನ್‌ಪ್ಲೇ ಮಾಡಿದೆವು

 6 ತಿಂಗಳಲ್ಲಿ ಸ್ಕ್ರೀನ್‌ಪ್ಲೇ ಮಾಡಿದೆವು. ರಘು ನಿಡುವಳ್ಳಿ ಸಂಭಾಷಣೆಯನ್ನೂ ಬರೆದರು. ನಂತರ ಡಾರ್ಲಿಂಗ್‌ ಕೃಷ್ಣ ಅವರ ಜೊತೆ ಸಿನಿಮಾ ಮಾಡುವ ಉದ್ದೇಶದಿಂದ ಅವರಿಗೆ ಸವಿಸ್ತಾರವಾಗಿ ಕಥೆ ಹೇಳಿದ್ದೆವು. ಕಥೆ ಕೇಳಿದ ಬಳಿಕ ಅವರು, ತಾನು ‘ಲವ್‌ ಮಾಕ್‌ಟೇಲ್‌ 3’ ಸಿನಿಮಾ ಮಾಡುತ್ತಿದ್ದು, ಅದರಲ್ಲೂ ಮಗುವಿನ ಕಥೆ ಇರುವ ಕಾರಣ ಈ ಕಥೆ ಮಾಡಲ್ಲ, ಬೇರೆ ಕಥೆ ಇದ್ದರೆ ಹೇಳಿ’ ಅಂದಿದ್ದರು. ಆ ಬಳಿಕ ಬೇರೆ ಬೇರೆ ಕಾರಣಕ್ಕೆ ಆ ಸಿನಿಮಾ ಕೆಲಸ ಮುಂದಕ್ಕೆ ಹೋಗಲಿಲ್ಲ. ಇದೀಗ ನೋಡಿದರೆ ‘ಲವ್‌ ಮಾಕ್‌ಟೇಲ್‌ 3’ ಸಿನಿಮಾದ ದ್ವಿತೀಯಾರ್ಧದಲ್ಲಿ ನಮ್ಮ ಕಥೆಯೇ ಇದೆ. ಕಥೆಯ ಪರಿಸರ, ಮಗುವಿನ ಲಿಂಗವಷ್ಟೇ ಬದಲಾಗಿದೆ’ ಎಂದು ಆರೋಪಿಸಿದ್ದಾರೆ.

ಇದಕ್ಕೆ ನಟ, ನಿರ್ದೇಶಕ ಡಾರ್ಲಿಂಗ್‌ ಕೃಷ್ಣ ಪ್ರತಿಕ್ರಿಯೆ ನೀಡಿದ್ದು, ‘ಈ ಸಿನಿಮಾಕ್ಕಾಗಿ ನಾನು, ನನ್ನ ಪತ್ನಿ ಮಿಲನಾ ಮತ್ತು ಯದು 4 ವರ್ಷ ಸವೆಸಿದ್ದೇವೆ. ಅವರು ಹೇಳಿದ್ದನ್ನೇ ಸಿನಿಮಾ ಮಾಡೋದಾದ್ರೆ ನಾವ್ಯಾಕೆ ಅಷ್ಟು ಸಮಯ ಒದ್ದಾಡಬೇಕಿತ್ತು.. ಹೀಗೆಲ್ಲ ಸೋಷಲ್‌ ಮೀಡಿಯಾದಲ್ಲಿ ಹೇಳಿಕೆ ನೀಡಿದ್ದರಿಂದ ನಮ್ಮ ಮಾನನಷ್ಟವಾಗಿದೆ. ಇದರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುತ್ತೇನೆ’ ಎಂದು ಹೇಳಿದ್ದಾರೆ.

PREV
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.
Read more Articles on

Recommended Stories

ದೇವರ ಅಪಹಾಸ್ಯಕ್ಕೆ ಕ್ಷಮೆ ಕೇಳುವೆ : ರಣವೀರ್‌
ಭಾವನಾ ರಾಮಣ್ಣ ಮಗಳ ಹೆಸರು ರುಕ್ಮಿಣಿ-ತನ್ನ ಅಜ್ಜಿಯ ಹೆಸರನ್ನೇ ಪುತ್ರಿಗಿಟ್ಟ ನಟಿ