ಫೋಟೋ ಸಿನಿಮಾ ಪ್ರೆಸೆಂಟ್‌ ಮಾಡುತ್ತಿರುವ ಪ್ರಕಾಶ್‌ ರಾಜ್‌

KannadaprabhaNewsNetwork |  
Published : Feb 18, 2024, 01:36 AM IST
ಫೋಟೋ | Kannada Prabha

ಸಾರಾಂಶ

ಕೋವಿಡ್‌ ಕಾಲದ ಮಾನವೀಯ ನೆಲೆಗಟ್ಟಿನ ಫೋಟೋ ಚಿತ್ರವನ್ನು ನಿರ್ದಿಗಂತ ಸಂಸ್ಥೆಯ ಮೂಲಕ ಪ್ರಕಾಶ್ ರಾಜ್ ಅರ್ಪಿಸುತ್ತಿದ್ದಾರೆ.

ಕನ್ನಡಪ್ರಭ ಸಿನಿವಾರ್ತೆಹಿಂದಿನ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರೇಕ್ಷಕರಿಂದ ಅತ್ಯುತ್ತಮ ಪ್ರತಿಕ್ರಿಯೆ ಪಡೆದ ‘ಫೋಟೋ’ ಚಿತ್ರ ಥಿಯೇಟರ್‌ಗೆ ಬರಲು ಸಜ್ಜಾಗಿದೆ. ಈ ಸಿನಿಮಾವನ್ನು ಬಹುಭಾಷಾ ನಟ ಪ್ರಕಾಶ್‌ ರಾಜ್‌ ಅರ್ಪಣೆ ಮಾಡುತ್ತಿದ್ದಾರೆ. ಕೋವಿಡ್‌ ಕಾಲದ ಮಾನವೀಯ ನೆಲೆಗಟ್ಟಿನ ಈ ಚಿತ್ರವನ್ನು ನಿರ್ದಿಗಂತ ಸಂಸ್ಥೆಯ ಮೂಲಕ ಪ್ರಕಾಶ್ ರಾಜ್ ಅರ್ಪಿಸುತ್ತಿದ್ದಾರೆ. ಇದು ರಾಯಚೂರು ಮೂಲದ ಯುವ ನಿರ್ದೇಶಕ ಉತ್ಸವ್ ಗೋನವಾರ ಚೊಚ್ಚಲ ಪ್ರಯತ್ನ. ಲಾಕ್‌ಡೌನ್‌ ಕಾಲಘಟ್ಟದ ಈ ಸಿನಿಮಾದಲ್ಲಿ ಅಪ್ಪ-ಮಗನ ಬಾಂಧವ್ಯ, ಭಾವನಾತ್ಮಕ ಎಳೆ ಇದೆ.

ಮಸಾರಿ ಟಾಕೀಸ್ ಬ್ಯಾನರ್‌ನಡಿ ನಿರ್ಮಾಣವಾಗಿರುವ ಈ ಸಿನಿಮಾದಲ್ಲಿ ಮಹಾದೇವ ಹಡಪದ್, ಸಂಧ್ಯಾ ಅರಕೆರೆ, ಜಹಾಂಗೀರ್ ಮತ್ತು ವೀರೇಶ್ ಗೋನವಾರ ನಟಿಸಿದ್ದಾರೆ. ದಿನೇಶ್ ದಿವಾಕರನ್ ಛಾಯಾಗ್ರಹಣ ಮತ್ತು ರವಿ ಹಿರೇಮಠ್ ಹಿನ್ನೆಲೆ ಸಂಗೀತ, ಶಿವರಾಜ್ ಮೆಹೂ ಸಂಕಲನವಿದೆ.

PREV
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.

Recommended Stories

ಬಾಲಿವುಡ್‌ ನಟಿ ದೀಪಿಕಾ ಬ್ಯಾಗ್‌ ತಡಕಾಡಿದರೆ ಸಿಗುವ ವಿಚಿತ್ರ ವಸ್ತು ಏನು ಗೊತ್ತಾ
ಬೆಂಗಳೂರು ಚಿತ್ರೋತ್ಸವದಲ್ಲಿ ಇಂದು ನೋಡಬಹುದಾದ ಅತ್ಯುತ್ತಮ 10 ಸಿನಿಮಾಗಳು