ಚೆಂಡೆಯ ರೂಪಕದಲ್ಲಿ ಪೀಟರ್‌ ಲೈಫ್‌ಸ್ಟೋರಿ : ರಾಜೇಶ್‌ ಧ್ರುವ

Published : Apr 10, 2026, 02:28 PM IST
Rajesh Dhruva

ಸಾರಾಂಶ

ಸುಕೇಶ್‌ ಶೆಟ್ಟಿ ನಿರ್ದೇಶನ, ರವಿ ಹಿರೇಮಠ್‌, ರಾಕೇಶ್‌ ಹೆಗ್ಗದ್ದೆ ನಿರ್ಮಾಣ, ರಾಜೇಶ್‌ ಧ್ರುವ, ರವೀಷ್ಕಾ ಶೆಟ್ಟಿ, ಡಾ.ಜಾನ್ವಿ ರಾಯಲ ನಟನೆಯ ‘ಪೀಟರ್‌’ ಸಿನಿಮಾ ಇಂದು ಬಿಡುಗಡೆ. ಈ ಹಿನ್ನೆಲೆಯಲ್ಲಿ ಸಿನಿಮಾ ಬಗ್ಗೆ ರಾಜೇಶ್‌ ಧ್ರುವ ಮಾತು

ಪೀಟರ್‌ ಸಿನಿಮಾ ಇವತ್ತೇ ರಿಲೀಸ್‌

ಸುಕೇಶ್‌ ಶೆಟ್ಟಿ ನಿರ್ದೇಶನ, ರವಿ ಹಿರೇಮಠ್‌, ರಾಕೇಶ್‌ ಹೆಗ್ಗದ್ದೆ ನಿರ್ಮಾಣ, ರಾಜೇಶ್‌ ಧ್ರುವ, ರವೀಷ್ಕಾ ಶೆಟ್ಟಿ, ಡಾ.ಜಾನ್ವಿ ರಾಯಲ ನಟನೆಯ ‘ಪೀಟರ್‌’ ಸಿನಿಮಾ ಇಂದು ಬಿಡುಗಡೆ. ಈ ಹಿನ್ನೆಲೆಯಲ್ಲಿ ಸಿನಿಮಾ ಬಗ್ಗೆ ರಾಜೇಶ್‌ ಧ್ರುವ ಮಾತು.

- ಪೀಟರ್‌ ಸಿನಿಮಾದ ಮುಖ್ಯ ಹೈಲೈಟ್‌ ಅಂದರೆ ಬದುಕಿನ ಕಟುವಾಸ್ತವವನ್ನು ಭಿನ್ನ ಶೈಲಿಯಲ್ಲಿ ನಿರೂಪಿಸಿರುವುದು. ಇಲ್ಲಿ ಯಾವುದೂ ಫೇಕ್‌ ಅನಿಸೋದಿಲ್ಲ. ಪಾತ್ರ, ಸನ್ನಿವೇಶ, ಪರಿಸರ ಎಲ್ಲವೂ ಬಹಳ ಸಹಜವಾಗಿ ಜೀವಂತಿಕೆಯಿಂದ ಮೂಡಿಬಂದಿದೆ.

- ನಾನು ನಿರ್ವಹಿಸಿರುವ ಪಾತ್ರ ಪೀಟರ್‌. ಆತ ಮಾನವೀಯ ಗುಣದ, ಹಣದ ಲಾಲಸೆ ಇಲ್ಲದ, ಗೆಳೆತನಕ್ಕೆ ಮಹತ್ವ ಕೊಡುವ ಹುಡುಗ. ಆತನ ಬದುಕಿನಲ್ಲೂ ಸಂಬಂಧಗಳ ಸಂಕೀರ್ಣತೆ, ಪ್ರೇಮದ ಬಿಸುಪುಗಳೆಲ್ಲ ಇವೆ. ಅದನ್ನೂ ಮೀರಿ ಚೆಂಡೆ ಅವನ ಎಕ್ಸ್‌ಪ್ರೆಶನ್‌ ಆಗಿದೆ. ಆ ಚೆಂಡೆಯ ಪೆಟ್ಟು ಬದುಕಿನ ಮೇಲೂ ಬಿದ್ದಾಗ ಹೇಗೆ ಎಲ್ಲವೂ ಬದಲಾಗುತ್ತದೆ ಎಂಬುದು ಸಿನಿಮಾದ ಒನ್‌ಲೈನ್‌.

- ಇಡೀ ಸಿನಿಮಾ ಹಳ್ಳಿಯಲ್ಲೇ ನಡೆಯುತ್ತದೆ. ಅಲ್ಲಿನ ಸಣ್ಣ ಸಣ್ಣ ವಿವರಗಳು, ಜನರ ಮನಸ್ಥಿತಿ, ಪ್ರೇಮ, ಗೆಳೆತನ, ಲಾಲಸೆ, ದ್ವೇಷ ಎಲ್ಲವೂ ಸಿನಿಮಾದಲ್ಲಿ ಬರುತ್ತದೆ.

- ಚಿತ್ರದ ಆರಂಭದಿಂದಲೂ ನಾವು ಪ್ರೇಕ್ಷಕರ ಜೊತೆಗೆ ಕನೆಕ್ಷನ್‌ ಇಟ್ಟುಕೊಂಡಿದ್ದೇವೆ. ಹೀಗಾಗಿ ಈ ಸಿನಿಮಾವನ್ನು ಜನ ಪ್ರೀತಿಯಿಂದ ನೋಡುವ ಭರವಸೆ ಇದೆ. ಪ್ರೀಮಿಯರ್‌ ಶೋಗಳಿಗೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿರುವುದು ನಮ್ಮ ಭರವಸೆ ಹೆಚ್ಚಿಸಿದೆ.

ಸದ್ಯಕ್ಕೆ ಕಿರುತೆರೆ, ಹಿರಿತೆರೆ ಎಂಬ ಭಿನ್ನತೆ ಇಲ್ಲ

- ನನ್ನ ವೈಯಕ್ತಿಕ ವಿಚಾರಕ್ಕೆ ಬಂದರೆ ಕಿರುತೆರೆ ಹಿನ್ನೆಲೆಯಿಂದ ಬಂದಿರುವ ನನಗೆ ಸದ್ಯಕ್ಕೆ ಕಿರುತೆರೆ, ಹಿರಿತೆರೆ ಎಂಬ ಭಿನ್ನತೆ ಇಲ್ಲ. ಪ್ರತಿಭೆಗೆ ನೀರೆರೆಯುವಂಥಾ ಕೆಲಸ ಮಾಡುತ್ತ ಹೋಗಬೇಕು, ಪ್ರಾಮಾಣಿಕತೆಯಿಂದ ಬೆಳೆಯಬೇಕು ಅನ್ನುವ ಆಸೆ ಇದೆ.

PREV
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.
Read more Articles on

Recommended Stories

ಆಂಜನೇಯಸ್ವಾಮಿಯ ಬ್ರಹ್ಮರಥೋತ್ಸವ ಸಂಪನ್ನ
ರಾಜ್ಯ ಸಮ್ಮೇಳನಕ್ಕೆ 5 ಸಾವಿರ ಪತ್ರಕರ್ತರು: ಶಿವಾನಂದ ತಗಡೂರು